ದಿನದಿಂದ ದಿನಕ್ಕೆ ರಾಕಿ ಭಾಯ್ ಹವಾ ಜೋರಾಗುತ್ತಿದ್ದು, ಸಂಜಯ್ ದತ್, ರವಿನಾ ಟಂಡನ್, ರಾವ್ ರಮೇಶ್ ರಂತಹ ಖ್ಯಾತನಾಮರ ದಂಡು ಸಿನಿಮಾದಲ್ಲಿ ಇರೋದ್ರಿಂದ ಇಡೀ ದೇಶವೇ ರಾಕಿ ಭಾಯ್ ಆಗಮನಕ್ಕೆ ಕಾಯುತ್ತಿದೆ. ಇದೀಗ ಈ ಪಟ್ಟಿಗೆ ಕಾಲಾ ಚಿತ್ರದಲ್ಲಿ ರಜಿನಿ ಹೆಂಡತಿಯಾಗಿ ನಟಿಸಿದ್ದ ಈಶ್ವರಿ ರಾವ್ ಸೇರ್ಪಡೆಯಾಗಿದ್ದಾರೆ. ಮೂಲಗಳ ಪ್ರಕಾರ ಕೆಜಿಎಫ್ ಕಥೆಗೆ ತಿರುವು ನೀಡುವಂತಹ ಪ್ರಮುಖ ಪಾತ್ರದಲ್ಲಿ ಈಶ್ವರಿ ನಟಿಸುತ್ತಿದ್ದರಂತೆ. ಚಿತ್ರದಲ್ಲಿ ಈಶ್ವರಿ ರಾವ್ ಅವರ ಪಾತ್ರ ಅತ್ಯದ್ಭುತವಾಗಿ ಮೂಡಿಬಂದಿದ್ದು, ಅವರ ಅಭಿನಯಕ್ಕೆ ಪ್ರಶಾಂತ್ ನೀಲ್ ಕೂಡ ಫಿದಾ ಆಗಿದ್ದಾರಂತೆ.
ಕನ್ನಡ ಸಿನಿಮಾಗೆ ನಾಯಕಿಯಾಗಿದ್ರು ಈಶ್ವರಿ
ಕಾಲಾ ಸಿನಿಮಾ ಈಶ್ವರಿ ಅವರಿಗೆ ಬ್ರೇಕ್ ನೀಡ್ತು ನಿಜ. ಆದ್ರೆ ಅವರು ಈ ಹಿಂದೆಯೇ ಹತ್ತಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 1990ರಲ್ಲಿ ಬಣ್ಣದ ಜಗತ್ತಿಗೆ ಕಾಲಿಟ್ಟ ಈಶ್ವರಿ, ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಹಾಗೂ ದ್ವಿತೀಯ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 1995ರಲ್ಲಿ ಎಸ್.ನಾರಾಯಣ್ ನಿರ್ದೇಶನದ ‘ಮೇಘ ಮಾಲೆ’ ಸಿನಿಮಾದಲ್ಲಿ ಈಶ್ವರಿ ಅವರು ನಾಯಕಿಯಾಗಿ ಮಿಂಚಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ 16 ವರ್ಷಗಳ ಬಳಿಕ ಮತ್ತೊಮ್ಮೆ ಕನ್ನಡದತ್ತ ಈಶ್ವರಿ ಆಗಮಿಸುತ್ತಿದ್ದು, ಮತ್ತೊಂದು ಸೂಪರ್ ಹಿಟ್ ಪಾತ್ರ ನೀಡುವ ಸೂಚನೆ ಕೊಟ್ಟಿದ್ದಾರೆ.








