ADVERTISEMENT
Tuesday, October 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಬೇಸಿಗೆಯಲ್ಲಿ  ದೇಹವನ್ನ ಕಾಪಾಡಿಕೊಳ್ಳಲು, ನಿರ್ಜಲಿಕರಣ ತಪ್ಪಿಸಲು ಕೆಲವು ಸಲಹೆಗಳು…  

Naveen Kumar B C by Naveen Kumar B C
March 26, 2022
in Marjala Manthana, Newsbeat, ಮಾರ್ಜಲ ಮಂಥನ
water
Share on FacebookShare on TwitterShare on WhatsappShare on Telegram

ಬೇಸಿಗೆಯಲ್ಲಿ  ದೇಹವನ್ನ ಕಾಪಾಡಿಕೊಳ್ಳಲು, ನಿರ್ಜಲಿಕರಣ ತಪ್ಪಿಸಲು ಕೆಲವು ಸಲಹೆಗಳು…

ಬೇಸಿಗೆ ಬಂದ್ರೇ ಸಾಕು ನಮ್ಮ ದೇಹಕ್ಕೆ ಅತಿಹೆಚ್ಚು ದಾಹ ಉಂಟಾಗುತ್ತೆ. ಪದೇ ಪದೇ ನೀರು ಕುಡಿಬೇಕು ಅಂತನಿಸುತ್ತೆ.  ನಿಮ್ಮ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ನೀರಿದೆ ಎಂದು ಗೊತ್ತಾ ? ದೇಹಕ್ಕೆ ಎಷ್ಟು ನೀರು ಬೇಕು? ಅಥವಾ ದೇಹದಲ್ಲಿ ನೀರಿನ ಕೊರತೆ ಉಂಟಾದ್ರೆ ಯಾವ ಸಮಸ್ಯೆಗಳನ್ನು ಎದುರಿಸಬಹುದು ಎಂದು ಯೋಚಿಸಿದ್ದೀರಾ ?

ಈ ವೀಡಿಯೋದಲ್ಲಿ ನಾವು ನಿಮಗೆ ಈ ವಿಷಯಗಳ ಮೇಲೆ  ಮಾಹಿತಿ ನೀಡುತ್ತೇವೆ.  ನೀರಿನ ಕೊರತೆಯಿಂದ ಉಂಟಾಗುವ ಸಮಸ್ಯೆಗಳು, ಅದರ ಪರಿಹಾರಗಳು ಮತ್ತು ಮುನ್ನೆಚ್ಚರಿಕೆ ಕುರಿತು ತಿಳಿಸಿಕೊಡ್ತಿವಿ.

ಒಬ್ಬ ಮನುಷ್ಯನ ದೇಹಕ್ಕೆ ಎಷ್ಟು ನೀರು ಬೇಕು?

ಪ್ರತಿಯೊಬ್ಬ ವ್ಯಕ್ತಿಯ ದೇಹದ ತೂಕ ವಿಭಿನ್ನವಾಗಿರುತ್ತದೆ. ಅದಕ್ಕೆ ತಕ್ಕಂತೆ  ದೇಹದಲ್ಲಿ ನೀರಿನ ಅಗತ್ಯವೂ ಬದಲಾಗುತ್ತೆ.  ದೇಹದ ತೂಕಕ್ಕೆ ಅನುಗುಣವಾಗಿ ಎಷ್ಟು ನೀರು ಕುಡಿಯಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತೆ.  20 ಕೆಜಿ ತೂಕದ ದೇಹಕ್ಕೆ 1 ಲೀಟರ್ ನೀರು ಬೇಕು.  ಅದರಂತೆ, 70 ಕೆಜಿ ತೂಕದ ವ್ಯಕ್ತಿ  3.5 ಲೀಟರ್ ನೀರು ಕುಡಿಯಬೇಕು. 80 ಕೆಜಿ ತೂಕದ ವ್ಯಕ್ತಿ 4 ಲೀಟರ್ ನೀರು ಕುಡಿಯಬೇಕು.

ದೇಹದಲ್ಲಿ ಎಷ್ಟು ನೀರು ಇದೆ?

ದೇಹವನ್ನು ಆರೋಗ್ಯವಾಗಿಡಲು ಪೌಷ್ಠಿಕ ಆಹಾರ ಸೇವನೆ ಎಷ್ಟು ಅಗತ್ಯವೋ, ಶುದ್ಧ ನೀರು ಕುಡಿಯುವುದೂ ಅಷ್ಟೇ ಮುಖ್ಯ. ನಮ್ಮ ದೇಹ ಶೇಕಡ 65 ರಿಂದ 70 % ನೀರಿನಿಂದಲೇ ಆಗಿದೆ.  ನೀರು ನಮ್ಮ ದೇಹದ ಮೂಲಭೂತ ಅವಶ್ಯಕತೆ ಮಾತ್ರವಲ್ಲ, ದೇಹದಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀರು ಕಡಿಮೆಯಾದಾಗ, ಜನರು ನಿರ್ಜಲೀಕರಣಕ್ಕೆ ಒಳಗಾಗುತ್ತಾರೆ ಮತ್ತು ತುಂಬಾ ದುರ್ಬಲರಾಗುತ್ತಾರೆ.

ದೇಹದಲ್ಲಿ ನೀರಿನ ಕೊರತೆ ಏಕೆ?

 ಸೂರ್ಯನ ಬಿಸಿಲಿನ ತಾಪ ಹೆಚ್ಚಾಗಿದ್ದಾಗ ದೇಹಕ್ಕೆ ಹೆಚ್ಚು ನೀರು ಬೇಕಾಗುತ್ತದೆ.  ಬೆವರುವಿಕೆ,  ಶೌಚಾಲಯಕ್ಕೆ ಹೋಗುವುದು ಅಥವಾ ಕೆಲಸದ ಸಮಯದಲ್ಲಿ ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ.

ದೇಹದಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸಲು ಆಯುರ್ವೇದ ಪರಿಹಾರಗಳು

ಸೋಂಫು ಕಾಳು  – ಅನೇಕ ಸಲ ಅತಿಸಾರದಿಂದಾಗಿ, ದೇಹದ ಎಲ್ಲಾ ನೀರು ಹೊರಬರುತ್ತದೆ, ಇದರಿಂದಾಗಿ ವ್ಯಕ್ತಿಯು ನಿರ್ಜಲೀಕರಣಕ್ಕೆ ತುತ್ತಾಗುತ್ತಾನೆ.  ಅಂತಹ ಪರಿಸ್ಥಿತಿಯಲ್ಲಿ, ಒಂದು ಲೀಟರ್ ನೀರಿಗೆ ಸೋಫುಕಾಳುಗಳನ್ನ ಮಿಶ್ರಣ ಮಾಡಿ ದಿನಕ್ಕೆ ಎರಡರಿಂದ ನಾಲ್ಕು ಬಾರಿ ಕುಡಿಯಬೇಕು . ಆಯುರ್ವೇದದ ಪ್ರಕಾರ, ಸೋಂಪು ಕಾಳು ದೇಹವನ್ನ ತಂಪಾಗಿಸುತ್ತೆ.

ತುಳಸಿ-  ಎರಡು ಹನಿ ತುಳಸಿ ರಸವನ್ನ ಒಂದು ಕಪ್ ನೀರಿಗೆ ಹಾಕಿ ದಿನಕ್ಕೆರಡು ಬಾರಿ ಕುಡಿಯಿರಿ. ಇದು ನಿರ್ಜಲೀಕರಣಕ್ಕೆ ಉತ್ತಮ ಪರಿಹಾರ.  ಕಬ್ಬಿನ ರಸವನ್ನು  ನೀರಿನೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯಿರಿ.

ಅಂದಹಾಗೆ, ನೀವು ಎಷ್ಟು ನೀರು ಕುಡಿದರೂ ಯಾವುದೇ ತೊಂದರೆ ಇಲ್ಲ. ಬಾಯಾರಿಕೆ ತಡೆದುಕೊಂಡಷ್ಟು ಇನ್ನೂ ಹೆಚ್ಚು ಬಾಯಾರಿಕೆ ಉಂಟಾಗುತ್ತದೆ. ಇಂಥಹ ಸಮಯದಲ್ಲಿ ನಾವು ದೇಹಕ್ಕೆ ಅಗತ್ಯ ಇರುವುದಕ್ಕಿಂತಲೂ ಹೆಚ್ಚಿನ ನೀರನ್ನ ಕುಡಿಯುತ್ತೆವೆ. ನೀರು ಹೆಚ್ಚು ಕುಡಿದಾಗ ನಿಮ್ಮ ದೇಹದ  ಕಿಡ್ನಿ ಕೂಡ ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.  ಸಮಯದಲ್ಲಿ ಮೂತ್ರಪಿಂಡಗಳು ದುರ್ಬಲವಾಗಬಹುದು. ಆದ್ದರಿಂದ, ನಿಮಗೆ ಬಾಯಾರಿಕೆಯಾದಾಗ, ನೀವು ನೀರನ್ನು ಕುಡಿಯಬೇಕು.

ಅವಸರದಲ್ಲಿ ನೀರು ಕುಡಿಯಬೇಡಿ. ಸಿಪ್ ಬೈ ಸಿಪ್  ಆರಾಮವಾಗಿ ಕುಡಿಯಿರಿ, ಇದರಿಂದಾಗಿ ಅಮೈಲೇಸ್ನಂತಹ ಕೆಲವು ಕಿಣ್ವಗಳು ಬಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆರೆತು ಹೊಟ್ಟೆಗೆ ಹೋಗುತ್ತವೆ. ಇದು ಜೀರ್ಣಶಕ್ತಿಯನ್ನು ಸುಧಾರಿಸುವುದರ ಜೊತೆಗೆ ದೇಹವನ್ನು ಫಿಟ್ ಆಗಿ ಇಡುತ್ತದೆ,  ಆದ್ದರಿಂದ ನೀವು ನೀರನ್ನು ಕುಡಿಯುವಾಗ, ಶಾಂತವಾಗಿ ಕುಡಿಯಿರಿ.

ಕೆಲವೊಂದು ಆಹಾರಗಳನ್ನ ತಿಂದ ತಕ್ಷಣ ನೀರನ್ನ ಕುಡಿಯಬಾರದು,

ಹುರಿದ ಕಾಳು ತಿಂದ ತಕ್ಷಣ ನೀರು ಕುಡಿಯಬೇಡಿ.ಇದು  ಹೊಟ್ಟೆನೋವಿಗೆ ಕಾರಣವಾಗಬಹುದು.  ಹುರಿಗಡಲೆ ತಿಂದ ತಕ್ಷಣ ನೀರು ಕುಡಿದರೆ  ಹೊಟ್ಟೆ ಉಬ್ಬರ ಶುರುವಾಗುತ್ತದೆ.

Related posts

ಬಿಜೆಪಿ ಪತನದ ಕಾಲ ಹತ್ತಿರ ಬಂದಿದೆ: ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಒಗ್ಗಟ್ಟಾದ ಇಂಡಿಯಾ ಮೈತ್ರಿಕೂಟ

ಬಿಜೆಪಿ ಪತನದ ಕಾಲ ಹತ್ತಿರ ಬಂದಿದೆ: ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಒಗ್ಗಟ್ಟಾದ ಇಂಡಿಯಾ ಮೈತ್ರಿಕೂಟ

October 6, 2026
ಅ.15ರಿಂದ ₹2,000ಕ್ಕಿಂತ ಹೆಚ್ಚಿನ UPI ವ್ಯಾಪಾರಿ ಪಾವತಿಗೆ 0.4% MDR: ಗ್ರಾಹಕರಿಗೆ ನೇರ ಶುಲ್ಕವಿಲ್ಲ

ಅ.15ರಿಂದ ₹2,000ಕ್ಕಿಂತ ಹೆಚ್ಚಿನ UPI ವ್ಯಾಪಾರಿ ಪಾವತಿಗೆ 0.4% MDR: ಗ್ರಾಹಕರಿಗೆ ನೇರ ಶುಲ್ಕವಿಲ್ಲ

October 6, 2026

ಪೇರಳೆ ಹಣ್ಣು  ತಿಂದ ನಂತರ ನೀರು ಕುಡಿಯಬಾರದು. ಇದು ಹೊಟ್ಟೆಯಲ್ಲಿ ಗ್ಯಾಸ್  ಉಂಟು ಮಾಡುತ್ತದೆ.

ಕಲ್ಲಂಗಡಿ ಮತ್ತು ಕಲ್ಲಂಗಡಿ ತಿಂದ ನಂತರ ನೀರು ಕುಡಿಯಬಾರದು. ಕಲ್ಲಂಗಡಿಯಲ್ಲಿ ಸಾಕಷ್ಟು ನೀರಿನ ಅಂಶ ಇರುತ್ತದೆ,

ಟೀ ಅಥವಾ ಕಾಫಿ ಕುಡಿದ ನಂತರ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ನಿಧಾನಗತಿಯಲ್ಲಿ ಕೆಲಸ ಮಾಡುತ್ತದೆ,  ಹೊಟ್ಟೆ ಭಾರ ಅನಿಸೋಕೆ ಶುರುವಾಗುತ್ತೆ.

ಕಡಲೆಕಾಯಿ ಅಥವಾ ಶೇಂಗಾ ತಿಂದ ತಕ್ಷಣ ನಂತರ ನೀರು ಕುಡಿಯಬಾರದು. ಇದು ಕೆಮ್ಮಿಗೆ ಕಾರಣವಾಗಬಹುದು.

Tags: dehydrationsummer
ShareTweetSendShare
Join us on:

Related Posts

ಬಿಜೆಪಿ ಪತನದ ಕಾಲ ಹತ್ತಿರ ಬಂದಿದೆ: ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಒಗ್ಗಟ್ಟಾದ ಇಂಡಿಯಾ ಮೈತ್ರಿಕೂಟ

ಬಿಜೆಪಿ ಪತನದ ಕಾಲ ಹತ್ತಿರ ಬಂದಿದೆ: ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಒಗ್ಗಟ್ಟಾದ ಇಂಡಿಯಾ ಮೈತ್ರಿಕೂಟ

by Shwetha
October 6, 2026
0

ನವದೆಹಲಿ: ದೇಶದ ರಾಜಕಾರಣದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ ಮತ್ತು ಬಿಜೆಪಿಯ ಅಧಿಪತ್ಯ ಕುಸಿಯುವ ಕಾಲ ಹತ್ತಿರ ಬಂದಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಅವರು ಗುಡುಗಿದ್ದಾರೆ....

ಅ.15ರಿಂದ ₹2,000ಕ್ಕಿಂತ ಹೆಚ್ಚಿನ UPI ವ್ಯಾಪಾರಿ ಪಾವತಿಗೆ 0.4% MDR: ಗ್ರಾಹಕರಿಗೆ ನೇರ ಶುಲ್ಕವಿಲ್ಲ

ಅ.15ರಿಂದ ₹2,000ಕ್ಕಿಂತ ಹೆಚ್ಚಿನ UPI ವ್ಯಾಪಾರಿ ಪಾವತಿಗೆ 0.4% MDR: ಗ್ರಾಹಕರಿಗೆ ನೇರ ಶುಲ್ಕವಿಲ್ಲ

by Shwetha
October 6, 2026
0

ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್‌ (UPI) ಮೂಲಕ ನಡೆಯುವ ವ್ಯಕ್ತಿಯಿಂದ ವ್ಯಾಪಾರಿಗೆ (P2M) ವಹಿವಾಟುಗಳಿಗೆ ಅಕ್ಟೋಬರ್ 15, 2026ರಿಂದ ಹೊಸ ಮರ್ಚೆಂಟ್ ಡಿಸ್ಕೌಂಟ್ ರೇಟ್‌ (MDR) ಜಾರಿಗೆ ಬರಲಿದೆ....

ಪ್ರದೀಪ್ ಈಶ್ವರ್ ವಿಚಾರ ಮಾತಾಡೋ ಮೊದಲು ವಿಜಯೇಂದ್ರ ಯತ್ನಾಳ್ ಕಾಳಗ ನೋಡಿ: ಕೈ ಪಾಳಯದ ಒಳಜಗಳಕ್ಕಿಂತ ಕಮಲ ಪಡೆಯ ಬಣ ರಾಜಕೀಯವೇ ದೊಡ್ಡದು ಎಂದ ಬಿ ಕೆ ಹರಿಪ್ರಸಾದ್

ಪ್ರದೀಪ್ ಈಶ್ವರ್ ವಿಚಾರ ಮಾತಾಡೋ ಮೊದಲು ವಿಜಯೇಂದ್ರ ಯತ್ನಾಳ್ ಕಾಳಗ ನೋಡಿ: ಕೈ ಪಾಳಯದ ಒಳಜಗಳಕ್ಕಿಂತ ಕಮಲ ಪಡೆಯ ಬಣ ರಾಜಕೀಯವೇ ದೊಡ್ಡದು ಎಂದ ಬಿ ಕೆ ಹರಿಪ್ರಸಾದ್

by Shwetha
October 6, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮಾಜಿ ಸಚಿವ ಎಂ ಸಿ ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರ ತಾರಕಕ್ಕೇರಿರುವ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಬಿ...

ನೈಸ್‌ ಸಂಸ್ಥೆಗೆ ಸುಪ್ರೀಂನಲ್ಲಿ ಹಿನ್ನಡೆ: ಹೈಕೋರ್ಟ್‌ ಆದೇಶಕ್ಕೆ ಮಧ್ಯಂತರ ತಡೆ ಇಲ್ಲ

ನೈಸ್‌ ಸಂಸ್ಥೆಗೆ ಸುಪ್ರೀಂನಲ್ಲಿ ಹಿನ್ನಡೆ: ಹೈಕೋರ್ಟ್‌ ಆದೇಶಕ್ಕೆ ಮಧ್ಯಂತರ ತಡೆ ಇಲ್ಲ

by Shwetha
October 6, 2026
0

Lಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್‌ (BMIC) ಯೋಜನೆಗೆ ಸಂಬಂಧಿಸಿದ ಪ್ರಕರಣದಲ್ಲಿ ನೈಸ್‌ (NICE) ಸಂಸ್ಥೆಗೆ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಹಿನ್ನಡೆಯಾಗಿದೆ. ಕರ್ನಾಟಕ ಹೈಕೋರ್ಟ್‌ ನೀಡಿರುವ ಮಹತ್ವದ ಆದೇಶಕ್ಕೆ ತಕ್ಷಣದ ಮಧ್ಯಂತರ...

ಅಧಿಕಾರ ಇರಲಿ ಬಿಡಲಿ ಜನರ ಸೇವೆ ಮಾಡ್ತೀನಿ:2028ರ ಅಖಾಡಕ್ಕೆ ಸಿದ್ದರಾಮಯ್ಯ ಎಂಟ್ರಿ ಇರುತ್ತಾ ಅಥವಾ ಇಲ್ವಾ? ಅಭಿಮಾನಿಗಳ ಒತ್ತಾಯಕ್ಕೆ ಸೈಲೆಂಟ್ ಆದ ಹಿರಿಯ ನಾಯಕ

ಅಧಿಕಾರ ಇರಲಿ ಬಿಡಲಿ ಜನರ ಸೇವೆ ಮಾಡ್ತೀನಿ:2028ರ ಅಖಾಡಕ್ಕೆ ಸಿದ್ದರಾಮಯ್ಯ ಎಂಟ್ರಿ ಇರುತ್ತಾ ಅಥವಾ ಇಲ್ವಾ? ಅಭಿಮಾನಿಗಳ ಒತ್ತಾಯಕ್ಕೆ ಸೈಲೆಂಟ್ ಆದ ಹಿರಿಯ ನಾಯಕ

by Shwetha
October 6, 2026
0

ಮೈಸೂರು: ತಮ್ಮ ರಾಜಕೀಯ ಜೀವನದ ಏರಿಳಿತಗಳಿಗೆ ಸಾಕ್ಷಿಯಾದ ವರುಣ ಕ್ಷೇತ್ರದ ದಾಸನೂರು ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಭಾವುಕರಾಗಿ ಮಾತನಾಡಿದರು. ವಿವಿಧ ಅಭಿವೃದ್ಧಿ ಕಾಮಗಾರಿಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram