ಉಕ್ರೇನ್ ಮೇಯರ್ ನ್ನು ಅಪಹರಸಿ, ಹೊಸ ಮೇಯರ್ ನ್ನು ನೇಮಿಸಿದ ರಷ್ಯಾ – Saaksha Tv
ಉಕ್ರೇನ್ : ರಷ್ಯಾ ಉಕ್ರೇನ್ ಮೇಲೆ ದಾಳಿ ಮಡುವದರ ಜೊತೆಗೆ, ಉಕ್ರೇನ್ ಮೇಯರ್ ನ್ನು ಅಪಹರಸಿ ಆ ಜಾಗದಲ್ಲಿ ಹೊಸ ಮೇಯರ್ ಅನ್ನು ರಷ್ಯಾ ನೇಮಿಸಿದೆ.
ರಷ್ಯಾ ಶುಕ್ರವಾರ ಉಕ್ರೇನ್ನ ಚುನಾಯಿತ ಮೇಯರ್ ಆದ ಇವಾನ್ ಫೆಡೋರೊವ್ ಅವರನ್ನು ಅಪಹರಿಸಿತ್ತು, ಇಂದು ಆ ಜಾಗದಲ್ಲಿ ಗಲಿನಾ ಡ್ಯಾನಿಲ್ಚೆಂಕೊ ಎಂಬ ಮತ್ತೊಬ್ಬ ಮೇಯರ್ನನ್ನು ರಷ್ಯಾ ನೇಮಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮೀರ್ ಝೆಲೆನ್ಸ್ಕಿ ವಶಕ್ಕೆ ಪಡೆದಿರುವ ಉಕ್ರೇನ್ನ ಚುನಾಯಿತ ಮೇಯರ್ ಅನ್ನು ಬಿಡುಗಡೆ ಮಾಡಬೇಕು. ಈ ಸಂಭಂದ ಝೆಲೆನ್ಸ್ಕಿ ಇಸ್ರೇಲ್ ಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.
Continued dialogue with 🇮🇱 PM @naftalibennett. We talked about Russian aggression and the prospects for peace talks. We must stop repressions against civilians: asked to assist in the release of captive mayor of Melitopol and local public figures #StopRussia
— Volodymyr Zelenskyy / Володимир Зеленський (@ZelenskyyUa) March 12, 2022
ಈ ಕುರಿತು ಟ್ವೀಟ್ ಮಾಡಿರುವ ಝೆಲೆನ್ಸ್ಕಿ, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರೊಂದಿಗೆ ಮಾತುಕತೆ ಮುಂದುವರೆದಿದೆ. ರಷ್ಯಾದ ಆಕ್ರಮಣಶೀಲತೆ ಮತ್ತು ಶಾಂತಿಯ ಕುರಿತು ನಾವು ಮಾತನಾಡಿದ್ದೇವೆ. ಉಕ್ರೇನ್ ನಾಗರಿಕರ ವಿರುದ್ಧದ ದಬ್ಬಾಳಿಕೆಯನ್ನು ನಿಲ್ಲಿಸಬೇಕೆಂದು, ಅಲ್ಲದೇ ಮೆಲಿಟೋಪೋಲ್ನ ಮೇಯರ್ ಬಿಡುಗಡೆಗೆ ಸಹಾಯ ಕೇಳಿದ್ದೇವೆ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಉಕ್ರೇನಿಯನ್ ವಿದೇಶಾಂಗ ಸಚಿವಾಲಯವು, ತನ್ನ ಫೇಸ್‌ಬುಕ್ ಖಾತೆಯಲ್ಲಿ ಮೆಲಿಟೊಪೋಲ್ ಮೇಯರ್‌ನ ಬಂಧನವನ್ನು ಯುದ್ಧ ಅಪರಾಧ ಎಂದು ಕರೆದಿದ್ದು, ರಷ್ಯಾ ಪಡೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗಿತ್ತು.








