ADVERTISEMENT
Thursday, August 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ದೇಶವನ್ನು ಪ್ರೀತಿಸುವುದು ಅಂಧಭಕ್ತಿಯಾದರೆ ನಾನು ಅಂಧಭಕ್ತೆ: ನಟಿ ಇಶಾ ಕೊಪ್ಪಿಕರ್ ಖಡಕ್ ಪೋಸ್ಟ್

Shwetha by Shwetha
August 20, 2026
in ದೇಶ - ವಿದೇಶ, National, Newsbeat
Share on FacebookShare on TwitterShare on WhatsappShare on Telegram

ಮುಂಬೈ: ಕನ್ನಡದ ‘ಸೂರ್ಯವಂಶ’ ಸೇರಿದಂತೆ ಬಹುಭಾಷಾ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿರುವ ಖ್ಯಾತ ನಟಿ ಇಶಾ ಕೊಪ್ಪಿಕರ್ ಇದೀಗ ತಮ್ಮ ಸಾಮಾಜಿಕ ಜಾಲತಾಣದ ವೀಡಿಯೊ ಮೂಲಕ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ತಾವು ಹೆಮ್ಮೆಯ ‘ಅಂಧಭಕ್ತೆ’ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದು, ಈ ವಿಡಿಯೋ ಸದ್ಯ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ತಮ್ಮ ದೇಶದ ಬೆಳವಣಿಗೆ ಮತ್ತು ಪ್ರಗತಿಯನ್ನು ಕಂಡು ಹೆಮ್ಮೆಪಡುವುದೇ ಭಕ್ತಿ ಎಂದಾದರೆ, ಅಂತಹ ಭಕ್ತೆ ಅಥವಾ ಅಂಧಭಕ್ತೆ ಎನ್ನಿಸಿಕೊಳ್ಳಲು ನನಗೆ ಯಾವುದೇ ಮುಜುಗರವಿಲ್ಲ ಮತ್ತು ಹೆಮ್ಮೆಯಿದೆ ಎಂದು 49 ವರ್ಷದ ನಟಿ ಇಶಾ ಸ್ಪಷ್ಟಪಡಿಸಿದ್ದಾರೆ.

Related posts

ಕ್ರಿಮಿನಾಶಕ ಸಿಂಪಡಿಸುವ ರೈತರ ಆರೋಗ್ಯಕ್ಕೆ ಅಪಾಯ? KIMS ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

ಕ್ರಿಮಿನಾಶಕ ಸಿಂಪಡಿಸುವ ರೈತರ ಆರೋಗ್ಯಕ್ಕೆ ಅಪಾಯ? KIMS ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

August 20, 2026
ಇರಾನ್ ವಿರುದ್ಧ UAE ಕಠಿಣ ಕ್ರಮ; ಎಲ್ಲಾ ವ್ಯಾಪಾರ, ಹಣಕಾಸು ವಹಿವಾಟು ಸ್ಥಗಿತ

ಇರಾನ್ ವಿರುದ್ಧ UAE ಕಠಿಣ ಕ್ರಮ; ಎಲ್ಲಾ ವ್ಯಾಪಾರ, ಹಣಕಾಸು ವಹಿವಾಟು ಸ್ಥಗಿತ

August 20, 2026

ನನಗೆ ದೇಶವೇ ಮೊದಲು, ರಾಜಕೀಯ ಪಕ್ಷವಲ್ಲ

ತಮ್ಮ ವಿಡಿಯೋದಲ್ಲಿ ಮುಕ್ತವಾಗಿ ಮಾತನಾಡಿರುವ ಇಶಾ ಕೊಪ್ಪಿಕರ್, ಹೌದು, ನಾನು ಅಂಧಭಕ್ತೆ. ದೇಶವನ್ನು ಪೂರ್ಣಮನಸ್ಸಿನಿಂದ ಪ್ರೀತಿಸುವುದು ಮತ್ತು ಅದು ವೇಗವಾಗಿ ಪ್ರಗತಿ ಹೊಂದುವುದನ್ನು ನೋಡಿ ಹೆಮ್ಮೆಪಡುವುದು ಭಕ್ತಿ ಎಂದಾದರೆ, ನಾನು ಖಂಡಿತ ಭಕ್ತೆ. ಆದರೆ ನನ್ನ ಈ ಭಕ್ತಿ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಮೇಲಲ್ಲ, ಬದಲಿಗೆ ನನ್ನ ತಾಯ್ನಾಡಿನ ಮೇಲೆ. ನನಗೆ ಯಾವಾಗಲೂ ದೇಶವೇ ಮೊದಲು. ಒಬ್ಬ ಪ್ರಜೆಯಾಗಿ ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಮತ್ತು ಭಿನ್ನಾಭಿಪ್ರಾಯ ಹೊಂದುವ ಹಕ್ಕು ನನಗಿದೆ. ಆದರೂ ನನ್ನ ದೇಶದ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ನಾವೇನು ಮಾಡಿದ್ದೇವೆ ಎಂದು ಯೋಚಿಸಿ

ಮುಂದುವರಿದು ದೇಶದ ಪ್ರಜೆಗಳಿಗೆ ಕರೆ ನೀಡಿರುವ ಅವರು, ದೇಶ ನಮಗೆ ಏನು ಮಾಡಿದೆ ಎಂದು ಸದಾ ದೂರುವ ಬದಲು, ನಾವು ದೇಶದ ಏಳಿಗೆಗೆ ಏನು ಕೊಡುಗೆ ನೀಡಬಹುದು ಎಂದು ಯೋಚಿಸುವ ಸಮಯ ಬಂದಿದೆ. ಭಾರತ ಇಂದು ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಹೊಸ ಭಾರತವನ್ನು ನಿರ್ಮಿಸಲು ನಮ್ಮ ಹಳೆಯ ಆಲೋಚನೆಗಳನ್ನು ನಾವು ಬದಲಾಯಿಸಿಕೊಳ್ಳಬೇಕಿದೆ. ಆದ್ದರಿಂದ ನನ್ನನ್ನು ಭಕ್ತೆ ಎನ್ನಿ, ಅಂಧಭಕ್ತೆ ಎನ್ನಿ ಅಥವಾ ರಾಷ್ಟ್ರವಾದಿ ಎನ್ನಿ, ನನಗೆ ಚಿಂತೆಯಿಲ್ಲ. ನಾನು ಭಾರತೀಯಳು, ನನ್ನ ದೇಶವನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ.

ತಮ್ಮ ಪೋಸ್ಟ್‌ನ ಕ್ಯಾಪ್ಷನ್‌ನಲ್ಲಿಯೂ ಇದೇ ಮಾತನ್ನು ಬರೆದುಕೊಂಡಿರುವ ಅವರು, ಭಾರತವನ್ನು ಪ್ರೀತಿಸುವುದು ಅಂಧಭಕ್ತಿ ಎಂದಾದರೆ, ಆ ಹೆಸರನ್ನು ನಾನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ. ತಪ್ಪು ಅನಿಸಿದ್ದನ್ನು ಧೈರ್ಯವಾಗಿ ಪ್ರಶ್ನಿಸುವ ಮತ್ತು ಸರಿ ಅನಿಸಿದ್ದನ್ನು ಮುಕ್ತವಾಗಿ ಮೆಚ್ಚುವ ಹಕ್ಕು ನನಗಿದೆ ಎಂದು ಪುನರುಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರೊಂದಿಗೆ ‘ಸೂರ್ಯವಂಶ’ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದ ಇಶಾ ಕೊಪ್ಪಿಕರ್, ಹಿಂದಿ, ತೆಲುಗು, ತಮಿಳು ಹಾಗೂ ಮರಾಠಿ ಭಾಷೆಗಳಲ್ಲೂ ಜನಪ್ರಿಯ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಸದ್ಯ ಇಶಾ ಅವರ ಈ ವೀಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರಿಂದ ಪರ-ವಿರೋಧದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಲವರು ಅವರ ನಿಷ್ಠುರ ದೇಶಪ್ರೇಮವನ್ನು ಶ್ಲಾಘಿಸಿದ್ದರೆ, ಮತ್ತೆ ಕೆಲವರು ಅವರ ಹೇಳಿಕೆಯನ್ನು ರಾಜಕೀಯ ನೆಲೆಯಲ್ಲಿ ವಿಶ್ಲೇಷಿಸುತ್ತಿದ್ದಾರೆ.

ShareTweetSendShare
Join us on:

Related Posts

ಕ್ರಿಮಿನಾಶಕ ಸಿಂಪಡಿಸುವ ರೈತರ ಆರೋಗ್ಯಕ್ಕೆ ಅಪಾಯ? KIMS ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

ಕ್ರಿಮಿನಾಶಕ ಸಿಂಪಡಿಸುವ ರೈತರ ಆರೋಗ್ಯಕ್ಕೆ ಅಪಾಯ? KIMS ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

by Shwetha
August 20, 2026
0

ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ರೈತರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS)...

ಇರಾನ್ ವಿರುದ್ಧ UAE ಕಠಿಣ ಕ್ರಮ; ಎಲ್ಲಾ ವ್ಯಾಪಾರ, ಹಣಕಾಸು ವಹಿವಾಟು ಸ್ಥಗಿತ

ಇರಾನ್ ವಿರುದ್ಧ UAE ಕಠಿಣ ಕ್ರಮ; ಎಲ್ಲಾ ವ್ಯಾಪಾರ, ಹಣಕಾಸು ವಹಿವಾಟು ಸ್ಥಗಿತ

by Shwetha
August 20, 2026
0

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ನಡುವೆಯೇ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಇರಾನ್ ಜೊತೆಗಿನ ಎಲ್ಲಾ ವ್ಯಾಪಾರ, ವಾಣಿಜ್ಯ ವಿನಿಮಯ ಹಾಗೂ ಹಣಕಾಸು ವಹಿವಾಟುಗಳನ್ನು ಮುಂದಿನ ಸೂಚನೆ...

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

by Shwetha
August 20, 2026
0

ಹೊಸದೆಹಲಿ: ಭಾರತದ ಚುನಾವಣಾ ವ್ಯವಸ್ಥೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿರುವುದಕ್ಕೆ ಕಾಂಗ್ರೆಸ್ ಪಕ್ಷ ತೀವ್ರವಾಗಿ...

ನನ್ನ ಯೌವನ, ಬೆಡ್‌ರೂಮ್ ಬಗ್ಗೆ ಹಗಲುಗನಸು ಕಾಣಬೇಡಿ: ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್  ತಿರುಗೇಟು

ನನ್ನ ಯೌವನ, ಬೆಡ್‌ರೂಮ್ ಬಗ್ಗೆ ಹಗಲುಗನಸು ಕಾಣಬೇಡಿ: ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್ ತಿರುಗೇಟು

by Shwetha
August 20, 2026
0

ಹೊಸದೆಹಲಿ: ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಮತ್ತು ಯೋಗ ಗುರು ಬಾಬಾ ರಾಮ್‌ದೇವ್ ನಡುವಿನ ವಾಕ್ಸಮರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿನ್ ಝಿ...

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ರೋಗಕ್ಕೆ ತಕ್ಕ ಪೌಷ್ಟಿಕ ಆಹಾರ; 4 ಮಾದರಿಯ ಮೆನು ಸಿದ್ಧತೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ರೋಗಕ್ಕೆ ತಕ್ಕ ಪೌಷ್ಟಿಕ ಆಹಾರ; 4 ಮಾದರಿಯ ಮೆನು ಸಿದ್ಧತೆ

by Shwetha
August 20, 2026
0

ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಇನ್ಮುಂದೆ ವಯಸ್ಸು, ಕಾಯಿಲೆ ಹಾಗೂ ಚಿಕಿತ್ಸೆಯ ಅಗತ್ಯಕ್ಕೆ ಅನುಗುಣವಾಗಿ ಪ್ರತ್ಯೇಕ ಮಾದರಿಯ ಪೌಷ್ಟಿಕ ಆಹಾರ ನೀಡಲು ಆರೋಗ್ಯ ಇಲಾಖೆ ಸಿದ್ಧತೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram