ADVERTISEMENT
Tuesday, July 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2022 | RCBನಲ್ಲಿ ಐಪಿಎಲ್ ನ ಲಕ್ಕಿ ಪ್ಲೇಯರ್

Mahesh M Dhandu by Mahesh M Dhandu
March 27, 2022
in Newsbeat, Saaksha Special, ಎಸ್ ಸ್ಪೆಷಲ್
RCB has bought Trophy collector KARN Sharma saaksha tv
Share on FacebookShare on TwitterShare on WhatsappShare on Telegram

IPL 2022 | RCBನಲ್ಲಿ ಐಪಿಎಲ್ ನ ಲಕ್ಕಿ ಪ್ಲೇಯರ್

ಪಂಜಾಬ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಅಭಿಯಾನ ಆರಂಭಿಸಲಿದೆ. ಪ್ರತಿ ಬಾರಿಯಂತೆ ಈ ಸಲ ಕಪ್ ಗೆಲ್ಲುವ ವಿಶ್ವಾಸದಿಂದಲೇ ಆರ್ ಸಿಬಿ ನೆಟ್ಸ್ ಗಳಲ್ಲಿ ಪ್ರಾಕ್ಟೀಸ್ ಮಾಡಿದೆ.

Related posts

ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

July 14, 2026
ಇರಾನ್ ಮೇಲೆ ಅಮೆರಿಕ ಭೀಕರ ದಾಳಿ; ಪ್ರತಿದಾಳಿಯ ದಾವೆ ಮಾಡಿದ ಟೆಹ್ರಾನ್

ಇರಾನ್ ಮೇಲೆ ಅಮೆರಿಕ ಭೀಕರ ದಾಳಿ; ಪ್ರತಿದಾಳಿಯ ದಾವೆ ಮಾಡಿದ ಟೆಹ್ರಾನ್

July 14, 2026

ತಂಡದಲ್ಲಿ  ಬಲಿಷ್ಠ ಆಟಗಾರರ ದಂಡೇ ಇದ್ದರೂ ಪ್ರತಿ ಬಾರಿ  ಆರ್ ಸಿಬಿಗೆ ಲಕ್ ಕೈ ಕೊಡುತ್ತಿದೆ. ಆದ್ರೆ  ಈ ಬಾರಿ ರಾಯಲ್  ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಲಕ್ಕಿ ಪ್ಲೇಯರ್ ಎಂಟ್ರಿ ಆಗಿದೆ. ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಆ ಲಕ್ಕಿ ಪ್ಲೇಯರ್ ಯಾವ ಯಾವ ತಂಡವನ್ನ ಪ್ರತಿನಿಧಿಸಿದ್ದಾರೋ ಆ ತಂಡಗಳು ಚಾಂಪಿಯನ್ ಆಗಿವೆ.

ಅಂತಹ ಲಕ್ಕಿ ಲೆಗ್ ಈಗ ನಮ್ಮ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು  ಬೇರೆ ಯಾರು ಅಲ್ಲ ಸ್ಪಿನ್ ಆಲ್ ರೌಂಡರ್ ಕರ್ಣ್ ಶರ್ಮಾ…!!!

ಹೌದು..!  ಐಪಿಎಲ್‌ನಲ್ಲಿ ಅದೃಷ್ಟಶಾಲಿ ಆಟಗಾರ ಯಾರು ಅಂದ್ರೆ ಕರ್ಣಶರ್ಮ ಅವರ ಹೆಸರನ್ನು ಸಂಕೋಚವಿಲ್ಲದೆ ಹೇಳಬಹುದು. ಏಕೆಂದರೆ, ಆರ್‌ಸಿಬಿ ಹೊರತುಪಡಿಸಿ, ಅವರು ಕಾಲಿಟ್ಟ ಪ್ರತಿ ಐಪಿಎಲ್ ತಂಡವೂ ಪ್ರಶಸ್ತಿ ಗೆದ್ದಿದೆ.

 2016ರ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌  ಪರವಾಗಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದ ಕರ್ಣ್ ಶರ್ಮಾ, ಅದಾದ ಬಳಿ ಮುಂಬೈ ಇಂಡಿಯನ್ಸ್ ಪಾಳಯ ಸೇರಿಕೊಂಡು ಪ್ರಶಸ್ತಿಗೆ ಮುತ್ತಿಟ್ಟರು. ನಂತರ 2018 ರ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಕರ್ಣ್ ಶರ್ಮಾ ಸತತ ಮೂರನೇ ವರ್ಷ IPL ಪ್ರಶಸ್ತಿಯನ್ನು ಗೆದ್ದರು. ಅಲ್ಲದೇ ಸತತ ಮೂರು ಋತುಗಳಲ್ಲಿ ಮೂರು ವಿಭಿನ್ನ ತಂಡಗಳಿಗಾಗಿ IPL ಪ್ರಶಸ್ತಿಯನ್ನು ಗೆದ್ದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದ್ರೆ 2019 ಮತ್ತು 2020 ರಲ್ಲಿ ಕರ್ಣ್ ಶರ್ಮಾ ಲಕ್ ಗೆ ಬ್ರೇಕ್ ಬಿದ್ದಿತ್ತು. 

RCB has bought Trophy collector KARN Sharma saaksha tv

ಇದಾದ ಬಳಿಕ 2021 ಐಪಿಎಲ್ ಮೂಲಕ ಕರ್ಣ್ ಅದೃಷ್ಠದ ಜರ್ನಿ ಮತ್ತೆ ಆರಂಭವಾಗಿದೆ. ಕಳೆದ ವರ್ಷ ದುಬೈನಲ್ಲಿ  ನಡೆದ 14ನೇ ಆವೃತ್ತಿಯ ಐಪಿಎಲ್ ನಲ್ಲಿ  ಕರ್ಣ್ ಶರ್ಮಾ ಸಿಎಸ್ ಕೆ ತಂಡದ  ಬೌಲಿಂಗ್ ಮಾಡಿದ್ದರು. ಈ ಆವೃತ್ತಿಯಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿದೆ.

ಅಂದಹಾಗೆ ಉತ್ತರ ಪ್ರದೇಶದ 34 ವರ್ಷದ ಕರ್ಣ್ ಶರ್ಮಾ ಅವರು ಸ್ಪಿನ್ ಆಲ್ ರೌಂಡರ್ ಆಗಿ ಐಪಿಎಲ್ ಪ್ರವೇಶಿಸಿದ್ರು. ಅವರು 2009 ರ ಋತುವಿನಲ್ಲಿ RCB ಗೆ ಆಯ್ಕೆಯಾದ್ರೂ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ತದನಂತೆ ಕರ್ಣ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ 2013 ರಿಂದ 2016 ರವರೆಗೆ ಬೌಲಿಂಗ್ ಮಾಡಿದರು. ನಂತರ 2017 ರಲ್ಲಿ ಮುಂಬೈ ಇಂಡಿಯನ್ಸ್, 2018ರಿಂದ 2021ರವರೆಗೆ ಚೆನ್ನೈ ಸೂಪರ್ ಕಿಂಗ್ಸ್  ತಂಡಗಳಿಗಾಗಿ ಆಡಿದ್ದಾರೆ.

ಒಟ್ಟಾರೆ ಕರ್ಣ್ ಶರ್ಮಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 68 ಪಂದ್ಯಗಳಲ್ಲಿ 31 ವಿಕೆಟ್ ಪಡೆದಿದ್ದಾರೆ. ಮತ್ತು 15.1 ಸರಾಸರಿಯಲ್ಲಿ 316 ರನ್ ಗಳಿಸಿದ್ದಾರೆ. RCB has bought Trophy collector KARN Sharma

Tags: #Saaksha TVcskIPLipl 2022miRCB
ShareTweetSendShare
Join us on:

Related Posts

ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

by Shwetha
July 14, 2026
0

ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಅವರು ಸದ್ಯ ಮದರ್ ಪ್ರಾಮಿಸ್ ಚಿತ್ರದ ಕುರಿತು ನಡೆಯುತ್ತಿರುವ ನೆಗೆಟಿವ್ ಪ್ರಚಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜುಲೈ...

ಇರಾನ್ ಮೇಲೆ ಅಮೆರಿಕ ಭೀಕರ ದಾಳಿ; ಪ್ರತಿದಾಳಿಯ ದಾವೆ ಮಾಡಿದ ಟೆಹ್ರಾನ್

ಇರಾನ್ ಮೇಲೆ ಅಮೆರಿಕ ಭೀಕರ ದಾಳಿ; ಪ್ರತಿದಾಳಿಯ ದಾವೆ ಮಾಡಿದ ಟೆಹ್ರಾನ್

by Shwetha
July 14, 2026
0

ಇರಾನ್‌ನ ಹೇಳಿಕೆಯ ಪ್ರಕಾರ, ಅಮೆರಿಕ ಮಧ್ಯರಾತ್ರಿಯಿಂದ ಕ್ಷಿಪಣಿಗಳು ಮತ್ತು ಬಾಂಬ್‌ಗಳ ಮೂಲಕ ಇರಾನ್ ಮೇಲೆ ತೀವ್ರ ದಾಳಿ ನಡೆಸಿದೆ. ಈ ದಾಳಿಯಲ್ಲಿ ಬಂದರ್ ಅಬ್ಬಾಸ್ ಬಂದರು, ಕೇಶ್...

ಚಿಲ್ಲರೆ ನೆಪದಲ್ಲಿ ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸುವಂತಿಲ್ಲ:ಸಿಬ್ಬಂದಿಗೆ ಸೌಜನ್ಯದ ಪಾಠ ಹೇಳಿದ ಸಾರಿಗೆ ಸಚಿವ ಭೈರತಿ ಸುರೇಶ್

ಚಿಲ್ಲರೆ ನೆಪದಲ್ಲಿ ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸುವಂತಿಲ್ಲ:ಸಿಬ್ಬಂದಿಗೆ ಸೌಜನ್ಯದ ಪಾಠ ಹೇಳಿದ ಸಾರಿಗೆ ಸಚಿವ ಭೈರತಿ ಸುರೇಶ್

by Shwetha
July 14, 2026
0

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ಗಳಲ್ಲಿ ಚಿಲ್ಲರೆ ಇಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸುವಂತಿಲ್ಲ ಎಂದು ಸಂಸ್ಥೆಯು ತನ್ನ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ...

ಕಚ್ಚಾ ತೈಲ ಬೆಲೆಯಲ್ಲಿ ಮತ್ತೆ ಏರಿಕೆ; ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಗೆ ಅನಿಶ್ಚಿತತೆ

ಕಚ್ಚಾ ತೈಲ ಬೆಲೆಯಲ್ಲಿ ಮತ್ತೆ ಏರಿಕೆ; ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಗೆ ಅನಿಶ್ಚಿತತೆ

by Shwetha
July 14, 2026
0

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತೆ ಏರಿಕೆಯಾಗಿದ್ದು, ಇರಾನ್–ಅಮೆರಿಕ ನಡುವಿನ ಉದ್ವಿಗ್ನತೆಯಿಂದ ಹಾರ್ಮುಜ್ ಜಲಸಂಧಿಯ ಹಡಗು ಸಂಚಾರದ ಮೇಲೆ ಪರಿಣಾಮ ಉಂಟಾಗಿರುವುದು ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ....

ನಾವು ಲಿಂಗಾಯತರು ನಾನ್ ವೆಜ್ ಮಾಡಲ್ಲ ಆದರೆ ನನಗೆ ಚಿಕನ್ ಬಿರಿಯಾನಿ ಅಂದ್ರೆ ಇಷ್ಟ: ಬಿಗ್ ಬಾಸ್ ಜಾಹ್ನವಿ ಹೇಳಿಕೆ ವೈರಲ್

ನಾವು ಲಿಂಗಾಯತರು ನಾನ್ ವೆಜ್ ಮಾಡಲ್ಲ ಆದರೆ ನನಗೆ ಚಿಕನ್ ಬಿರಿಯಾನಿ ಅಂದ್ರೆ ಇಷ್ಟ: ಬಿಗ್ ಬಾಸ್ ಜಾಹ್ನವಿ ಹೇಳಿಕೆ ವೈರಲ್

by Shwetha
July 14, 2026
0

ನ್ಯೂಸ್ ಆಂಕರ್ ಆಗಿ ವೃತ್ತಿ ಜೀವನ ಆರಂಭಿಸಿ ಬಿಗ್ ಬಾಸ್ ಕನ್ನಡ ಸೀಸನ್ 12 ರ ಮೂಲಕ ಮನೆಮಾತಾಗಿದ್ದ ಜಾಹ್ನವಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದಾ ಒಂದಲ್ಲ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram