Santosh patil death case | ಡಿಕೆಶಿ ವಿರುದ್ಧ ಬಿಜೆಪಿ ಟ್ವೀಟ್ ಕಿಡಿ
ಬೆಂಗಳೂರು : ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.
ಟ್ವಿಟ್ಟರ್ ನಲ್ಲಿ ಹಲವು ಟೀಕೆಗಳನ್ನ ಮಾಡಿರುವ ಬಿಜೆಪಿ, ಸಾಕಷ್ಟು ಪ್ರಶ್ನೆಗಳನ್ನ ಎತ್ತಿದೆ.
ಬಿಜೆಪಿ ತನ್ನ ಟ್ವೀಟ್ ನಲ್ಲಿ
“ಈಶ್ವರಪ್ಪನಿಗೆ ಸೆಟಲ್ಮೆಂಟ್ ಮಾಡುತ್ತೇನೆ” ಎಂದು #ಮಹಾನಾಯಕ ಈ ಹಿಂದೆ ಸವಾಲು ಹಾಕಿದ್ದರು. “ಬೇನಾಮಿ ಅಧ್ಯಕ್ಷೆ” ಜೊತೆ ಸೇರಿ ಈ #ರಿಂಗ್ಮಾಸ್ಟರ್ ಈ ಹಿಂದೆ ನಡೆಸಿದ ಷಡ್ಯಂತ್ರ ಎಲ್ಲರಿಗೂ ತಿಳಿದಿದೆ. ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ #40PercentCONgressToolkit ಪ್ರಹಸನದ ನಾಂದಿಗೀತೆ ಹಾಡಲಾಗಿತ್ತೆ ಎಂದು ಬಿಜೆಪಿ ಪ್ರಶ್ನಿಸಿದೆ.
ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಗುರಿಯಾಗಿಸಿಕೊಂಡು #ಮಹಾನಾಯಕ ಹಲವು ಅಸ್ತ್ರ ಪ್ರಯೋಗಿಸಿದ್ದರು. ಹಿಜಾಬ್ ವಿರುದ್ಧ ಪ್ರತಿಭಟನೆ ಮಾಡಿದ ಯುವಕರಿಗೆ ಕೇಸರಿ ಪೇಟ ಕೊಟ್ಟಿದ್ದೇ ಈಶ್ವರಪ್ಪ ಎಂಬ ಆಪಾದನೆ. ಭಗವಾಧ್ವಜ ವಿಚಾರದಲ್ಲಿ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಅಹೋರಾತ್ರಿ ಧರಣಿ.

ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಗುರಿಯಾಗಿಸಿಕೊಂಡು #ಮಹಾನಾಯಕ ಹಲವು ಅಸ್ತ್ರ ಪ್ರಯೋಗಿಸಿದ್ದರು.ʼನಿನ್ನ ನೋಡ್ಕೋಳ್ತೀನಿʼ ಎಂದು ಸದನದಲ್ಲಿ ಬೆದರಿಕೆ. “ಈಶ್ವರಪ್ಪಗೆ ಒಂದು ಸೆಟಲ್ ಮೆಂಟ್ ಮಾಡುತ್ತೇನೆ” ಎಂಬ ಪ್ರತೀಕಾರದ ಮಾತು.ಹೀಗಿರುವಾಗ, ಈ ವಿವಾದ ಮಹಾನಾಯಕನ ಸೆಟಲ್ಮೆಂಟ್ ರಾಜಕಾರಣದ ಭಾಗವೇ?
ಗುತ್ತಿಗೆದಾರ ಬಿಜೆಪಿ ಕಾರ್ಯಕರ್ತ ಎಂದು ಆಪಾದಿಸುವ ಕಾಂಗ್ರೆಸ್ ನಾಯಕರೇ, ರಾಹುಲ್ ಗಾಂಧಿ ಸಹಿ ನಕಲಿ ಆರೋಪ ಈತನ ಮೇಲೆ ಇದ್ದಿದ್ದು ಸುಳ್ಳೇ? ಈತ #ಬೇನಾಮಿಅಧ್ಯಕ್ಷೆ ಯ ಸೂತ್ರದ ಗೊಂಬೆಯೇ ಎಂದು ಅನುಮಾನ ವ್ಯಕ್ತಪಡಿಸಿದೆ. santosh-patil-death-case-bjp slams d k shivakumar








