Ukraine : ರಷ್ಯಾ-ಉಕ್ರೇನ್ ಯುಧ್ಧ – ಕಿವ್ ನಲ್ಲಿ ಸಿಲುಕಿದ ಕಲಬುರಗಿ ಯುವತಿ
ಕಲಬುರಗಿ : ರಷ್ಯಾ-ಉಕ್ರೇನ್ ಯುಧ್ಧ ನಡೆಯುತ್ತಿದ್ದು , ಸಂಘರ್ಷದಿಂದಾಗಿ ಉಕ್ರೇನ್ ಕಾದ ಕೆಂಡದಂತಾಗಿದೆ..
ಆದ್ರೆ ಅಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಹೇಳಲು ಅಸಾಧ್ಯವಾಗಿದೆ..
ಭಾರತ ಸರ್ಕಾರ ನಮ್ಮ ದೇಶದವರನ್ನ ವಾಪಸ್ ಕರೆಸಿಕೊಳ್ಳುವ ಕಾರ್ಯತಂತ್ರದಲ್ಲಿ ತೊಡಗಿದೆ..
ಉಕ್ರೇನ್ ನಲ್ಲಿ ನಮ್ಮ ಕರ್ನಾಟಕದವರೂ ಸಿಲುಕಿದ್ದಾರೆ.. ಉಕ್ರೇನ್ ನ ಕಿವ್ ನಲ್ಲಿರೋ ಕಲಬುರಗಿ ಯುವತಿ ಸಿಲುಕಿದ್ದಾಲೆ..
ಕಿವ್ ನಲ್ಲಿ MBBS ಓದುತ್ತಿರುವ ವಿದ್ಯಾರ್ಥಿನಿ ಜೀವಿತಾ ಅಲ್ಲಿ ಸಿಲುಕಿದ್ದಾಳೆ..
ಆಕೆಯ ತಾಯಿ ಕಲಬುರಗಿ ವಿವಿಯ ಬಯೋ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ..
ಜೀವಿತಾ ಕಳೆದ ಸೆಪ್ಟೆಂಬರ್ ನಲ್ಲಿ ಕಿವ್ ಗೆ ಹೋಗಿದ್ದರು..
ಸದ್ಯ ತಾಯಿ ಜೊತೆಗೆ ಜೀವಿತಾ ಮಾತನಾಡಿದ್ದು ಸುರಕ್ಷಿತವಾಗಿರುವ ಮಾಹಿತಿ ಲಭ್ಯವಾಗಿದೆ.








