ಬೇಸಿಗೆಯಲ್ಲಿ ದೇಹವನ್ನ ಕಾಪಾಡಿಕೊಳ್ಳಲು, ನಿರ್ಜಲಿಕರಣ ತಪ್ಪಿಸಲು ಕೆಲವು ಸಲಹೆಗಳು…
ಬೇಸಿಗೆ ಬಂದ್ರೇ ಸಾಕು ನಮ್ಮ ದೇಹಕ್ಕೆ ಅತಿಹೆಚ್ಚು ದಾಹ ಉಂಟಾಗುತ್ತೆ. ಪದೇ ಪದೇ ನೀರು ಕುಡಿಬೇಕು ಅಂತನಿಸುತ್ತೆ. ನಿಮ್ಮ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ನೀರಿದೆ ಎಂದು ಗೊತ್ತಾ ? ದೇಹಕ್ಕೆ ಎಷ್ಟು ನೀರು ಬೇಕು? ಅಥವಾ ದೇಹದಲ್ಲಿ ನೀರಿನ ಕೊರತೆ ಉಂಟಾದ್ರೆ ಯಾವ ಸಮಸ್ಯೆಗಳನ್ನು ಎದುರಿಸಬಹುದು ಎಂದು ಯೋಚಿಸಿದ್ದೀರಾ ?
ಈ ವೀಡಿಯೋದಲ್ಲಿ ನಾವು ನಿಮಗೆ ಈ ವಿಷಯಗಳ ಮೇಲೆ ಮಾಹಿತಿ ನೀಡುತ್ತೇವೆ. ನೀರಿನ ಕೊರತೆಯಿಂದ ಉಂಟಾಗುವ ಸಮಸ್ಯೆಗಳು, ಅದರ ಪರಿಹಾರಗಳು ಮತ್ತು ಮುನ್ನೆಚ್ಚರಿಕೆ ಕುರಿತು ತಿಳಿಸಿಕೊಡ್ತಿವಿ.
ಒಬ್ಬ ಮನುಷ್ಯನ ದೇಹಕ್ಕೆ ಎಷ್ಟು ನೀರು ಬೇಕು?
ಪ್ರತಿಯೊಬ್ಬ ವ್ಯಕ್ತಿಯ ದೇಹದ ತೂಕ ವಿಭಿನ್ನವಾಗಿರುತ್ತದೆ. ಅದಕ್ಕೆ ತಕ್ಕಂತೆ ದೇಹದಲ್ಲಿ ನೀರಿನ ಅಗತ್ಯವೂ ಬದಲಾಗುತ್ತೆ. ದೇಹದ ತೂಕಕ್ಕೆ ಅನುಗುಣವಾಗಿ ಎಷ್ಟು ನೀರು ಕುಡಿಯಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತೆ. 20 ಕೆಜಿ ತೂಕದ ದೇಹಕ್ಕೆ 1 ಲೀಟರ್ ನೀರು ಬೇಕು. ಅದರಂತೆ, 70 ಕೆಜಿ ತೂಕದ ವ್ಯಕ್ತಿ 3.5 ಲೀಟರ್ ನೀರು ಕುಡಿಯಬೇಕು. 80 ಕೆಜಿ ತೂಕದ ವ್ಯಕ್ತಿ 4 ಲೀಟರ್ ನೀರು ಕುಡಿಯಬೇಕು.
ದೇಹದಲ್ಲಿ ಎಷ್ಟು ನೀರು ಇದೆ?
ದೇಹವನ್ನು ಆರೋಗ್ಯವಾಗಿಡಲು ಪೌಷ್ಠಿಕ ಆಹಾರ ಸೇವನೆ ಎಷ್ಟು ಅಗತ್ಯವೋ, ಶುದ್ಧ ನೀರು ಕುಡಿಯುವುದೂ ಅಷ್ಟೇ ಮುಖ್ಯ. ನಮ್ಮ ದೇಹ ಶೇಕಡ 65 ರಿಂದ 70 % ನೀರಿನಿಂದಲೇ ಆಗಿದೆ. ನೀರು ನಮ್ಮ ದೇಹದ ಮೂಲಭೂತ ಅವಶ್ಯಕತೆ ಮಾತ್ರವಲ್ಲ, ದೇಹದಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀರು ಕಡಿಮೆಯಾದಾಗ, ಜನರು ನಿರ್ಜಲೀಕರಣಕ್ಕೆ ಒಳಗಾಗುತ್ತಾರೆ ಮತ್ತು ತುಂಬಾ ದುರ್ಬಲರಾಗುತ್ತಾರೆ.
ದೇಹದಲ್ಲಿ ನೀರಿನ ಕೊರತೆ ಏಕೆ?
ಸೂರ್ಯನ ಬಿಸಿಲಿನ ತಾಪ ಹೆಚ್ಚಾಗಿದ್ದಾಗ ದೇಹಕ್ಕೆ ಹೆಚ್ಚು ನೀರು ಬೇಕಾಗುತ್ತದೆ. ಬೆವರುವಿಕೆ, ಶೌಚಾಲಯಕ್ಕೆ ಹೋಗುವುದು ಅಥವಾ ಕೆಲಸದ ಸಮಯದಲ್ಲಿ ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ.
ದೇಹದಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸಲು ಆಯುರ್ವೇದ ಪರಿಹಾರಗಳು
ಸೋಂಫು ಕಾಳು – ಅನೇಕ ಸಲ ಅತಿಸಾರದಿಂದಾಗಿ, ದೇಹದ ಎಲ್ಲಾ ನೀರು ಹೊರಬರುತ್ತದೆ, ಇದರಿಂದಾಗಿ ವ್ಯಕ್ತಿಯು ನಿರ್ಜಲೀಕರಣಕ್ಕೆ ತುತ್ತಾಗುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಒಂದು ಲೀಟರ್ ನೀರಿಗೆ ಸೋಫುಕಾಳುಗಳನ್ನ ಮಿಶ್ರಣ ಮಾಡಿ ದಿನಕ್ಕೆ ಎರಡರಿಂದ ನಾಲ್ಕು ಬಾರಿ ಕುಡಿಯಬೇಕು . ಆಯುರ್ವೇದದ ಪ್ರಕಾರ, ಸೋಂಪು ಕಾಳು ದೇಹವನ್ನ ತಂಪಾಗಿಸುತ್ತೆ.
ತುಳಸಿ- ಎರಡು ಹನಿ ತುಳಸಿ ರಸವನ್ನ ಒಂದು ಕಪ್ ನೀರಿಗೆ ಹಾಕಿ ದಿನಕ್ಕೆರಡು ಬಾರಿ ಕುಡಿಯಿರಿ. ಇದು ನಿರ್ಜಲೀಕರಣಕ್ಕೆ ಉತ್ತಮ ಪರಿಹಾರ. ಕಬ್ಬಿನ ರಸವನ್ನು ನೀರಿನೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯಿರಿ.
ಅಂದಹಾಗೆ, ನೀವು ಎಷ್ಟು ನೀರು ಕುಡಿದರೂ ಯಾವುದೇ ತೊಂದರೆ ಇಲ್ಲ. ಬಾಯಾರಿಕೆ ತಡೆದುಕೊಂಡಷ್ಟು ಇನ್ನೂ ಹೆಚ್ಚು ಬಾಯಾರಿಕೆ ಉಂಟಾಗುತ್ತದೆ. ಇಂಥಹ ಸಮಯದಲ್ಲಿ ನಾವು ದೇಹಕ್ಕೆ ಅಗತ್ಯ ಇರುವುದಕ್ಕಿಂತಲೂ ಹೆಚ್ಚಿನ ನೀರನ್ನ ಕುಡಿಯುತ್ತೆವೆ. ನೀರು ಹೆಚ್ಚು ಕುಡಿದಾಗ ನಿಮ್ಮ ದೇಹದ ಕಿಡ್ನಿ ಕೂಡ ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಸಮಯದಲ್ಲಿ ಮೂತ್ರಪಿಂಡಗಳು ದುರ್ಬಲವಾಗಬಹುದು. ಆದ್ದರಿಂದ, ನಿಮಗೆ ಬಾಯಾರಿಕೆಯಾದಾಗ, ನೀವು ನೀರನ್ನು ಕುಡಿಯಬೇಕು.
ಅವಸರದಲ್ಲಿ ನೀರು ಕುಡಿಯಬೇಡಿ. ಸಿಪ್ ಬೈ ಸಿಪ್ ಆರಾಮವಾಗಿ ಕುಡಿಯಿರಿ, ಇದರಿಂದಾಗಿ ಅಮೈಲೇಸ್ನಂತಹ ಕೆಲವು ಕಿಣ್ವಗಳು ಬಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆರೆತು ಹೊಟ್ಟೆಗೆ ಹೋಗುತ್ತವೆ. ಇದು ಜೀರ್ಣಶಕ್ತಿಯನ್ನು ಸುಧಾರಿಸುವುದರ ಜೊತೆಗೆ ದೇಹವನ್ನು ಫಿಟ್ ಆಗಿ ಇಡುತ್ತದೆ, ಆದ್ದರಿಂದ ನೀವು ನೀರನ್ನು ಕುಡಿಯುವಾಗ, ಶಾಂತವಾಗಿ ಕುಡಿಯಿರಿ.
ಕೆಲವೊಂದು ಆಹಾರಗಳನ್ನ ತಿಂದ ತಕ್ಷಣ ನೀರನ್ನ ಕುಡಿಯಬಾರದು,
ಹುರಿದ ಕಾಳು ತಿಂದ ತಕ್ಷಣ ನೀರು ಕುಡಿಯಬೇಡಿ.ಇದು ಹೊಟ್ಟೆನೋವಿಗೆ ಕಾರಣವಾಗಬಹುದು. ಹುರಿಗಡಲೆ ತಿಂದ ತಕ್ಷಣ ನೀರು ಕುಡಿದರೆ ಹೊಟ್ಟೆ ಉಬ್ಬರ ಶುರುವಾಗುತ್ತದೆ.
ಪೇರಳೆ ಹಣ್ಣು ತಿಂದ ನಂತರ ನೀರು ಕುಡಿಯಬಾರದು. ಇದು ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡುತ್ತದೆ.
ಕಲ್ಲಂಗಡಿ ಮತ್ತು ಕಲ್ಲಂಗಡಿ ತಿಂದ ನಂತರ ನೀರು ಕುಡಿಯಬಾರದು. ಕಲ್ಲಂಗಡಿಯಲ್ಲಿ ಸಾಕಷ್ಟು ನೀರಿನ ಅಂಶ ಇರುತ್ತದೆ,
ಟೀ ಅಥವಾ ಕಾಫಿ ಕುಡಿದ ನಂತರ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ನಿಧಾನಗತಿಯಲ್ಲಿ ಕೆಲಸ ಮಾಡುತ್ತದೆ, ಹೊಟ್ಟೆ ಭಾರ ಅನಿಸೋಕೆ ಶುರುವಾಗುತ್ತೆ.
ಕಡಲೆಕಾಯಿ ಅಥವಾ ಶೇಂಗಾ ತಿಂದ ತಕ್ಷಣ ನಂತರ ನೀರು ಕುಡಿಯಬಾರದು. ಇದು ಕೆಮ್ಮಿಗೆ ಕಾರಣವಾಗಬಹುದು.