punjab-kings-vs-gujarat-titans | ಬೈರ್ಸ್ಟೋವ್ ಎಂಟ್ರಿ… ಗುಜರಾತ್ vs ಪಂಜಾಬ್ ಗುದ್ದಾಟ..
ಐಪಿಎಲ್ನಲ್ಲಿ ಇಂದು ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಗುದ್ದಾಡಲಿವೆ.
ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಶುಕ್ರವಾರ ರಾತ್ರಿ 7:30ಕ್ಕೆ ಆರಂಭಗೊಳ್ಳಲಿದೆ.
ಗೆಲುವಿನ ನಾಗಾಲೋಟದಲ್ಲಿರುವ ಗುಜರಾತ್ ಟೈಟಾನ್ಸ್ ಈ ಪಂದ್ಯದಲ್ಲೂ ಗೆಲ್ಲುವ ನಿರೀಕ್ಷೆಯಲ್ಲಿದೆ.
ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಪಂಜಾಬ್ ಕಿಂಗ್ಸ್ ಇಮ್ಮಡಿ ಉತ್ಸಾಹದಿಂದ ಕಣಕ್ಕೆ ಇಳಿಯಲಿದೆ.
ತಂಡದ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಎರಡೂ ತಂಡಗಳು ಬ್ಯಾಟಿಂಗ್ ವಿಷಯದಲ್ಲಿ ಬಲಿಷ್ಠವಾಗಿವೆ.
ಇನ್ನು ಗುಜರಾತ್ ಟೈಟಾನ್ಸ್ ವಿಚಾರಕ್ಕೆ ಬಂದರೆ ಆರಂಭಿಕ ಆಟಗಾರ ಶುಭಮನ್ ಗಿಲ್ ಅಮೋಘ ಫಾರ್ಮ್ ನಲ್ಲಿದ್ದಾರೆ.
ಅದೇ ರೀತಿ ಮತ್ತೊಬ್ಬ ಓಪನರ್ ಮ್ಯಾಥ್ಯೂ ವೇಡ್ ಉತ್ತಮ ಟಚ್ ನಲ್ಲಿದ್ದಾರೆ.
ಅದೇ ರೀತಿ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯಾ ಮತ್ತು ಡೇವಿಡ್ ಮಿಲ್ಲರ್ ಅವರಂತಹ ಆಟಗಾರರನ್ನು ಹೊಂದಿರುವ ಗುಜರಾತ್ ಬಲಿಷ್ಠವಾಗಿದೆ.
ಬೌಲಿಂಗ್ ನಲ್ಲೂ ಗುಜರಾತ್ ಬಲಿಷ್ಠವಾಗಿದ್ದು, ರಶೀದ್ ಖಾನ್ , ಲೋಕಿ ಫರ್ಗ್ಯೂಸನ್ , ಮೊಹಮ್ಮದ್ ಶಮಿಯಂತಹ ಸ್ಟಾರ್ ಬೌಲರ್ ಗಳಿದ್ದಾರೆ.
ಪಂಜಾಬ್ ಕಿಂಗ್ಸ್ ವಿಚಾರಕ್ಕೆ ಬಂದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಜಾನಿ ಬೈರ್ ಸ್ಟೋ ಆಡುವ ಅವಕಾಶವಿದೆ.
ಅಂತಿಮ ತಂಡದಲ್ಲಿ ಸ್ಥಾನ ಪಡೆದರೆ ರಾಜಪಕ್ಸೆ ಬೆಂಚ್ಗೆ ಸೀಮಿತವಾಗಲಿದ್ದಾರೆ.
ಶಿಖರ್ ಧವನ್, ಲಿವಿಂಗ್ಸ್ಟೋನ್ ಮತ್ತು ಮಯಾಂಕ್ ಅಗರ್ವಾಲ್ ಅವರಂತಹ ಸ್ಟಾರ್ ಆಟಗಾರರನ್ನು ಹೊಂದಿರುವ ಪಂಜಾಬ್ನ ಬ್ಯಾಟಿಂಗ್ ಲೈನ್ ಅಪ್ ಗಟ್ಟಿಯಾಗಿ ಕಾಣುತ್ತದೆ.
ಬೌಲಿಂಗ್ ವಿಭಾಗದಲ್ಲೂ ಕಗಿಸೊ ರಬಾಡ, ರಾಹುಲ್ ಚಹಾರ್ ಮತ್ತು ಅರ್ಷದೀಪ್ ಸಿಂಗ್ ಅವರಂತಹ ಬೌಲರ್ಗಳಿಂದ ಪಂಜಾಬ್ ಬಲಿಷ್ಠವಾಗಿ ಕಾಣುತ್ತದೆ.