5 ದಶಕಗಳಿಂದ 2 ರಾಜ್ಯಗಳ ಮಧ್ಯೆ ಇದ್ದ ಗಡಿ ಸಮಸ್ಯೆಗೆ ತಿಲಾಂಜಲಿ
ನವದೆಹಲಿ: ಅಸ್ಸೋಂ-ಮೇಘಾಲಯ ನಡುವೆ ಇದ್ದ ಗಡಿ ಸಮಸ್ಯೆ ಸಂಘರ್ಷ ಅಂತ್ಯ ಕಂಡಿದೆ.
ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಭಯ ರಾಜ್ಯದ ಮುಖ್ಯಮಂತ್ರಗಳು, ಗಡಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದು, ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ 50 ವರ್ಷಗಳಿಂದ ಉಂಟಾಗಿದ್ದ ಗಡಿ ಸಂಘರ್ಷ ಅಂತ್ಯಗೊಂಡಿದೆ.
ಗೃಹ ಸಚಿವಾಲಯದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮೇಘಾಲಯದ ಸರ್ಕಾರದ ಪರವಾಗಿ 11 ಪ್ರತಿನಿಧಿಗಳು ಹಾಗೂ ಅಸ್ಸೋಂ ಪರವಾಗಿ 9 ಪ್ರತಿನಿಧಿಗಳು ಭಾಗಿಯಾಗಿದ್ದರು. ಪ್ರಮುಖವಾಗಿ ಅಸ್ಸೋಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಹಾಗೂ ಮೇಘಾಲಯದ ಸಿಎಂ ಕಾನ್ರಾಡ್ ಸಂಗ್ಮಾ ಉಪಸ್ಥಿತರಿದ್ದರು.
https://twitter.com/ANI/status/1508751188178612228?ref_src=twsrc%5Etfw%7Ctwcamp%5Etweetembed%7Ctwterm%5E1508751188178612228%7Ctwgr%5E%7Ctwcon%5Es1_&ref_url=https%3A%2F%2Fwww.etvbharat.com%2Fkannada%2Fkarnataka%2Fbharat%2Fassam-meghalaya-cm-sign-an-agreement-to-resolve-pending-boundary-dispute%2Fka20220329170053801
ಸುದೀರ್ಘ ಕಾಲದಿಂದ ಬಗೆಹರಿಯದೆ ಉಳಿದುಕೊಂಡಿದ್ದ ಗಡಿ ಭಿನ್ನಾಭಿಪ್ರಾಯ ತಾರಕಕ್ಕೇರಿ ಉಭಯ ರಾಜ್ಯಗಳ ಜನರು ಅನೇಕ ಬಾರಿ ಹೊಡೆದಾಡಿಕೊಂಡಿದ್ದರು. ಆದರೆ, ಇಂದು ನಡೆದ ಮಹತ್ವದ ಒಪ್ಪಂದದ ಪ್ರಕಾರ ಎರಡೂ ಸರ್ಕಾರಗಳು ರಾಜ್ಯದ ಗಡಿಯಲ್ಲಿ 885 ಕಿಲೋ ಮೀಟರ್ ಉದ್ದದ ಗಡಿ ಭೂಮಿ ಹಂಚಿಕೊಳ್ಳಲು ನಿರ್ಧರಿಸಿವೆ.
ಪ್ರಮುಖವಾಗಿ ತರಾಬರಿ ಮೇಲ್ದಂಡೆ, ಗಂಜಾಗ್ ಮೀಸಲು ಅರಣ್ಯ ಪ್ರದೇಶ, ಹಾಹಿಂ, ಲಾಂಗ್ಪಿಹ್, ಬೋರ್ಡುವಾರ್, ಬೊಕ್ಲಾಪಾರಾ, ನೋಂಗ್ವಾ, ಮಾಟಮುರ್, ಖಾನಾಪಾರಾ-ಪಿಲಂಕಾಟಾ, ಖಂಡುಲಿ ಮತ್ತು ರೆಟಾಚೆರಾ ಪ್ರದೇಶದಲ್ಲಿ ಉಭಯ ರಾಜ್ಯಗಳ ಮಧ್ಯೆ ಗಡಿ ಸಮಸ್ಯೆ ಇತ್ತು.








