asia-cup-2022-india vs pakisthan match ವರ್ಲ್ಡ್ ಕಪ್ ಗೂ ಮುನ್ನ ಇಂಡೋ – ಪಾಕ್ ಕದನ
ಭಾರತೀಯ ಅಭಿಮಾನಿಗಳಿಗೆ ಸಂತಸದ ಸುದ್ದಿ. ದಾಯಾದಿಗಳ ಸಮರಕ್ಕೆ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ.
ಈ ಬಾರಿಯ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ.
ಈ ಬಾರಿಯ ಏಷ್ಯಾ ಕಪ್ ಟೂರ್ನಮೆಂಟ್ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ಶ್ರೀಲಂಕಾ ವೇದಿಕೆಯಾಗಲಿದೆ.
ಈ ಬಾರಿಯ ಏಷ್ಯನ್ ಕಪ್ ಟಿ 20 ಮಾದರಿಯಲ್ಲಿ ನಡೆಯಲಿದೆ. ಅದೇ ರೀತಿ ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸುತ್ತಿವೆ.
ಕೊರೊನಾದಿಂದಾಗಿ 2020 ರ ಏಷ್ಯಾಕಪ್ ಅನ್ನು ಮುಂದೂಡಲಾಗಿತ್ತು. 2018ರಲ್ಲಿ ಕೊನೆಯ ಬಾರಿಗೆ ಏಷ್ಯಾಕಪ್ ನಡೆದಿತ್ತು.
ಆಗ ಟೀಂ ಇಂಡಿಯಾ ಟ್ರೋಪಿಯನ್ನ ಮುಡಿಗೇರಿಸಿಕೊಂಡಿತ್ತು.
ಉಭಯ ದೇಶಗಳ ನಡುವಿನ ಉದ್ವಿಗ್ನತೆಯಿಂದಾಗಿ ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ.
ಹೀಗಾಗಿ ಐಸಿಸಿ ಟೂರ್ನಿಗಳಲ್ಲಿಯೇ ಇಂಡೋ ಪಾಕ್ ಕದನವನ್ನ ನಾವು ನೋಡುತ್ತಿದ್ದೇವೆ.
ಏಷ್ಯ ಕಪ್ ಬಳಿಕ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. asia-cup-2022-india vs pakisthan match









