ಬೆಂಗಳೂರು ಗ್ರಾಮಾಂತರ : ಮೊದಲ ಬಾರಿಗೆ ತಬ್ಲಿಘಿಗಳ ಮೂಲಕ ಕೊರೋನಾ ದಾಳಿಗಿ ಸಿಲುಕಿ ನಂತರ ನಿಟ್ಟುಸಿರು ಬಿಟ್ಟಿದ್ದ ನಂದಗುಡಿ ಹೋಬಳಿಯ ಬೈಲನರಸಾಪುರದಲ್ಲಿ ಮತ್ತೆ ಕೊರೋನಾ ಕಾಟ ಶುರುವಾಗಿದೆ. ಬೈಲನರಸಾಪುರ ವ್ಯಾಪ್ತಿಯಲ್ಲಿ 22 ವರ್ಷದ ವಯಸ್ಸಿನ 8 ತಿಂಗಳ ಗರ್ಭಿಣಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಜಿಲ್ಲಾಡಳಿತ ಮತ್ತೊಮ್ಮೆ ಆತಂಕಕ್ಕೆ ವ್ಯಕ್ತಪಡಿಸಿದೆ.
ಕೊರೊನಾ ಪಾಸಿಟಿವ್ ಸೋಂಕಿತೆ 8 ತಿಂಗಳ ಗರ್ಭಿಣಿಯಾಗಿದ್ದು, ಸೋಂಕು ತಗುಲಿದ ಹಾದಿಯ ಬಗ್ಗೆ ಆತಂಕ ಶುರುವಾಗಿದೆ. ಇನ್ನೂ ಕೋಲಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ತಿಂಗಳ ಚಿಕಿತ್ಸೆಗೆಂದು ಹೋದಾಗ ಕರೋನಾ ಲಕ್ಷಣಗಳು ಕಂಡು ಬಂದಿವೆ. ವಿಚಾರವನ್ನು ಆಸ್ಪತ್ರೆ ಸಿಬ್ಬಂದಿ ಕೂಡಲೇ ಕೋಲಾರ ಜಿಲ್ಲಾ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ಗಮನಕ್ಕೆ ತಂದಿದ್ದಾರೆ. ಕೋಲಾರ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಬೆಂಗಳೂರು ಜಿಲ್ಲಾ ವೈದ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಸೋಂಕಿತೆಯನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಸೋಂಕಿತೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಗಂಡ, ಅತ್ತೆ , ಮಾವ ಸೇರಿದಂತೆ ಮೂವರನ್ನು 14 ದಿನಗಳ ಕ್ವಾರೆಟೈನ್ ಗೆ ಒಳಪಡಿಸಲಾಗಿದೆ. ಅಲ್ಲದೆ ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ. ಸದ್ಯ ಗರ್ಭಿಣಿಯ ಟ್ರಾವೆಲ್ ಹಿಸ್ಟರಿಯಲ್ಲಿ ಕೊರೋನಾ ಸೋಂಕಿತರ ಸಂಪರ್ಕ ಕಂಡುಬಂದಿಲ್ಲ. ಆದರೂ ಗರ್ಭಿಣಿಗೆ ಕೊರೋನಾ ಸೋಂಕು ತಗುಲಿದ್ದು ಹೇಗೆ ಎಂಬ ವಿಚಾರದ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.
ರಾಹುಲ್ ಪ್ರಧಾನಿ ಅಭ್ಯರ್ಥಿಯಾಗದಿದ್ದರೆ ಮೈತ್ರಿ ಕಟ್:ಮೈತ್ರಿಗೆ ಕುತ್ತು ತರುತ್ತಾ ಪ್ರಧಾನಿ ಪಟ್ಟ? ವಿಜಯ್ ಕ್ಯಾಬಿನೆಟ್‌ಗೆ ಕೈಕೊಡಲು ಸಿದ್ಧವಾಯ್ತಾ ಕಾಂಗ್ರೆಸ್?
ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಈಗ 2029ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ವಿಚಾರವಾಗಿ ದೊಡ್ಡ ಮಟ್ಟದ ಸಂಘರ್ಷ ಶುರುವಾಗಿದೆ. ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು...








