Hijab | ಹಿಜಾಬ್ ಹೋರಾಟಗಾರ್ತಿಯರಿಗೆ ಮುತಾಲಿಕ್ ಕೊಟ್ಟ ಸಲಹೆ ಏನು..?
ಉಡುಪಿ : ಒಂದು ಬಟ್ಟೆಯಿಂದಾಗಿ ಶಿಕ್ಷಣದಿಂದ ವಂಚಿತರಾಗಬೇಡಿ ಎಂದು ಹಿಜಾಬ್ ಗಾಗಿ ಹೋರಾಡಿದವರಿಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಲಹೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಹಿಜಬ್ ಹೋರಾಟಗಾರ್ತಿಯರಿಗೆ ಈಗಲೂ ಸಲಹೆ ನೀಡುತ್ತೇನೆ. ಬಾಯಿಮುಚ್ಚಿ ಸುಮ್ಮನಿದ್ದರೆ ಉತ್ತಮ. ಹಿಜಬ್ ಹೋರಾಟಗಾರ್ತಿಯರು ಸಂಪೂರ್ಣವಾಗಿ ಹತಾಶರಾಗಿದ್ದಾರೆ. ರಾಜ್ಯದ ಎಲ್ಲ ಬೆಳವಣಿಗೆಗಳಿಗೆ ಈ ವಿದ್ಯಾರ್ಥಿನಿಯರೇ ಕಾರಣ ಎಂದು ಆರೋಪಿಸಿದರು.
ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ, ನಿಮ್ಮ ಭವಿಷ್ಯಕ್ಕೆ ಕಲ್ಲು ಹಾಕಿಕೊಳ್ಳಬೇಡಿ, ನಿಮ್ಮ ಹಿಂದೆ ಇರುವಂತಹ ಪಿಎಫ್‌ಐ ಮತ್ತು ಸಿಎಫ್‌ಐ ಸಂಘಟನೆಗಳು ನಿಮ್ಮನ್ನು ಭಯಾನಕವಾಗಿ ಬಲಿಕೊಡಲಿವೆ. ನಿಮ್ಮ ಶಿಕ್ಷಣಕ್ಕೆ ಕಲ್ಲು ಹಾಕಲಿವೆ. ಎಲ್ಲವನ್ನೂ ಬಿಟ್ಟು ಪರೀಕ್ಷೆಗೆ ಹಾಜರಾಗಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಮುತಾಲಿಕ್ ಸಲಹೆ ನೀಡಿದ್ದಾರೆ. pramod muthalik-advice-for-muslim-students









