ಯುಪಿಯ 36 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ ಮುಸ್ಲಿಂ ಅಭ್ಯರ್ಥಿಗಳು – Saaksha Tv
ಲಖನೌ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳಲ್ಲಿ 36 ಸ್ಥಾನಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಜಯಿಸಿದ್ದಾರೆ.
ಈ ಬಾರಿ 36 ಮುಸ್ಲಿಂ ಅಭ್ಯರ್ಥಿಗಳನ್ನು ವಿಧಾನಸಭೆಗೆ ಆಯ್ಕೆಯಾಗಿದ್ದು, ಕಳೆದ ಬಾರಿಗಿಂತ ಈ ಸಲ ಇಬ್ಬರು ಅಭ್ಯರ್ಥಿಗಳನ್ನು ಹೆಚ್ಚಾಗಿ ಆಯ್ಕೆ ಮಾಡಿದ್ದಾರೆ. ಶೇ.20 ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ರಾಜ್ಯದಲ್ಲಿ ಒಟ್ಟು 403 ಶಾಸಕರಿದ್ದು, ಇದರಲ್ಲಿ ಶೇಕಡಾ 8.93 ರಷ್ಟು ಮುಸ್ಲಿಮರಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್, ಸುವಾರ್ ವಿಧಾನಸಭಾ ಕ್ಷೇತ್ರದಲ್ಲಿ ಅಪ್ನಾ ದಳದಿಂದ ಸ್ಪರ್ಧಿಸಿದ್ದ ಅಬ್ದುಲ್ಲಾ ಅಜಮ್, ಮೌ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಅಬ್ಬಾಸ್ ಅನ್ಸಾರಿ, ಸುಹೈಬ್ ಅನ್ಸಾರಿ ಅಲಿಯಾಸ್ ಮನ್ನು, ಕೈರಾನಾ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ ನಹಿದ್ ಹಸನ್, ನಿಜಾಮಾಬಾದ್‌ನಲ್ಲಿ ಎಸ್‌ಪಿಯ 85 ವರ್ಷದ ಅನುಭವಿ ಆಲಂ ಬಾಡಿ ಮತ್ತು ಜಿಯಾ-ಉರ್-ರೆಹಮಾನ್ ವಿಜಯ ಸಾಧಿಸಿದ್ದಾರೆ.
ಈ ಬಾರಿ ಬಿಎಸ್ಪಿ 88 ಹಾಗೂ ಕಾಂಗ್ರೆಸ್ 75 ಹಾಗೂ ಸಮಾಜವಾದಿ ಪಕ್ಷ 74 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಕೂಡ ಸಮುದಾಯದ 60 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಮುಸ್ಲಿಮರು ಮತ ಚಲಾಯಿಸಿದ ರೀತಿಯನ್ನು ಗಮನಿಸಿದರೆ ಸಮಾಜವಾದಿ ಪಕ್ಷ ಮೊದಲ ಸ್ಥಾನದಲ್ಲಿದ್ದು, ಎಐಎಂಐಎಂ ಹಾಗೂ ಬಿಎಸ್ಪಿಗೂ ಕೆಲವೊಂದು ಕ್ಷೇತ್ರಗಳಲ್ಲಿ ಮುಸ್ಲಿಮರು ಬೆಂಬಲವನ್ನು ಸೂಚಿಸಿದ್ದಾರೆ.









