9 ಮಹಿಳೆರನ್ನ ಮದುವೆಯಾಗಿದ್ದ ಭೂಪ – ಇನ್ನೂ ಎರಡು ಮದುವೆಗೆ ಸಿದ್ಧತೆ
ಆ ದೇಶದಲ್ಲಿ ಬಹುಪತ್ನಿತ್ವ ಆಚರಣೆಯಲ್ಲಿದೆ. ಅದಕ್ಕೇ ಆತ ಒಂದಲ್ಲ ಎರಡಲ್ಲ ಒಂಬತ್ತು ಮದುವೆ ಮಾಡಿಕೊಂದ್ದ. ಆದರೆ ಒಂಬತ್ತು ಪತ್ನಿಯರಲ್ಲಿ ಒಬ್ಬರು ಈಗ ವಿಚ್ಛೇದನವನ್ನು ಬಯಸುತ್ತಿದ್ದಾರೆ. ಇದರೊಂದಿಗೆ ಆತ ಇನ್ನೂ ಇಬ್ಬರು ಯುವತಿಯರನ್ನ ಮದುವೆಯಾಗಿ ಹೆಂಡತಿಯರನ್ನ ಹೊಂದಲು ಬಯಸುತ್ತಿದ್ದಾನೆ.
https://www.instagram.com/p/CZfxx1cD88U/?utm_source=ig_embed&ig_rid=2386b091-eea8-4289-abc0-1b4aa6f1b08e
ಬ್ರೆಜಿಲ್‌ನ ಸ್ವೂ ಪೌಲೊದಿಂದ ಮಾಡೆಲ್ ಆಗಿರುವ ಅರ್ಥರ್ ಒ ಉರ್ಸೊ ನೇ 9 ಯುವತಿಯರನ್ನ ಮದುವೆಯಾಗಿರುವ ಭೂಪ. ಉರ್ಸೋ ಮದುವೆಯಾಗಿರುವ 9 ಹುಡುಗಿಯರಲ್ಲಿ ಒಬ್ಬರು ಉರ್ಸೋಗೆ ವಿಚ್ಛೇದನ ನೀಡುತ್ತಿದ್ದಾರೆ. ಇದಕ್ಕಾಗಿ ಆತ ತಮ್ಮ ಪತ್ನಿಯರ ಸಂಖ್ಯೆಯನ್ನು 10 ಕ್ಕೆ ಏರಿಸಲು ಮುಂದಾಗಿದ್ದಾನೆ. ಇನ್ನೂ ಇಬ್ಬರು ಮಹಿಳೆಯರನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ ಈ ಮಾಡೆಲ್ ಆ ಹತ್ತು ಹೆಂಡತಿಯರ ಮಕ್ಕಳಿಗೆ ತಂದೆಯಾಗಬೇಕೆಂದು ಇತ್ತೀಚೆಗಷ್ಟೇ ಹೇಳಿದ್ದಾನೆ.
https://www.instagram.com/reel/CbtIkWCAfJI/?utm_source=ig_embed&ig_rid=6e67b69c-266d-49a3-8f22-aeb3fc398cb9
ದಿ ಬೇರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಉರ್ಸೊ 2021 ರಲ್ಲಿ ಅವರ ಮೊದಲ ಪತ್ನಿ ಲುವಾನಾ ಕಝಕಿ ಅವಳೊಂದಿಗೆ ಮೊದಲ ಮದುವೆಯಾಗಿದ್ದ, ಜೊತೆಗೆ ಉಳಿದ ಎಂಟೂ ಮಹಿಳೆಯರನ್ನ ಮದುವೆಯಾಗಿದ್ದ . ಅದರಲ್ಲಿ ಒಬ್ಬ ಪತ್ನಿ ಅಗಾಥ ವಿಚ್ಚೇಧನ ನೀಡಲು ಬಯಸುತ್ತಿದ್ದಾಳೆ.
ಗಂಡನನ್ನ ಇತರರೊಂದಿಗೆ ಹಂಚಿಕೊಳ್ಳಲು ಸಿದ್ಧವಿಲ್ಲದ ಈಕೆ ಆತನ ಮೇಲೆ ಏಕಸೌಮ್ಯ ಅಧಿಕಾರ ಬೇಕು ಎಂದು ಬಯಸುತ್ತಿದ್ದಾಳೆ.








