Youtube ನಿಂದಲೇ ದೇಶದ ಜಿಡಿಪಿಗೆ 6800 ಕೋಟಿ ರುಪಾಯಿ ಕೊಡುಗೆ
ಸಾಮಾಜಿಕ ಜಾಲತಾಣಗಳು ಪ್ರಸ್ತುತ ವಿಶ್ವದ ಜನರ ಬಹುಮುಖ್ಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ.. ಯೂಟ್ಯೂಬ್ , ಫೇಸ್ ಬುಕ್ , ಇನ್ಸ್ಟಾಗ್ರಾಮ್ , ಟ್ವಿಟ್ಟರ್ ನ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದರೆ,, ಕಂಟೆಟ್ ಕ್ರಿಯೇಟರ್ ಗಳ ಸಮೂಹ ದೊಡ್ಡದಾಗಿ ಬೆಳೆಯುತ್ತಿದೆ..
ಭಾರತದಲ್ಲಿ ಯೂಟ್ಯೂಬ್ ನ ಕ್ರೇಜ್ ಕಡಿಮೆಯೇನಿಲ್ಲಾ… ಆದ್ರೆ ಯೂಟ್ಯೂಬ್ ನಿಮದ ಕೆವಲ ಮಾಹಿತಿ ಗೊತ್ತಾಗುವ ಜೊತೆಗೆ ಮನರಂಜನೆಗೆ ಸೀಮಿತವಾಗಿಲ್ಲ.. ಕಂಟೆಂಟ್ ಕ್ರಿಯೇಟರ್ ಗಳಿಗೆ ದುಡ್ಡು ಮಾಡುವ ದಾರಿಯಾಗಿದೆ.. ಆದರೆ ಎಲ್ಲವನ್ನೂ ಮೀರಿ YouTube ನಿಂದ ದೇಶಗಳ ಆರ್ಥಿಕತೆಗೆ ದೊಡ್ಡ ಮಟ್ಟದಲ್ಲಿ ಕೊಡುಗೆಯನ್ನ ನೀಡುತ್ತಿದೆ..
ಹೌದು… ಅಂದ್ಹಾಗೆ 2020ರಲ್ಲಿ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳು ದೇಶದ ಜಿಡಿಪಿಗೆ 6800 ಕೋಟಿ ರುಪಾಯಿ ಕೊಡುಗೆ ನೀಡಿದ್ದಾರೆ ಎಂದು ವರದಿಯಾಗಿದೆ.
ಆಕ್ಸ್‌ಫರ್ಡ್ ಎಕನಾಮಿಕ್ಸ್‌ನ ಸ್ವತಂತ್ರ ವರದಿಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಭಾರತದಲ್ಲಿ YouTube ನಲ್ಲಿ 100,000 ಚಂದಾದಾರರನ್ನು ಹೊಂದಿರುವ 40,000 ಕ್ಕಿಂತ ಹೆಚ್ಚಿನ ಯೂಟ್ಯೂಬ್ ಚಾನಲ್ ಗಳಿವೆ. ಇವು ತಲಾ 1 ಲಕ್ಷಕ್ಕಿಂತ ಹೆಚ್ಚು ಸಬ್ ಕ್ಸ್ರೈಬರ್ ಗಳನ್ನ ಹೊಂದಿದ್ದು , 2 ವರ್ಷಗಳ ಒಳಗೇ 45 % ಗಿಂತಲೂ ಹೆಚ್ಚಿನ ಬೆಳವಣಿಗೆಯನ್ನು ಕಂಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯೂಟ್ಯೂಬ್, ಇಂದು, ಸ್ವತಂತ್ರ ಸಲಹಾ ಸಂಸ್ಥೆಯಾದ ಆಕ್ಸ್‌ಫರ್ಡ್ ಎಕನಾಮಿಕ್ಸ್‌ನ ಹೊಸ ವರದಿಯನ್ನು ಅನಾವರಣಗೊಳಿಸಿದೆ, ಇದು ಯೂಟ್ಯೂಬ್ ನಲ್ಲಿ ಸಿಗುತ್ತಿರುವ ಆದಾಯದ ಜೊತೆಗೆ, ಕಂಟೆಂಟ್ ಕ್ರಿಯೇಟರ್ ಗಳಿಗೆ ಜಾಗತಿಕ ಅಭಿಮಾನಿಗಳನ್ನು ಪಡೆಯಲು, ಬಹು ಆದಾಯದ ಸ್ಟ್ರೀಮ್‌ಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತಿದೆ ಎನ್ನಲಾಗಿದೆ..
ಜಿಡಿಪಿಗೆ 6800 ಕೋಟಿ ರುಪಾಯಿ ಕೊಡುಗೆ ನೀಡಿರುವುದು 6.80 ಲಕ್ಷ ಪೂರ್ಣ ಪ್ರಮಾಣದ ಉದ್ಯೋಗಗಳಿಗೆ ಸಮ ಎಂದು ಆಕ್ಸ್‌ಪರ್ಡ್ ಎಕನಾಮಿಕ್ಸ್ ಹೇಳಿದೆ.
Russia vs Ukraine war | ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ!









