Shane warne | ಆ ತಂಡಕ್ಕೆ ಹೆಡ್ ಕೋಚ್.. ನನ್ನ ಟಾರ್ಗೆಟ್
ಇಂಗ್ಲೆಂಡ್ ತಂಡಕ್ಕೆ ಹೆಡ್ ಕೋಚ್ ಆಗಲು ನಾನು ಸಿದ್ಧವಾಗಿದ್ದೇನೆ. ನಾನು ತಂಡವನ್ನು ಗೆಲುವಿನತ್ತ ಕೊಂಡೆಯ್ಯಬಲ್ಲೆ ಎಂದು ಆಸ್ಟ್ರೇಲಿಯಾದ ದಿಗ್ಗಜ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ತಿಳಿಸಿದ್ದಾರೆ.
ಆಶಸ್ ಸರಣಿಯಲ್ಲಿ ಹೀನಾಯ ಸೋಲಿನ ನಂತರ ಕ್ರಿಸ್ ಸಿಲ್ವರ್‌ವುಡ್ ಇಂಗ್ಲೆಂಡ್ ಮುಖ್ಯ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಪಾಲ್ ಕಾಲಿಂಗ್ವುಡ್ ಹಂಗಾಮಿ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸುತ್ತಿದ್ದಾರೆ.
ಆದರೆ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮುಖ್ಯ ಕೋಚ್ ಹುದ್ದೆಗೆ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.
ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರು ಇಂಗ್ಲೆಂಡ್ ತಂಡದ ಮುಂದಿನ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ.
ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್.. ದಿ ಹಂಡ್ರೆಡ್ ಲೀಗ್‌ನಲ್ಲಿ ಲಂಡನ್ ಸ್ಪಿರಿಟ್ ತಂಡಗಳಿಗೆ ವಾರ್ನ್ ಮಾರ್ಗದರ್ಶಕರಾಗಿದ್ದಾರೆ.
‘ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲು ನಾನು ಸಿದ್ಧನಿದ್ದೇನೆ. ನಾನು ತಂಡವನ್ನು ಗೆಲುವಿನತ್ತ ಕೊಂಡೊಯ್ಯಬಲ್ಲೆ ಎಂದು ಭಾವಿಸುತ್ತೇನೆ.
ಇಂಗ್ಲೆಂಡಿನಲ್ಲಿ ಸಾಕಷ್ಟು ಅತ್ಯುತ್ತಮ ಆಟಗಾರರಿದ್ದಾರೆ. ಮೂಲಭೂತವಾಗಿ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರೆ ಸಾಕು.
ಅದೇ ರೀತಿ ತಂಡವು ಅತ್ಯುತ್ತಮ ಬೌಲರ್‌ಗಳ ಜೊತೆಗೆ ಫೀಲ್ಡರ್‌ಗಳನ್ನು ಹೊಂದಿದೆ. ಆದರೆ ಇದೀಗ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ,” ಎಂದು ವಾರ್ನರ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡ ಇಂಗ್ಲೆಂಡ್ ತಂಡದ ಕೋಚ್ ಹುದ್ದೆಗೆ ಪೈಪೋಟಿ ನಡೆಸುತ್ತಿದ್ದಾರೆ.
shane-warne-englands-next-head-coach saaksha tv









