ಧಾರವಾಡ, ಮೇ 23 : ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ಅವರ ಪತ್ನಿ, ಲೇಖಕಿ ಹಾಗೂ ಕಥೆಕಾರ್ತಿ ಶಾಂತಾದೇವಿ ಕಣವಿ (88) ಅವರು ಶುಕ್ರವಾರ ಸಂಜೆ ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ವಿಧಿವಶರಾಗಿದ್ದಾರೆ.
ನಾಲ್ವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳನ್ನು ಇವರು ಅಗಲಿದ್ದು, ಧಾರವಾಡದಲ್ಲಿ ಶಾಂತಾದೇವಿಯವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಹುಲ್ ಪ್ರಧಾನಿ ಅಭ್ಯರ್ಥಿಯಾಗದಿದ್ದರೆ ಮೈತ್ರಿ ಕಟ್:ಮೈತ್ರಿಗೆ ಕುತ್ತು ತರುತ್ತಾ ಪ್ರಧಾನಿ ಪಟ್ಟ? ವಿಜಯ್ ಕ್ಯಾಬಿನೆಟ್‌ಗೆ ಕೈಕೊಡಲು ಸಿದ್ಧವಾಯ್ತಾ ಕಾಂಗ್ರೆಸ್?
ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಈಗ 2029ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ವಿಚಾರವಾಗಿ ದೊಡ್ಡ ಮಟ್ಟದ ಸಂಘರ್ಷ ಶುರುವಾಗಿದೆ. ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು...








