ಪುನೀತ್ ಹುಟ್ಟು ಹಬ್ಬದಂದು BSY, ಬೊಮ್ಮಾಯಿ , ಸಿದ್ದರಾಮಯ್ಯ ಹೇಳಿದ್ದೇನು.. ?
ಕರ್ನಾಟಕ ರತ್ನ ಡಾ ಶ್ರೀ ಪುನೀತ್ ರಾಜ್ ಕುಮಾರ್ ಅವರ 47 ನೇ ಹುಟ್ಟು ಹಬ್ಬವಿಂದು . ಪುನೀತ್ ಅವರು ನಮ್ಮನ್ನೆಲ್ಲ ಅಗಲಿ ನಾಲ್ಕೂವರೆ ತಿಂಗಳು ಸಮೀಪಿಸುತ್ತಾ ಬರುತ್ತಿದೆ. ಇಂದು ಅವರ ಕೊನೆಯ ಚಿತ್ರ ಜೇಮ್ಸ್ ದಾಖಲೆಯ ಮಟ್ಟಕ್ಕೆ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ದೇಶಾದ್ಯಂತ ಅಭಿಮಾನಿಗಳೂ ಶುಭಾಶಯ ಕೋರುತ್ತಿದ್ದಾರೆ. ಕರ್ನಾಟಕದ ಹಲವು ರಾಜಕೀಯ ಧುರಿಣರು ಕೂಡ ಟ್ವೀಟ್ ಮಾಡುವ ಮೂಲಕ ಪುನೀತ್ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕರ್ನಾಟಕ ರತ್ನ, ಪ್ರೀತಿಯ ಅಪ್ಪು ದಿ. ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಪ್ರೀತಿ ಪೂರ್ವಕ ನಮನಗಳು. ಅತಿ ಚಿಕ್ಕ ವಯಸ್ಸಿನಲ್ಲಿ ನೀವು ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಮಾಡಿದ ಜನಸೇವೆಯನ್ನು ಬಣ್ಣಿಸಲು ಪದಗಳೇ ಸಾಲದು. ಎಂದು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕರ್ನಾಟಕ ರತ್ನ, ಪ್ರೀತಿಯ ಅಪ್ಪು ದಿ. ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಪ್ರೀತಿ ಪೂರ್ವಕ ನಮನಗಳು.
ಅತಿ ಚಿಕ್ಕ ವಯಸ್ಸಿನಲ್ಲಿ ನೀವು ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಮಾಡಿದ ಜನಸೇವೆಯನ್ನು ಬಣ್ಣಿಸಲು ಪದಗಳೇ ಸಾಲದು. pic.twitter.com/OPkqanw9EV
— Basavaraj S Bommai (@BSBommai) March 17, 2022
ನಾಡಿನ ಪ್ರೀತಿ ಗಳಿಸಿದ್ದ ಅಪ್ರತಿಮ, ಸಹೃದಯಿ ಕಲಾವಿದ, ಕನ್ನಡಿಗರ ಕಣ್ಮಣಿ, ಡಾ.ರಾಜ್ ಕುಟುಂಬದ ಕುಡಿ, ಚಿಕ್ಕ ವಯಸ್ಸಿನಲ್ಲಿಯೇ ಅಪಾರವಾದದ್ದನ್ನು ಸಾಧಿಸಿ, ಅಕಾಲಿಕವಾಗಿ ನಮ್ಮನ್ನಗಲಿದ ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಆ ಸಾಧಕ ಚೇತನಕ್ಕೆ ಅಭಿಮಾನಪೂರ್ವಕ ನಮನಗಳು. ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.
ನಾಡಿನ ಪ್ರೀತಿ ಗಳಿಸಿದ್ದ ಅಪ್ರತಿಮ, ಸಹೃದಯಿ ಕಲಾವಿದ, ಕನ್ನಡಿಗರ ಕಣ್ಮಣಿ, ಡಾ.ರಾಜ್ ಕುಟುಂಬದ ಕುಡಿ, ಚಿಕ್ಕ ವಯಸ್ಸಿನಲ್ಲಿಯೇ ಅಪಾರವಾದದ್ದನ್ನು ಸಾಧಿಸಿ, ಅಕಾಲಿಕವಾಗಿ ನಮ್ಮನ್ನಗಲಿದ ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಆ ಸಾಧಕ ಚೇತನಕ್ಕೆ ಅಭಿಮಾನಪೂರ್ವಕ ನಮನಗಳು.
— B.S.Yediyurappa (@BSYBJP) March 17, 2022
ನಮ್ಮ ನೆಚ್ಚಿನ ಪುನೀತ್ ರಾಜ್ಕುಮಾರ್ ಅವರ ಬದುಕಿನ ಸಾಧನೆಗಳನ್ನು ಪ್ರೇರಣೆಯಾಗಿ ಪಡೆದು ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿಸೋಣ. ಅವರಲ್ಲಿದ್ದ ಸಾಮಾಜಿಕ ಕಳಕಳಿ, ಶಿಕ್ಷಣ ಪ್ರೇಮ, ಆವಿಷ್ಕಾರಿ ಮನೋಭಾವ ಎಲ್ಲರ ಮನೆ-ಮನಗಳಲ್ಲೂ ಬೆಳಗಿಸಿ ಅವರನ್ನು ಅಮರರಾಗಿಸೋಣ. ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಟ್ವೀಟ್ ಮಾಡಿದ್ದಾರೆ.
ನಮ್ಮ ನೆಚ್ಚಿನ ಪುನೀತ್ ರಾಜ್ಕುಮಾರ್ ಅವರ ಬದುಕಿನ ಸಾಧನೆಗಳನ್ನು ಪ್ರೇರಣೆಯಾಗಿ ಪಡೆದು ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿಸೋಣ.
ಅವರಲ್ಲಿದ್ದ ಸಾಮಾಜಿಕ ಕಳಕಳಿ, ಶಿಕ್ಷಣ ಪ್ರೇಮ, ಆವಿಷ್ಕಾರಿ ಮನೋಭಾವ ಎಲ್ಲರ ಮನೆ-ಮನಗಳಲ್ಲೂ ಬೆಳಗಿಸಿ ಅವರನ್ನು ಅಮರರಾಗಿಸೋಣ.#PuneethRajkumar pic.twitter.com/Fr2lQfWIG4
— Dr. C.N. Ashwath Narayan (@drashwathcn) March 17, 2022
ಬೆಟ್ಟದ ಹೂವಾಗಿ ಅರಳಿದೆ ಎರಡು ನಕ್ಷತ್ರಗಳಾಗಿ ಮಿಂಚಿದೆ ಅರಸುವಾಗಿ ಚಂದನವನದ ಯುವರತ್ನನಾದೆ ವೀರ ಕನ್ನಡಿಗನಾಗಿ ಪೃಥ್ವಿಯ ಮೈತ್ರಿ ತೊರೆದು ಪರಮಾತ್ಮನ ಮಿಲನವಾದೆ ಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅಪ್ಪು ನೆನಪು ಎಂದಿಗೂ ಅಮರ, ಅಪ್ಪು ಎಂದೆಂದಿಗೂ ಅಜರಾಮರ. ಹ್ಯಾಪಿ ಬರ್ತಡೇ ಅಪ್ಪು. ಎಂದು ವೈದ್ಯಕೀಯ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಬೆಟ್ಟದ ಹೂವಾಗಿ ಅರಳಿದೆ
ಎರಡು ನಕ್ಷತ್ರಗಳಾಗಿ ಮಿಂಚಿದೆ
ಅರಸುವಾಗಿ ಚಂದನವನದ ಯುವರತ್ನನಾದೆ
ವೀರ ಕನ್ನಡಿಗನಾಗಿ ಪೃಥ್ವಿಯ ಮೈತ್ರಿ ತೊರೆದು ಪರಮಾತ್ಮನ ಮಿಲನವಾದೆಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅಪ್ಪು ನೆನಪು ಎಂದಿಗೂ ಅಮರ, ಅಪ್ಪು ಎಂದೆಂದಿಗೂ ಅಜರಾಮರ. ಹ್ಯಾಪಿ ಬರ್ತಡೇ ಅಪ್ಪು.
Happy Birthday #PuneethRajkumar pic.twitter.com/a3qyEOz9DW
— Dr Sudhakar K (@DrSudhakar_) March 17, 2022
ಪುನೀತ್ ರಾಜಕುಮಾರ್ ನಮ್ಮಿಂದ ಕಣ್ಮರೆಯಾಗಿದ್ದರೂ ಸರಳ, ಸಜ್ಜನಿಕೆ, ಪ್ರೀತಿ, ಆತ್ಮವಿಶ್ವಾಸದಿಂದ ಕೂಡಿದ್ದ ಅವರ ಪ್ರತಿಭಾಶಾಲಿ ವ್ಯಕ್ತಿತ್ವ ಪ್ರೇರಕಶಕ್ತಿಯಾಗಿ ಕೋಟ್ಯಂತರ ಹೃದಯದಲ್ಲಿ ಅಜರಾಮರ. ಹುಟ್ಟುಹಬ್ಬದ ದಿನ ಅಪ್ಪುವನ್ನು ಪ್ರೀತಿ ಮತ್ತು ದು:ಖದಿಂದ ಸ್ಮರಿಸುತ್ತೇನೆ. ಎಂದು ವಿರೋಧ ಪಕ್ಷದ ಮುಖ್ಯಸ್ಥ ಸಿದ್ಧರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಪುನೀತ್ ರಾಜಕುಮಾರ್ ನಮ್ಮಿಂದ ಕಣ್ಮರೆಯಾಗಿದ್ದರೂ ಸರಳ, ಸಜ್ಜನಿಕೆ, ಪ್ರೀತಿ, ಆತ್ಮವಿಶ್ವಾಸದಿಂದ ಕೂಡಿದ್ದ ಅವರ ಪ್ರತಿಭಾಶಾಲಿ ವ್ಯಕ್ತಿತ್ವ ಪ್ರೇರಕಶಕ್ತಿಯಾಗಿ ಕೋಟ್ಯಂತರ ಹೃದಯದಲ್ಲಿ ಅಜರಾಮರ.
ಹುಟ್ಟುಹಬ್ಬದ ದಿನ ಅಪ್ಪುವನ್ನು
ಪ್ರೀತಿ ಮತ್ತು ದು:ಖದಿಂದ ಸ್ಮರಿಸುತ್ತೇನೆ.#PuneethRajkumar𓃵 pic.twitter.com/5LON4rKjdR— Siddaramaiah (@siddaramaiah) March 17, 2022
What did BSY, Bommai and Siddaramaiah say at the birthday of Puneet?








