ಉಕ್ರೇನ್ – ರಷ್ಯಾ ಬಿಕ್ಕಟ್ಟು : ಯುದ್ಧದ 16ನೇ ದಿನದ ಅಪ್ಡೇಟ್…
ಇಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ 16 ನೇ ದಿನ. ರಷ್ಯಾದ ಸೈನ್ಯವು ಉಕ್ರೇನ್ ನ ರಾಜಧಾನಿ ಕೈವ್ ಗೆ ಸಮೀಪಕ್ಕೆ ಬಂದು ನಿಂತಿದೆ.
ಖಾರ್ಕಿವ್ ಗವರ್ನರ್ ಓಲೆ ಸಿನ್ಯುಬೊವ್ ಅವರು ರಷ್ಯಾದ ಸೈನ್ಯವು ಖಾರ್ಕಿವ್ನಲ್ಲಿರುವ ಶೆಲ್ಟರ್ ಹೋಮ್ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ಆಶ್ರಯ ಮನೆಯಿಂದ 73 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಅನೇಕ ವಿಕಲಚೇತನರು ಸೇರಿದಂತೆ 330 ಜನರು ಒಳಗೆ ಸಿಲುಕಿಕೊಂಡಿದ್ದಾರೆ.
ಉಕ್ರೇನ್ ಯುಎಸ್ ಜೊತೆ ಸೇರಿ ಜೈವಿಕ ಮತ್ತು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ರಷ್ಯಾ ಆರೋಪಿಸಿದೆ. ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್ಎಸ್ಸಿ) ಸಭೆ ಕೂಡ ನಡೆಯಲಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಆರೋಪಗಳನ್ನು ತಿರಸ್ಕರಿಸಿದ್ದಾರೆ. ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾನೂನಿಗೆ ಸಹಿ ಹಾಕಿದ್ದಾರೆ. ಅದೇ ಸಮಯದಲ್ಲಿ, ರಷ್ಯಾ ತನ್ನ ದೇಶದಲ್ಲಿ 280 ಶಾಲೆಗಳು ಮತ್ತು ಕಾಲೇಜುಗಳನ್ನು ನಾಶಪಡಿಸಿದೆ ಎಂದು ಉಕ್ರೇನ್ನ ಶಿಕ್ಷಣ ಸಚಿವರು ಹೇಳಿಕೊಂಡಿದ್ದಾರೆ.
ಉಕ್ರೇನ್ ನಿರಾಶ್ರಿತರಿಗೆ ಸಹಾಯ ಮಾಡಲು 2297 ಕೋಟಿ ರೂಪಾಯಿಗಳ ತುರ್ತು ನಿಧಿಯನ್ನು ಸಂಗ್ರಹಿಸಲಾಗಿದೆ ಎಂದು UNHCR ಅಧ್ಯಕ್ಷ ಫಿಲಿಪೈನ್ ಗ್ರ್ಯಾಂಡ್ ಹೇಳಿದ್ದಾರೆ.
ಮಾರಿಯುಪೋಲ್ನಿಂದ ನಾಗರಿಕರನ್ನು ಸ್ಥಳಾಂತರಿಸಲು ನಿರ್ಮಿಸಲಾದ ಕಾರಿಡಾರ್ನ ಮೇಲೆ ರಷ್ಯಾದ ಪಡೆಗಳು ದಾಳಿ ಮಾಡಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಉಕ್ರೇನ್ ಯುದ್ಧದಿಂದ ಸಂತ್ರಸ್ತರಾಗಿರುವ ನಾಗರಿಕರಿಗೆ ಸಹಾಯ ಮಾಡಲು ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ $53 ಮಿಲಿಯನ್ ನೆರವು ಘೋಷಿಸಿದ್ದಾರೆ.
ರಷ್ಯಾದ ಉಪ ಪ್ರಧಾನಮಂತ್ರಿ ಅವರು ಭಾರತದ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರೊಂದಿಗೆ ಇಂಧನ-ಶಕ್ತಿ ಯೋಜನೆಗಳಲ್ಲಿ ಸಹಕಾರ ಮತ್ತು ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಅಧ್ಯಯನಗಳ ಕುರಿತು ಮಾತನಾಡಿದ್ದಾರೆ.
ಯುದ್ಧದ ವಾತಾವರಣದಲ್ಲಿ, ಪ್ರತಿ ದಿನ ಬೆಳಿಗ್ಗೆ 10 ಗಂಟೆಗೆ ಮಾನವ ಕಾರಿಡಾರ್ ನಿರ್ಮಿಸಲು ರಷ್ಯಾ ಮುಂದಾಗಿದೆ, ಇದರಿಂದಾಗಿ ಯುದ್ಧದಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ಮತ್ತು ಅವರಿಗೆ ಮಾನವೀಯ ನೆರವು ನೀಡಲು ಸಾಧ್ಯವಾಗುತ್ತದೆ.








