IPL 2022 | RCBನಲ್ಲಿ ಐಪಿಎಲ್ ನ ಲಕ್ಕಿ ಪ್ಲೇಯರ್
ಪಂಜಾಬ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಅಭಿಯಾನ ಆರಂಭಿಸಲಿದೆ. ಪ್ರತಿ ಬಾರಿಯಂತೆ ಈ ಸಲ ಕಪ್ ಗೆಲ್ಲುವ ವಿಶ್ವಾಸದಿಂದಲೇ ಆರ್ ಸಿಬಿ ನೆಟ್ಸ್ ಗಳಲ್ಲಿ ಪ್ರಾಕ್ಟೀಸ್ ಮಾಡಿದೆ.
ತಂಡದಲ್ಲಿ ಬಲಿಷ್ಠ ಆಟಗಾರರ ದಂಡೇ ಇದ್ದರೂ ಪ್ರತಿ ಬಾರಿ ಆರ್ ಸಿಬಿಗೆ ಲಕ್ ಕೈ ಕೊಡುತ್ತಿದೆ. ಆದ್ರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಲಕ್ಕಿ ಪ್ಲೇಯರ್ ಎಂಟ್ರಿ ಆಗಿದೆ. ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಆ ಲಕ್ಕಿ ಪ್ಲೇಯರ್ ಯಾವ ಯಾವ ತಂಡವನ್ನ ಪ್ರತಿನಿಧಿಸಿದ್ದಾರೋ ಆ ತಂಡಗಳು ಚಾಂಪಿಯನ್ ಆಗಿವೆ.
ಅಂತಹ ಲಕ್ಕಿ ಲೆಗ್ ಈಗ ನಮ್ಮ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಬೇರೆ ಯಾರು ಅಲ್ಲ ಸ್ಪಿನ್ ಆಲ್ ರೌಂಡರ್ ಕರ್ಣ್ ಶರ್ಮಾ…!!!
ಹೌದು..! ಐಪಿಎಲ್‌ನಲ್ಲಿ ಅದೃಷ್ಟಶಾಲಿ ಆಟಗಾರ ಯಾರು ಅಂದ್ರೆ ಕರ್ಣಶರ್ಮ ಅವರ ಹೆಸರನ್ನು ಸಂಕೋಚವಿಲ್ಲದೆ ಹೇಳಬಹುದು. ಏಕೆಂದರೆ, ಆರ್‌ಸಿಬಿ ಹೊರತುಪಡಿಸಿ, ಅವರು ಕಾಲಿಟ್ಟ ಪ್ರತಿ ಐಪಿಎಲ್ ತಂಡವೂ ಪ್ರಶಸ್ತಿ ಗೆದ್ದಿದೆ.
2016ರ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದ ಕರ್ಣ್ ಶರ್ಮಾ, ಅದಾದ ಬಳಿ ಮುಂಬೈ ಇಂಡಿಯನ್ಸ್ ಪಾಳಯ ಸೇರಿಕೊಂಡು ಪ್ರಶಸ್ತಿಗೆ ಮುತ್ತಿಟ್ಟರು. ನಂತರ 2018 ರ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಕರ್ಣ್ ಶರ್ಮಾ ಸತತ ಮೂರನೇ ವರ್ಷ IPL ಪ್ರಶಸ್ತಿಯನ್ನು ಗೆದ್ದರು. ಅಲ್ಲದೇ ಸತತ ಮೂರು ಋತುಗಳಲ್ಲಿ ಮೂರು ವಿಭಿನ್ನ ತಂಡಗಳಿಗಾಗಿ IPL ಪ್ರಶಸ್ತಿಯನ್ನು ಗೆದ್ದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದ್ರೆ 2019 ಮತ್ತು 2020 ರಲ್ಲಿ ಕರ್ಣ್ ಶರ್ಮಾ ಲಕ್ ಗೆ ಬ್ರೇಕ್ ಬಿದ್ದಿತ್ತು.
ಇದಾದ ಬಳಿಕ 2021 ಐಪಿಎಲ್ ಮೂಲಕ ಕರ್ಣ್ ಅದೃಷ್ಠದ ಜರ್ನಿ ಮತ್ತೆ ಆರಂಭವಾಗಿದೆ. ಕಳೆದ ವರ್ಷ ದುಬೈನಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್ ನಲ್ಲಿ ಕರ್ಣ್ ಶರ್ಮಾ ಸಿಎಸ್ ಕೆ ತಂಡದ ಬೌಲಿಂಗ್ ಮಾಡಿದ್ದರು. ಈ ಆವೃತ್ತಿಯಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿದೆ.
ಅಂದಹಾಗೆ ಉತ್ತರ ಪ್ರದೇಶದ 34 ವರ್ಷದ ಕರ್ಣ್ ಶರ್ಮಾ ಅವರು ಸ್ಪಿನ್ ಆಲ್ ರೌಂಡರ್ ಆಗಿ ಐಪಿಎಲ್ ಪ್ರವೇಶಿಸಿದ್ರು. ಅವರು 2009 ರ ಋತುವಿನಲ್ಲಿ RCB ಗೆ ಆಯ್ಕೆಯಾದ್ರೂ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ತದನಂತೆ ಕರ್ಣ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ 2013 ರಿಂದ 2016 ರವರೆಗೆ ಬೌಲಿಂಗ್ ಮಾಡಿದರು. ನಂತರ 2017 ರಲ್ಲಿ ಮುಂಬೈ ಇಂಡಿಯನ್ಸ್, 2018ರಿಂದ 2021ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿಗಾಗಿ ಆಡಿದ್ದಾರೆ.
ಒಟ್ಟಾರೆ ಕರ್ಣ್ ಶರ್ಮಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 68 ಪಂದ್ಯಗಳಲ್ಲಿ 31 ವಿಕೆಟ್ ಪಡೆದಿದ್ದಾರೆ. ಮತ್ತು 15.1 ಸರಾಸರಿಯಲ್ಲಿ 316 ರನ್ ಗಳಿಸಿದ್ದಾರೆ. RCB has bought Trophy collector KARN Sharma