ಬೆಂಗಳೂರು : ರಾಜ್ಯಕ್ಕೆ ಇಂದು ಕೊರೊನಾ “ಮಹಾ” ಸುನಾಮಿ ಅಪ್ಪಳಿಸಿದ್ದು, ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ರಾಜ್ಯದ 196 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,939ಕ್ಕೆ ಏರಿಕೆಯಾಗಿದೆ.
ಇಂದು ಯಾದಗಿರಿಯಲ್ಲಿ ಬರೋಬ್ಬರಿ 72 ಮಂದಿಯಲ್ಲಿ ಸೋಂಕು ದೃಢವಾಗಿದೆ. ಇನ್ನು, ರಾಯಚೂರಿನಲ್ಲಿ 39, ಮಂಡ್ಯದಲ್ಲಿ 28, ಚಿಕ್ಕಬಳ್ಳಾಪುರದಲ್ಲಿ 20 ಪಾಸಿಟಿವ್ ಕೇಸ್ ಗಳು ಬಂದಿವೆ. ಇವರಲ್ಲಿ ಬಹುತೇಕರು ಮಹಾರಾಷ್ಟ್ರದಿಂದ ಆಗಮಿಸಿದ್ದವರೇ ಆಗಿದ್ದಾರೆ. ಇನ್ನುಳಿದಂತೆ ಗದಗ್ 15, ಬೆಂಗಳೂರು 4, ದಕ್ಷಿಣ ಕನ್ನಡ 3, ಹಾಸನ 4, ಕಲಬುರಗಿ, ಬೆಳಗಾವಿ ಹಾಗೂ ಉಡುಪಿ ತಲಾ 1, ಕೋಲಾರ 2, ದಾವಣಗೆರೆ 3, ಉತ್ತರ ಕನ್ನಡ 2 ಪ್ರಕರಣಗಳು ವರದಿಯಾಗಿದೆ.
ಇನ್ನು ಇಂದು ಒಬ್ಬರು ಮಾತ್ರ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡಗುಡೆಯಾಗಿದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ ಒಟ್ಟು 598 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೊನಾದಿಂದ ಒಬ್ಬರು ಮೃತಪಟ್ಟಿದ್ದಾರೆ. ಒಟ್ಟಾರೆಯಾಗಿ ಕೊರೊನಾಗೆ ಬಲಿಯಾದವರ ಸಂಖ್ಯೆ 42ಕ್ಕೆ ಏರಿಕೆಯಾಗಿದ್ರೆ, ಇಬ್ಬರು ಕೊರೊನಾ ಸೋಂಕಿತರು, ಕೊರೊನಾವಲ್ಲದ ಕಾರಣದಿಂದ ಮೃತಪಟ್ಟಿದ್ದಾರೆ.
172 ಪ್ರಕರಣಗಳಿಗಿದೆ ಮುಂಬೈ ಲಿಂಕ್
ಇಂದು ದೃಢಪಟ್ಟಿರುವ 196 ಕೊರೊನಾ ಕೇಸ್ ಗಳ ಪೈಕಿ 172 ಪ್ರಕರಣಗಳಿಗೆ ಮುಂಬೈ ಲಿಂಕ್ ಇದೆ. ಬೆಂಗಳೂರಿನ ನಾಲ್ವರಲ್ಲಿ ಮಹಾರಾಷ್ಟ್ರದಿಂದ ಬಂದಂತಹ 17 ವರ್ಷದ ಹುಡುಗನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸಿಲಿಕಾನ್ ಗೂ ಮಹಾರಾಷ್ಟ್ರ ಲಿಂಕ್ ಆರಂಭವಾಗಿದೆ.








