Hijab Controvercy : ಹಿಜಾಬ್ ಕಳಚಿ ಕಾಲೇಜಿನೊಳಗೆ ಪ್ರವೇಶಿಸುವಂತೆ ಪಟ್ಟು ಹಿಡಿದಿರುವುದನ್ನು ವಿರೋಧಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ
ಚಿತ್ರದುರ್ಗ: ಹಿಜಾಬ್ ವಿವಾದ ಇನ್ನೇನು ತಣ್ಣಗಾಯಿತು ಎನ್ನುವ ಹೊತ್ತಲ್ಲೇ , ಹಿಜಾಬ್ ಕಳಚಿ ಕಾಲೇಜಿನೊಳಗೆ ಪ್ರವೇಶಿಸುವಂತೆ ಪಟ್ಟು ಹಿಡಿದಿರುವುದನ್ನು ವಿರೋಧಿಸಿ SRS ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಇಂದೂ ಕೂಡ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಹೈ-ಕೋರ್ಟ್ ಆದೇಶವನ್ನು ನಾವು ಪಾಲನೆ ಮಾಡುತ್ತೇವೆ. ಆದರೆ ಕಾಲೇಜಿನಲ್ಲಿ ನಿಗಧಿತ ಕೊಠಡಿಗಳಿಗೆ ಹಿಜಾಬ್ ಕಳಚಿಟ್ಟು ತರಗತಿಗಳಿಗೆ ಹೋಗುತ್ತೇವೆ ಎಂದಿದ್ದಾರೆ.. ಆದ್ರೆ ಎಸ್ ಆರ್ ಎಸ್ ಆಡಳಿತ ಮಂಡಳಿಯವರು ಕಳೆದ ಒಂದು ವಾರದಿಂದ ನಮ್ಮನ್ನ ಗೇಟಿನಿಂದ ಹೊರಗಡೆ ನಿಲ್ಲಿಸಿ ಅವಮಾನ ಮಾಡುತ್ತಿದ್ದಾರೆ. ಇದರಿಂದ ನಮ್ಮ ಶಿಕ್ಷಣ ಹಾಗೂ ಪರೀಕ್ಷೆಗೆ ತೊಂದರೆಯಾಗುತ್ತಿದೆ.
ಹಾಗಾಗಿ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಕಾಲೇಜಿನೊಳಗೆ ಹೋಗಲು ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿಕೊಂಡಿದ್ದಾರೆ.








