9 ಮಹಿಳೆರನ್ನ ಮದುವೆಯಾಗಿದ್ದ ಭೂಪ – ಇನ್ನೂ ಎರಡು ಮದುವೆಗೆ ಸಿದ್ಧತೆ

1 min read

9 ಮಹಿಳೆರನ್ನ ಮದುವೆಯಾಗಿದ್ದ ಭೂಪ – ಇನ್ನೂ ಎರಡು ಮದುವೆಗೆ ಸಿದ್ಧತೆ

ಆ ದೇಶದಲ್ಲಿ ಬಹುಪತ್ನಿತ್ವ ಆಚರಣೆಯಲ್ಲಿದೆ. ಅದಕ್ಕೇ  ಆತ  ಒಂದಲ್ಲ ಎರಡಲ್ಲ ಒಂಬತ್ತು ಮದುವೆ ಮಾಡಿಕೊಂದ್ದ.  ಆದರೆ ಒಂಬತ್ತು ಪತ್ನಿಯರಲ್ಲಿ ಒಬ್ಬರು ಈಗ ವಿಚ್ಛೇದನವನ್ನು ಬಯಸುತ್ತಿದ್ದಾರೆ. ಇದರೊಂದಿಗೆ  ಆತ ಇನ್ನೂ ಇಬ್ಬರು ಯುವತಿಯರನ್ನ ಮದುವೆಯಾಗಿ ಹೆಂಡತಿಯರನ್ನ ಹೊಂದಲು ಬಯಸುತ್ತಿದ್ದಾನೆ.

ಬ್ರೆಜಿಲ್‌ನ ಸ್ವೂ ಪೌಲೊದಿಂದ ಮಾಡೆಲ್ ಆಗಿರುವ ಅರ್ಥರ್ ಒ ಉರ್ಸೊ  ನೇ  9 ಯುವತಿಯರನ್ನ ಮದುವೆಯಾಗಿರುವ ಭೂಪ.  ಉರ್ಸೋ  ಮದುವೆಯಾಗಿರುವ 9 ಹುಡುಗಿಯರಲ್ಲಿ  ಒಬ್ಬರು ಉರ್ಸೋಗೆ ವಿಚ್ಛೇದನ  ನೀಡುತ್ತಿದ್ದಾರೆ. ಇದಕ್ಕಾಗಿ ಆತ  ತಮ್ಮ ಪತ್ನಿಯರ ಸಂಖ್ಯೆಯನ್ನು 10 ಕ್ಕೆ ಏರಿಸಲು ಮುಂದಾಗಿದ್ದಾನೆ. ಇನ್ನೂ ಇಬ್ಬರು ಮಹಿಳೆಯರನ್ನು ಮದುವೆಯಾಗಲು ಸಿದ್ಧನಾಗಿದ್ದಾನೆ ಈ ಮಾಡೆಲ್   ಆ ಹತ್ತು ಹೆಂಡತಿಯರ ಮಕ್ಕಳಿಗೆ ತಂದೆಯಾಗಬೇಕೆಂದು ಇತ್ತೀಚೆಗಷ್ಟೇ ಹೇಳಿದ್ದಾನೆ.

ದಿ ಬೇರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಉರ್ಸೊ 2021 ರಲ್ಲಿ ಅವರ ಮೊದಲ ಪತ್ನಿ ಲುವಾನಾ ಕಝಕಿ ಅವಳೊಂದಿಗೆ ಮೊದಲ ಮದುವೆಯಾಗಿದ್ದ, ಜೊತೆಗೆ ಉಳಿದ ಎಂಟೂ ಮಹಿಳೆಯರನ್ನ  ಮದುವೆಯಾಗಿದ್ದ . ಅದರಲ್ಲಿ ಒಬ್ಬ ಪತ್ನಿ ಅಗಾಥ  ವಿಚ್ಚೇಧನ ನೀಡಲು ಬಯಸುತ್ತಿದ್ದಾಳೆ.

ಗಂಡನನ್ನ ಇತರರೊಂದಿಗೆ ಹಂಚಿಕೊಳ್ಳಲು ಸಿದ್ಧವಿಲ್ಲದ  ಈಕೆ  ಆತನ ಮೇಲೆ ಏಕಸೌಮ್ಯ ಅಧಿಕಾರ ಬೇಕು ಎಂದು ಬಯಸುತ್ತಿದ್ದಾಳೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd