Bangalore | ಬೆಳ್ಳಂ ಬೆಳಗ್ಗೆ ಬೆಂಕಿಯ ರುದ್ರ ನರ್ತನ
ಬೆಂಗಳೂರಿನಲ್ಲಿ ತಡರಾತ್ರಿ ಭಾರಿ ಅಗ್ನಿ ಅವಘಡ
೪ ಅಂತಸ್ತಿನ ಐಟಿ ಕಂಪನಿ ಕಟ್ಟಡದಲ್ಲಿ ಬೆಂಕಿ
ಲೋಗ್ಯಾಟೋ ಕಂಪನಿ ಕಟ್ಟಡ ಧಗ ಧಗ
ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ
ಬೆಂಗಳೂರು : ಬೆಂಗಳೂರಿನಲ್ಲಿ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 4 ಅಂತಸ್ತಿನ ಐಟಿ ಕಂಪನಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ನಗರದ ಮಾರತಹಳ್ಳಿಯ ಕಾರ್ತಿಕ್ ನಗರದಲ್ಲಿರುವ ಬಾಗಮನೆ ಟೆಕ್ ಪಾರ್ಕ್‍ನಲ್ಲಿ ಈ ಘಟನೆ ನಡೆದಿದೆ.
ಈ ಅಗ್ನಿ ಅನಾಹುತಕ್ಕೆ ಲೋಗ್ಯಾಟೋ ಕಂಪನಿ ಕಟ್ಟಡ ಧಗ ಧಗ ಹೊತ್ತಿ ಉರಿದಿದೆ.
ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. 10 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ.
ಆದ್ರೆ ಬೆಂಕಿಯನ್ನು ನಂದಿಸುವ ವೇಳೆ ಮಹದೇವಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವಿನಯ್ ಆಯತಪ್ಪಿ ಬಿದ್ದಿದ್ದಾರೆ.
ವಿನಯ್ ಕೆಳಗೆ ಬಿದ್ದ ರಭಸಕ್ಕೆ ಕೈ, ಕಾಲು ಹಾಗೂ ತಲೆಗೆ ಗಾಯಗಾಳಾಗಿವೆ.
ಅವರನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Fire-at-bagmane-tech-park-bengaluru









