ಪುನೀತ್ ರಾಜ್ ಕುಮಾರ್ ಬ್ಯಾನರ್ ಗಾಗಿ ಗ್ರಾಮಸ್ಥರು ಮತ್ತು ಅಪ್ಪು ಫ್ಯಾನ್ಸ್ ನಡುವೆ ಮಾರಾಮಾರಿ
ಪುನೀತ್ ರಾಜ್ ಕುಮಾರ್ ಬ್ಯಾನರ್ ಕಟ್ಟಿದ ವಿಚಾರವಾಗಿ ಗ್ರಾಮಸ್ಥರು ಮತ್ತು ಅಪ್ಪು ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯಿಂದಾಗಿ ಅನೇಕ ಅಪ್ಪು ಅಭಿಮಾನಿಗಳು ನೊಂದುಕೊಂಡಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯನ್ನ ಒಪ್ಪಿಕೊಳ್ಳಲು ಅಭಿಮಾನಿಗಳಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಅಪ್ಪು ಅವರನ್ನ ಅಮರವಾಗಿಸಲು ಹಲವು ಕಾರ್ಯಕ್ರಮಗಳನ್ನ ಅಭಿಮಾನಿಗಳು ಹಮ್ಮಿಕೊಳ್ಳುತ್ತಾರೆ.
ಅಪ್ಪು ಅವರ ಬ್ಯಾನರ್ ಕಟ್ಟಿದ್ದರಿಂದ ಓಡಾಡುವುದಕ್ಕೆ ತೊಂದರೆ ಆಗಿದೆ ಎನ್ನವು ಕಾರಣಕ್ಕೆ ಯಲಹಂಕದ ಅರಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಭೈರಾಪುರದಲ್ಲಿ ಅಭಿಮಾನಿಳು ಮತ್ತು ಗ್ರಾಮಾಸ್ಥರ ನಡುವೆ ಮಾರಾಮಾರಿ ನಡೆದಿದೆ, ರಾಡ್ ಗಳನ್ನ ತೆಗೆದುಕೊಂಡು ಹೊಡೆದಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ವಾತಾವರಣವನ್ನ ತಿಳಿಗೊಳಿಸಿ ಅಪ್ಪು ಬ್ಯಾನರ್ ಅನ್ನ ತೆರವುಗೊಳಿಸಿದ್ದಾರೆ. ಅಪ್ಪು ಬ್ಯಾನರ್ ಬೇಕೆ ಬೇಕು ಎಂದು ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ.
clash between two mobs of the same village in yelahanka over puneeth rajkumar banne








