Kolar | ಕೈ ಕೊಟ್ಟ ಕೆಂಪು ಚಿನ್ನ… ಕೆಜಿಗೆ 2 ರುಪಾಯಿ
ಕೋಲಾರ : ಚಿನ್ನದ ನಾಡು ಕೋಲಾರ ಜಿಲ್ಲೆಯ ರೈತರಿಗೆ ಕೆಂಪು ಚಿನ್ನ ಕೈ ಕೊಟ್ಟಿದೆ. ಒಂದೇ ಒಂದು ತಿಂಗಳ ಅಂತರದಲ್ಲಿ ಟೊಮ್ಯಾಟೋ ಬೆಲೆ ಪಾತಾಳಕ್ಕೆ ಕುಸಿದಿದೆ.
ಕಳೆದ ತಿಂಗಳಲ್ಲಿ 15 ಕೆಜಿಯ ಒಂದು ಬಾಕ್ಸ್ ಟೊಮ್ಯಾಟೋ ಬೆಲೆ ಒಂದು ಸಾವಿರ ದಾಟಿತ್ತು. ಆದರೆ ಒಂದೇ ತಿಂಗಳ ಅಂತರದಲ್ಲಿ ಟೊಮ್ಯಾಟೋ ಬೆಲೆ ಪಾತಾಳಕ್ಕೆ ಕುಸಿದಿದೆ.
15 ಕೆಜಿಯ ಒಂದು ಬಾಕ್ಸ್ ಟೊಮ್ಯಾಟೊ 10 ರೂಪಾಯಿಗೆ ಕುಸಿದು ಬಿದ್ದಿದೆ. ಅಂದರೇ ಒಂದು ಕೆಜಿ ಟೊಮ್ಯಾಟೊ ಬೆಲೆ ಕೇವಲ ಎರಡು ರೂಪಾಯಿಯಿಂದ ಆರಂಭವಾಗುತ್ತಿದೆ.
ಇದರಿಂದ ಟೊಮ್ಯಾಟೋ ಬೆಳೆದ ರೈತರು ಕಂಗಾಲಾಗಿದ್ದಾರೆ.
ಅಂದಹಾಗೆ ಕೋಲಾರ ಜಿಲ್ಲೆಯೊಂದರಲ್ಲಿಯೇ ಅಂದಾಜು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊವನ್ನು ಬೆಳೆಯುತ್ತಾರೆ.
ಸಾವಿರಾರು ಸಂಖ್ಯೆಯಲ್ಲಿ ರೈತರು ತಾವು ಬೆಳೆದ ಟೊಮ್ಯಾಟೋವನ್ನು ಕೊಲಾರದ ಎಪಿಎಂಸಿ ಮಾರುಕಟ್ಟೆಗೆ ತರುತ್ತಾರೆ.
ಪರಿಣಾಮ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಟೊಮ್ಯಾಟೊ ಆವಕ ಬರುತ್ತಿದೆ.
ಜೊತೆಗೆ ಹೊರ ರಾಜ್ಯಗಳಲ್ಲಿ ಟೊಮ್ಯಾಟೋ ಬೆಳೆಯುತ್ತಿರುವುದರಿಂದ ಬೇಡಿಕೆ ಕಡಿಮೆಯಾಗಿ ಟೊಮ್ಯಾಟೊ ಬೆಲೆ ತೀವ್ರ ಕುಸಿತ ಕಂಡಿದೆ.
ಹೀಗಾಗಿ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Tomato price dropped: farmers facing problems in kolar









