ಭೂಮಾಲಿಕತ್ವ ಯೋಜನೆಯಡಿ ನೀಡುವ ಸಬ್ಸಿಡಿ 15-20 ಲಕ್ಷಕ್ಕೆ ಏರಿಕೆ
ಭೂಮಾಲೀಕತ್ವ ಯೋಜನೆಯಡಿ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ನೀಡಲಾಗುವಭೂಮಾಲಿಕತ್ವ ಯೋಜನೆಯಡಿ ನೀಡುವ ಸಬ್ಸಿಡಿ 15-20 ಲಕ್ಷಕ್ಕೆ ಏರಿಕೆ ಸಬ್ಸಿಡಿಯನ್ನು 15 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ನಿನ್ನೆ ಬೆಂಗಳೂರಿನಲ್ಲಿ ಬಾಬು ಜಗಜೀವನ್ ರಾಮ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯವನ್ನು ಪ್ರಕಟಿಸಿದರು. ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಒಂದು ವಾರದೊಳಗೆ ಬಾಬು ಜಗಜೀವನ್ ರಾಮ್ ಸ್ವಯಂ ಉದ್ಯೋಗ ಯೋಜನೆಯನ್ನು ಪರಿಚಯಿಸಲಾಗುವುದು ಎಂದು ಅವರು ಘೋಷಿಸಿದರು. ಗ್ರಾಮೀಣ ಪ್ರದೇಶದ ಈ ಸಮುದಾಯಗಳಿಗೆ 75 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಅವರು ಘೋಷಿಸಿದರು.
ಈ ಸಮುದಾಯಗಳಿಗೆ ಕೌಶಲ್ಯ ತರಬೇತಿ ನೀಡುವ ಮತ್ತೊಂದು ಯೋಜನೆಯನ್ನೂ ನಿನ್ನೆ ಘೋಷಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ತರಬೇತಿಯನ್ನೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
Karnataka govt hikes subsidy given to SC/ST communities under Land Ownership Scheme from Rs 15 lakh to 20 lakh








