ಅಸಂಖ್ಯ ಪ್ರಮಥರ ಗಣಮೇಳ ಮತ್ತು ಸರ್ವಶರಣದ ಸಮ್ಮೇಳನಕ್ಕೆ ಮುರುಘಾಮಠದ ಶ್ರೀಗಳಿಂದ ಧ್ವಜಾರೋಹಣ ಮಾಡೋ ಮೂಲಕ ಚಾಲನೆ ನೀಡಿದರು..
ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಬಿ.ವೈ ವಿಜಯೇಂದ್ರ ಸಾರಥ್ಯದಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ. ಡಿಸಿಎಂಗಳಾದ ಗೋವಿಂದ ಕಾರಾಜೋಳ, ಲಕ್ಷ್ಮಣ್ ಸವದಿ ಹಾಗೂ ಮಾಜಿಸಿಎಂ ಸಿದ್ದರಾಮಯ್ಯ ಸೇರಿ ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ.. ರಾಜ್ಯದ ೧೫೦೦ ಕ್ಕೂ ಹೆಚ್ಚು ಮಠಾಧೀಶರು ಹಾಗೂ ಲಕ್ಷಾಂತರ ಭಕ್ತರು ಭಾಗಿಯಾಗಿದ್ದಾರೆ..

ಜಾಗತಿಕ ಶಾಂತಿ, ಪ್ರಗತಿ ಸಂದೇಶ ಸಾರಲಿರುವ ಉದ್ದೇಶ ಪೂರ್ವಕವಾಗಿ ಏರ್ಪಡಿಸಲಾಗಿರುವ ಕಾರ್ಯಕ್ರಮದಲ್ಲಿ 25 ಸಾವಿರ ಶರಣರಿಂದ ಇಷ್ಟ ಲಿಂಗ ಪೂಜಾ ಕಾರ್ಯಕ್ರಮವನ್ನ ನೆರವೇರಿಸಲಾಯ್ತು..
https://www.youtube.com/watch?v=qJAdyf6rNkM&feature=youtu.be








