ಬಳ್ಳಾರಿ : ಬಳ್ಳಾರಿಗೆ ಏಕ್ ಲವ್ ಯಾ ಚಿತ್ರತಂಡ ಭೇಟಿ ನೀಡಿದ್ದು , ಅವರನ್ನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದ ದೃಶ್ಯ ಕಂಡು ಬಂದಿದೆ.. ನಿರ್ದೇಶಕ ಪ್ರೇಮ , ನಟಿ ಹಾಗೂ ನಿರ್ಮಾಪಕಿ ರಕ್ಷಿತಾ, ನಟ ರಾಣಾ, ನಟಿ ರಿಶ್ಮಾ ಬಳ್ಳಾರಿಗೆ ಭೇಟಿ ನೀಡಿದ್ದರು.
ಬಳ್ಳಾರಿಯ ಸಿನಿ ಕಾಂಪ್ಲೆಕ್ಸ್ ಗೆ ಚಿತ್ರತಂಡ ಭೇಟಿ ನೀಡಿತ್ತು. ಈ ವೇಳೆ ಪಟಾಟಿ ಸಿಡಿಸಿ ಚಿತ್ರತಂಡವನ್ನ ಅಭಿಮಾನಿಗಳು ಸ್ವಾಗತಿಸಿದ್ಧಾರೆ.. ಪ್ರೇಮ ಜೊತೆ ಸೆಲ್ಪಿ ತಗೆದುಕೊಳ್ಳಲು ಪೇಕ್ಷಕರ ನೂಕು ನುಗ್ಗಲು ಜೋರಿತ್ತು..
ಈ ವೇಳೆ ಚಿತ್ರದ ಹಾಡು ಹಾಡಿ ಪೇಕ್ಷಕರನ್ನ ನಿರ್ದೇಶಕ ಪ್ರೇಮ್ ರಂಜಿಸಿದ್ದಾರೆ. ಅಭಿಮಾನಿಗಳ ಜೊತೆ ಚಿತ್ರಂಡ ಸಿನಿಮಾ ಯಶಸ್ಸನ್ನ ಹಂಚಿಕೊಂಡಿದೆ. ಈ ವೇಳೆ ಮಾತನಾಡಿರುವ ಪ್ರೇಮ್ , ರಕ್ಷಿತಾ ಉತ್ತರ ಕರ್ನಾಟಕದಲ್ಲಿ ಚಿತ್ರ ಉತ್ತಮವಾಗಿ ಓಡುತ್ತಿದೆ.. 2 ನೇ ವಾರ ಚಿತ್ರ ನಡೆಯುತ್ತಿದೆ.. ಪೇಕ್ಷಕರು ಚಿತ್ರಕ್ಕೆ ಉತ್ತಮ ಸ್ಪಂದನೆ ನೀಡಿದ್ದಾರೆ. ಬಳ್ಳಾರಿ ಹೊಸಪೇಟೆಯಲ್ಲಿ ಮಧ್ಯ ರಾತ್ರಿ ಚಿತ್ರ ನೋಡುವ ಅಭಿಮಾನಿಗಳು ಇದ್ದಾರೆ ಎಮದಿದ್ದಾರೆ.. .
ಅಲ್ಲದೇ ಪ್ರೇಮ್ ಹೊಸ ಕಟೆಂಟ್ ಕೊಟ್ಟಿದ್ದಾರೆ ಅಂತಾ ಚಿತ್ರ ನೋಡುತ್ತಿದ್ದಾರೆ. ಚಿತ್ರದಲ್ಲಿನ ಸಂಗೀತ ಪೇಕ್ಷಕರಿಗೆ ಇಷ್ಟವಾಗಿದೆ. ಚಿತ್ರದ ಕಲಕ್ಷನ್ ಚೆನ್ನಾಗಿದೆ. ನಮ್ಮ ಮ್ಯಾನೇಜರ್ ಇನ್ನೂ ಲೆಕ್ಕ ಕೊಟ್ಟಿಲ್ಲ ಎಂದಿದ್ದಾರೆ ರಕ್ಷಿತಾ..