Russia vs Ukraine war | ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ!
ಉಕ್ರೇನ್ ಮೇಲಿನ ರಷ್ಯಾ ಯುದ್ಧ ಹಿನ್ನಲೆ
ಭಾರತ ಆರ್ಥಿಕತೆ ಮೇಲೆ ಭಾರೀ ಪರಿಣಾಮ
ಅಗತ್ಯವಸ್ತುಗಳ ಬೆಲೆಗಳು ಮತ್ತೆ ಗಗನಮುಖಿ
ತೈಲಗಳ ಬೆಲೆ ಮತ್ತೆ ದಾಖಲೆ ಮಟ್ಟಕ್ಕೆ ಏರಿಕೆ
ಮುಂಬೈ : ರಷ್ಯಾ ಸೇನೆ ಉಕ್ರೇನ್ ದೇಶದ ಮೇಲೆ ದಾಳಿ ನಡೆಸಿದ್ದು, ಅದರ ಪರಿಣಾಮ ಭಾರತ ಆರ್ಥಿಕತೆ ಮೇಲೆಯೂ ಬೀರಲು ಶುರು ಮಾಡಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕಾರಣದಿಂದಾಗಿ ಭಾರತದಲ್ಲಿ ಅಗತ್ಯವಸ್ತುಗಳ ಬೆಲೆ ಮತ್ತೆ ಆಕಾಶ ಮುಟ್ಟುತ್ತಿವೆ.
ಮುಖ್ಯವಾಗಿ ಅಡುಗೆ ತೈಲಗಳ ಬೆಲೆ ಮತ್ತೆ ದಾಖಲೆ ಮಟ್ಟಕ್ಕೆ ಏರಿಕೆ ಆಗುತ್ತಿದೆ. ದೇಶದಲ್ಲಿ ಕಳೆದ ಒಂದು ವಾರದಲ್ಲಿ ಒಂದು ಲೀಟರ್ ಸೂರ್ಯಕಾಂತಿ ಎಣ್ಣೆ ಬೆಲೆ 40 ರೂ. ಹೆಚ್ಚಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಹೀಗೆ ಮುಂದುವರೆದರೇ ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆ ಬೆಲೆ ಇನ್ನಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಇದು ಮಾತ್ರವಲ್ಲದೇ ಗೋಧಿ, ಬೆಳೆ, ಕಾಳುಗಳ ಬೆಲೆ, ಚಿನ್ನ, ಬೆಳ್ಳಿ, ಸಿಮೆಂಟ್, ಕಬ್ಬಿಣದ ಬೆಲೆಯೂ ಹಿಗ್ಗಾಮುಗ್ಗಾ ಹೆಚ್ಚುತ್ತಿದೆ.
ಇನ್ನೆರಡು ದಿನಗಳಲ್ಲಿ ಪೆಟ್ರೊಲ್, ಡೀಸೆಲ್ ಬೆಲೆಯೂ ದುಬಾರಿ ಆಗಲಿದೆ. ಈಗಾಗಲೇ ಹಾಲಿನ ಉತ್ಪನ್ನ, ಅಡುಗೆ ಎಣ್ಣೆ, ಗೋಧಿ, ಕೊತ್ತಂಬರಿ. ಜೀರಾ, ಜೋಳ, ಸೋಯಾ ಮೀಲ್ ಮುಂತಾದ ವಸ್ತುಗಳ ಬೆಲೆ ಏರಿಕೆಯಾಗಿದೆ.
ಅಂದಹಾಗೆ ಭಾರತದ ಶೇ.90 ರಷ್ಟು ಗೋಧಿ ರಷ್ಯಾ ಹಾಗೂ ಉಕ್ರೇನ್ನಿಂದಲೇ ಆಮದಾಗುತ್ತಿತ್ತು.
ಆದ್ರೆ ಈಗ ನಡೆಯುತ್ತಿರುವ ಯುದ್ಧದಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.
ಇನ್ನು ಕುಕ್ಕುಟೋದ್ಯಮದ ಉತ್ಪನ್ನಗಳ ಮೇಲೂ ಯುದ್ಧದ ಪರಿಣಾಮ ಬೀರಿದ್ದು, ದೇಶದ ಹಲವು ಭಾಗಗಳಲ್ಲಿ ಕೋಳಿ ಮಾಂಸ ದರ ಶೇ. 10 ರಿಂದ ಶೇ. 50 ರಷ್ಟು ಏರಿಕೆಯಾಗಿದೆ.
ಯುದ್ಧದ ಪರಿಣಾಮ ಎಂಬಂತೆ ಅಮುಲ್ ತನ್ನ ಹಾಲಿನ ದರವನ್ನು ಶೇ.4 ರಷ್ಟು ಹೆಚ್ಚಳ ಮಾಡಿದೆ.
ಒಟ್ಟಾರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಭಾರತೀಯರ ಅಡುಗೆ ಮನೆಯಲ್ಲಿ ಕಂಪನವನ್ನುಂಟು ಮಾಡಿರೋದಂತೂ ಸತ್ಯ. russia-vs-ukraine-war-edible oil may expensive









