BJP | ಜನಸಾಮಾನ್ಯರ ಮೇಲೆ ಮೋದಿ ಸರ್ಕಾರ ಸರ್ಜಿಕಲ್ ಸ್ಟ್ರೈಕ್
ಬೆಂಗಳೂರು : ಎಸ್ ಬಿಐ ಸಾಲದ ಬಡ್ಡಿದರವನ್ನು ಶೇಕಡಾ 0.10 ರಷ್ಟು ಹೆಚ್ಚಿಸಿದ್ದು, ಈ ಬಗ್ಗೆ ರಾಜ್ಯ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಏರಿಸಿವೆ.
ಇದು ಮೋದಿ ಸರ್ಕಾರ ಜನಸಾಮಾನ್ಯರ ಮೇಲಿನ ಮತ್ತೊಂದು ‘ಸರ್ಜಿಕಲ್ ಸ್ಟ್ರೈಕ್‘ ಎಂದು ಟೀಕೆ ಮಾಡಿದೆ.
ಅಲ್ಲದೇ ಈಗಾಗಲೇ ನಿರುದ್ಯೋಗ, ಬೆಲೆ ಏರಿಕೆಗಳಿಂದ ಹೈರಾಣಾದ ಜನತೆ ಸಾಲ ಮರುಪಾವತಿಗೆ ಪರದಾಡುವ ಹೊತ್ತಿನಲ್ಲಿ ಸರ್ಕಾರದ ಈ ಬಡ್ಡಿ ಬರೆಯಿಂದ ಬದುಕಲಾಗದ ಹಂತಕ್ಕೆ ತಲುಪುವುದು ನಿಶ್ಚಿತ. ಈ ಸುಲಿಗೆಯ ಹೆಸರೇ ‘ಅಚ್ಛೆ ದಿನ್‘ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇಲ್ಲದೇ ತಮ್ಮದೇ ಪಕ್ಷದ ಪದಾಧಿಕಾರಿಯಾದ ದಿವ್ಯ ಹಾಗಾರಗಿಯನ್ನು ‘ಬಿಜೆಪಿಗೂ ದಿವ್ಯ ಹಾಗಾರಿಗೂ ಸಂಬಂಧವೇ ಇಲ್ಲ’ ಎಂದು ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳಾಡಲು ಬಿಜೆಪಿ ಪಕ್ಷದವರಿಗೆ ಮಾತ್ರ ಸಾದ್ಯವೇನೋ! ಲಾಭವಾಗುವುದಿದ್ದರೆ ಬೀದಿ ಶ್ವಾನದ ಶವವನ್ನೂ ನಮ್ಮದೆನ್ನುತ್ತಾರೆ! ನಷ್ಟವಾಗುದ್ದಿದ್ದರೆ ತಮ್ಮವರನ್ನೇ ಸಂಬಂಧವಿಲ್ಲವೆನ್ನುತ್ತಾರೆ ಎಂದು ಕುಟುಕಿದೆ. BJP Modi government surgical strike on the masses








