ರಷ್ಯಾ ದಾಳಿಯಿಂದ ಒಂದು ಮಗು ಸೇರಿ 7 ಜನರ ಸಾವು – Saaksha Tv
ಉಕ್ರೇನ್: ಕೀವ್ ಪ್ರದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಸ್ಥಳಾಂತರಿಸುತ್ತಿದ್ದ ಬೆಂಗಾವಲು ಪಡೆಗಳ ಮೇಲೆ ರಷ್ಯಾದ ಪಡೆಗಳು ದಾಳಿ ಮಾಡಿದ್ದು, ಒಂದು ಮಗು ಸೇರಿ ಏಳು ಜನರು ಮೃತಪಟ್ಟಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಹೇಳಿದೆ.
ಕೈವ್‌ನ ಈಶಾನ್ಯದ 20 ಕಿಲೋಮೀಟರ್ ದೂರದಲ್ಲಿರುವ ಪೆರೆಮೊಹಾ ಗ್ರಾಮದಿಂದ ನೂರಾರು ಜನರನ್ನು ಸ್ಥಳಾಂತರಿಸುವಾಗ ಏಕಾಏಕಿ ಶೆಲ್ ದಾಳಿ ನಡೆದಿದ್ದು ದಾಳಿಯಲ್ಲಿ ಒಂದು ಮಗು ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಸಾಕಷ್ಟು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮೀರ್ ಝೆಲೆನ್ಸ್ಕಿ ಅವರ ಸಹಾಯಕ ಮೈಖೈಲೊ ಪೊಡೊಲ್ಯಾಕ್ ಅವರು ರಷ್ಯಾದ ನಿಯೋಗದೊಂದಿಗೆ ಮಾತುಕತೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಿರಂತರವಾಗಿ ನಡೆಸುತ್ತಿದ್ದು, ನಾಗರಿಕರ ಸ್ಥಳಾಂತರಕ್ಕೆ ಮಾನವೀಯ ಕಾರಿಡಾರ್ಗಳ ರಚನೆಗೆ ಮಾತುಕತೆಯಲ್ಲಿ ಆದ್ಯತೆ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾವು ಯುದ್ಧದಿಂದ ದಶಕಗಳಲ್ಲೇ ಅತಿದೊಡ್ಡ ನಷ್ಟವನ್ನು ಅನುಭವಿಸಿದೆ. ಅಲ್ಲದೇ ನಮ್ಮ ಮೇಲೆ ದಾಳಿ ಮಾಡಲು ಹೊಸ ಸೈನ್ಯವನ್ನು ಕಳುಹಿಸುತ್ತಿದೆ. ಮಾರಿಯುಪೋಲ್‌ನಿಂದ ಜರನ್ನು ಸ್ಥಳಾಂತರಿಲು ಕದನ ವಿರಾಮವನ್ನು ಎತ್ತಿಹಿಡಿಯುವಂತೆ ಝೆಲೆನ್ಸ್ಕಿ ರಷ್ಯಾವನ್ನು ಕೇಳಿಕೊಂಡಿದ್ದಾರೆ.








