IPL 2022 | ಈ ಬಾರಿಯ ಐಪಿಎಲ್ ನ ಕಂಪ್ಲೀಟ್ ಡಿಟೈಲ್ಸ್..!
ಎರಡು ಹೊಸ ತಂಡಗಳ ಆಗಮನದಿಂದಾಗಿ ಈ ಬಾರಿಯ ಐಪಿಎಲ್ ಈ ಮೊದಲಿಗಿಂತಳೂ ರಸವತ್ತಾಗಿರಲಿದೆ. ಜೊತೆಗೆ ಪಂದ್ಯಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಬಾರಿ ಐಪಿಎಲ್ ನಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ.
ಇಲ್ಲಿಯವರೆಗೆ ಪ್ರತಿ ತಂಡವು ಲೀಸ್ ಹಂತದಲ್ಲಿ 14 ಪಂದ್ಯಗಳನ್ನು ಆಡುತ್ತಿದ್ದವು. ಈಗಲೂ ಪ್ರತಿ ತಂಡವು ಗರಿಷ್ಠ 14 ಪಂದ್ಯಗಳನ್ನು ಆಡುತ್ತಿದ್ದು, ಫಾರ್ಮೆಟ್ ನಲ್ಲಿ ಸ್ವಲ್ಪ ಬದಲಾವಣೆಯಾಗಿದೆ. . ಐಪಿಎಲ್ ಮಾರ್ಚ್ 26 ರಿಂದ ಮೇ 29 ರವರೆಗೆ ನಡೆಯಲಿದೆ.
ಹೇಗೆ ಆಡುತ್ತಾರೆ..?
ಪ್ರತಿ ತಂಡವು ತಮ್ಮ ಗುಂಪಿನ ನಾಲ್ಕು ತಂಡಗಳ ವಿರುದ್ಧ ಎರಡು ಪಂದ್ಯಗಳನ್ನು ಮತ್ತು ಇನ್ನೊಂದು ಗುಂಪಿನಲ್ಲಿ ಅದೇ ಸ್ಥಾನದಲ್ಲಿರುವ ತಂಡದ ವಿರುದ್ಧ ಎರಡು ಪಂದ್ಯಗಳನ್ನಾಡಲಿದೆ. ಇವು 10 ಪಂದ್ಯಗಳಾಗುತ್ತವೆ. ಬೇರೆ ಗುಂಪಿನಲ್ಲಿರುವ ತಂಡಗಳೊಂದಿಗೆ ಒಂದೊಂದು ಪಂದ್ಯ ಆಡಬೇಕಾಗುತ್ತದೆ. ಹೀಗೆ ಒಟ್ಟು 14 ಪಂದ್ಯಗಳು ನಡೆಯಲಿವೆ. ಉದಾಹರಣೆಗೆ, ಮುಂಬೈ ಇಂಡಿಯನ್ಸ್ ಎ ಗುಂಪಿನಲ್ಲಿ ನಾಲ್ಕು ತಂಡಗಳನ್ನು ಮತ್ತು ಅಗ್ರ ಶ್ರೇಯಾಂಕದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬಿ ಗುಂಪಿನಲ್ಲಿ ಎರಡು ಪಂದ್ಯಗಳನ್ನು ಎದುರಿಸಲಿದೆ. ಇನ್ನೂಳಿದ ನಾಲ್ಕು ತಂಡಗಳೊಂದಿಗೆ ಒಂದೊಂದು ಪಂದ್ಯವನ್ನಾಡಲಿದೆ.
ಎಷ್ಟು ಪಂದ್ಯಗಳಿವೆ?
70 ಲೀಗ್ ಪಂದ್ಯಗಳಲ್ಲಿ 20 ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ, 20 ಮುಂಬೈ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ, 15 ಮುಂಬೈ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮತ್ತು 15 ಪುಣೆ ಸ್ಟೇಡಿಯಂನಲ್ಲಿ ನಡೆಯಲಿವೆ. ಅಹಮದಾಬಾದ್ನಲ್ಲಿ ನಾಲ್ಕು ಪ್ಲೇ-ಆಫ್ ಪಂದ್ಯಗಳು ನಡೆಯುವ ಸಾಧ್ಯತೆಯಿದೆ.
ಯಾವ ಗುಂಪಿನಲ್ಲಿ ಯಾರಿದ್ದಾರೆ?
ಐಪಿಎಲ್ನಲ್ಲಿ ಆಯಾ ತಂಡದ ದಾಖಲೆಗಳ ಆಧಾರದ ಮೇಲೆ ಪ್ರತಿ ತಂಡಕ್ಕೆ ಸೀಡಿಂಗ್ ಅನ್ನು ನಿಗದಿಪಡಿಸಲಾಗಿದೆ. ಇದು ಗೆದ್ದ ಪ್ರಶಸ್ತಿಗಳ ಸಂಖ್ಯೆ ಮತ್ತು ಫೈನಲಿಸ್ಟ್ಗಳ ಸಂಖ್ಯೆಯನ್ನು ಆಧರಿಸಿದೆ. ಅದರಂತೆ 1ನೇ ಶ್ರೇಯಾಂಕದ ತಂಡ ‘ಎ’ ಗುಂಪಿನಲ್ಲಿ, ಎರಡನೇ ಶ್ರೇಯಾಂಕದ ‘ಬಿ’ ಗುಂಪಿನಲ್ಲಿ… ಹೀಗೆ ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು.
ಗುಂಪು ಎ:
ಮುಂಬೈ ಇಂಡಿಯನ್ಸ್ (ಸೀಡಿಂಗ್ – 1),
ಕೋಲ್ಕತ್ತಾ ನೈಟ್ ರೈಡರ್ಸ್ (3),
ರಾಜಸ್ಥಾನ್ ರಾಯಲ್ಸ್ (5),
ಡೆಲ್ಲಿ ಕ್ಯಾಪಿಟಲ್ಸ್ (7),
ಲಕ್ನೋ ಸೂಪರ್ ಜೈಂಟ್ಸ್ (9).
‘ಬಿ’ ಗುಂಪು: ಚೆನ್ನೈ ಸೂಪರ್ ಕಿಂಗ್ಸ್ (2),
ಸನ್ರೈಸರ್ಸ್ ಹೈದರಾಬಾದ್ (4),
ರಾಯಲ್ ಚಾಲೆಂಜರ್ಸ್ ಬೆಂಗಳೂರು (6),
ಪಂಜಾಬ್ ಕಿಂಗ್ಸ್ (8),
ಗುಜರಾತ್ ಟೈಟಾನ್ಸ್ (10).