ಹೌದು ಕೆಲವು ಅನಿರೀಕ್ಷಿತ ಬದಲಾವಣೆಗಳಿಂದ ನಮ್ಮ ಪಕ್ಷ ನೆಲಕಚ್ಚಿದೆ ನಿಜ. ಆದರೆ ಮುಂದೆ ಮತ್ತೆ ಅಧಿಕಾರ ಹೇಗೆ ವಾಪಸ್ ಪಡೆದುಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೆಗೌಡರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಸೋತಿದ್ದೇನೆ ನಮ್ಮ ಪಕ್ಷವು ಸೋತಿದೆ, ಆದ ಮಾತ್ರಕ್ಕೆ ದೇವೆಗೌಡ ಮನೆಯಲ್ಲಿ ಸೈಲೆಂಟಾಗಿ ಕುಳಿತುಕೊಳ್ಳುವುದಿಲ್ಲ. ಮುಂದಿನ ಚುನಾವಣೆಗಳಲ್ಲಿ ತಳ ಮಟ್ಟದಿಂದ ಕೆಲಸ ಮಾಡಿ ಗೆಲ್ಲುತ್ತೇವೆ ಎಂದರು. ಸೋತ ಮಾತ್ರಕ್ಕೆ ನನ್ನ ಹುಮ್ಮಸ್ಸು ಕಡಿಮೆಯಾಗಿದೆ ಎಂದುಕೊಳ್ಳಬೇಡಿ, ಜೀವನ ಪೂರ್ತಿ ಹೋರಾಟ ಮಾಡಿ ಬಂದ ನನಗೆ ಪಕ್ಷವನ್ನು ತಳ ಮಟ್ಟದಿಂದ ಪಕ್ಷವನ್ನು ಕಟ್ಟಿ ಮತ್ತೆ ಅಧಿಕಾರ ಪಡೆಯುವ ಗುರಿ ಹೊಂದಿದ್ದೇನೆ ಎಂದರು.
‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ಮಹಿಳಾ ಸಬಲೀಕರಣದ ಆಶಯದ ಸ್ಪರ್ಧೆಗೆ ದಶಕದ ಸಂಭ್ರಮ
ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ ಬರುತ್ತಿರುವ ಆಸ್ಟ್ರಲ್ ಪೇಜೆಂಟ್ಸ್ ತನ್ನ 10ನೇ ಎಡಿಷನ್ನ್ನು ಅದ್ದೂರಿಯಾಗಿ ಪೂರ್ಣಗೊಳಿಸಿತು. ನಗರದ ಕಿಂಗ್ಸ್ ಮೆಡೋಸ್ನಲ್ಲಿ...








