US ಡಾಲರ್ ಎದುರು ದಾಖಲೆಯ ಕುಸಿತ ಕಂಡ ರುಪಾಯಿ…
ಯುಎಸ್ ಡಾಲರ್ ಎದುರು ರೂಪಾಯಿ 81 ಪೈಸೆಯಷ್ಟು ದಾಖಲೆಯ ಕುಸಿತ ಕಂಡು ಕನಿಷ್ಠ ಮಟ್ಟಕ್ಕೆ ತಲುಪಿದೆ. ಫಾರೆಕ್ಸ್ ಮಾರುಕಟ್ಟೆಯಲ್ಲಿ, ರೂಪಾಯಿ ಇಂದು ಯುಎಸ್ ಡಾಲರ್ ವಿರುದ್ಧ 81 ಪೈಸೆಯ ದೊಡ್ಡ ಕುಸಿತ ಕಂಡಿದೆ. ಪ್ರತಿ ಡಾಲರ್‌ಗೆ 77 ರೂಪಾಯಿಗಳ ಸಮೀಪಕ್ಕೆ ಬಂದು ನಿಂತಿದೆ.
ಜಾಗತಿಕ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್ ಮಟ್ಟಕ್ಕೆ 130 ಡಾಲರ್‌ಗಳ ಕಡೆಗೆ ತೀಕ್ಷ್ಣವಾದ ಏರಿಕೆಯಿಂದಾಗಿ ರುಪಾಯಿ ಮೌಲ್ಯ ಕುಸಿದಿತು.
ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾದ ಯುಎಸ್ ಡಾಲರ್ ನ ಮೌಲ್ಯವರ್ಧನೆ ಏರಿಕೆಯಾದ್ದರಿಂದ ರೂಪಾಯಿ ಕುಸಿಯಿತು.
ದೇಶೀಯ ಕರೆನ್ಸಿ ಪ್ರತಿ ಡಾಲರ್‌ಗೆ 76 ರೂಪಾಯಿ 97 ಪೈಸೆಗೆ ಸ್ಥಿರವಾಗಿದೆ. ಮತ್ತೊಂದೆಡೆ, ಡಾಲರ್ ಸೂಚ್ಯಂಕವು ಇತರ ಆರು ಪ್ರಮುಖ ಕರೆನ್ಸಿಗಳ ವಿರುದ್ಧ ಬಲವನ್ನು ತೋರಿಸಿದೆ. ದಿನದ ವಹಿವಾಟಿನಲ್ಲಿ 99.41 ಕ್ಕೆ ಏರಿಕೆಯಾಗಿದೆ.








