ಟೊಮ್ಯಾಟೋ ಬೆಲೆ ಕೇಳಿ ಕೆಂಪೇರಿದ ಗ್ರಾಹಕರು
ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಹಾಗಾಗಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿಗಳು ಬರುತ್ತಿವೆ ಇದರಿಂದ ರಾಜ್ಯದಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಇನ್ನೂ ಟೊಮ್ಯಾಟೋ ಬೆಲೆ ಕೇಳಿದ್ರೆ ಸಾಕು ಬೆಂಗಳೂರು ವಳಿಗಿಂತ ಜಾಸ್ತಿ ನಡುಗಿಸುತ್ತಿದದೆ.
ಕರ್ನಾಟದಲ್ಲಿ ಕೋಲಾರ ಟೊಮ್ಯಾಟೋ ಮಾರುಕಟ್ಟೆಗೆ ಹೆಸರುವಾಸಿಯಾಗಿದೆ. ಕೊಲಾರದಲ್ಲಿ ಟೊಮ್ಯಾಟೋ ಬೆಳೆ ಸಾರ್ವಕಾಲಿಕ ದಾಖಲೆ ಕಂಡಿದೆ. 15 ಕೆ ಜಿ ಬಾಕ್ಸ್ ಗೆ 3100 ರುಪಾಯಿ, ಕೆ ಜಿ ಗೆ 200 ರೂ ದರದಲ್ಲಿ ಹರಾಜಾಗಿದೆ.
ಪೆಟ್ರೋಲ್ ರೇಟ್ ಗಿಂತಲೂ ಹೆಚ್ಚಾಗಿ ಟೊಮ್ಯಾಟೋ ಬೆಲೆ ಜಾಸ್ತಿ ಸದ್ದುಮಾಡುತ್ತಿದೆ. ಟೊಮ್ಯಾಟೋ ಬೆಲೆ ಜಾಸ್ತಿಯಾದಾಗಿನಿಂದ ನೆಟ್ಟಿಗರು ವಿವಿಧ ರೀತಿಯ ಜೋಕ್ ಗಳನ್ನ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಡುತ್ತಿದ್ದಾರೆ.
ಮಳೆ ಕಡಿಮೆ ಆಗಿರುವ ಕಾರಣ ಮುಂದೆ ಮಾರುಕಟ್ಟೆ ಚೇತರಿಸಿಕೊಳ್ಳಲಿದ್ದು, ಮಾಲು ಬರುವುದು ಶುರುವಾದ ನಂತರ ಬೆಲೆ ಕುಸಿಯಲಿದೆ ಎಂಬುದು ತರಕಾರಿ ಮಾರಾಟಗಾರ ಅಭಿಪ್ರಾಯವಾಗಿದೆ.
ಅಂಬರೀಶ್ ಪುಣ್ಯಸ್ಮರಣೆ ನಮನ ಸಲ್ಲಿಸಿದ ಚಿತ್ರರಂಗದ ಗಣ್ಯರು








