ಸ್ನೇಹಿತರ ಜೊತೆ ಬಾಡೂಟಕ್ಕೆಂದು ಹೋದ ಯುವಕ ಶವವಾಗಿ ಪತ್ತೆ…
ಸ್ನೇಹಿತರ ಜೊತೆಗೆ ಬಾಡುಟಕ್ಕೆಂದು ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡದ ಹೊರ ವಲಯದಲ್ಲಿ ನಡೆದಿದೆ.
ದಾವಣಗೆರೆಯ ನಿಟ್ಟುವಳ್ಳಿ ನಿವಾಸಿಯಾದ ಧನ್ಯಕುಮಾರ್ (31) ಮೃತ ದುರ್ದೈವಿಯಾಗಿದ್ದು, ಕನ್ನಡ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ. ಕೆಲ ವರ್ಷಗಳಿಂದ ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದ. ಬುಧವಾರ ತಡರಾತ್ರಿ ಸ್ನೇಹಿತರ ಜೊತೆಗೆ ಹರಪ್ಪನಹಳ್ಳಿಯ ಉಚ್ಚಂಗಿದುರ್ಗಕ್ಕೆ ಊಟಕ್ಕೆ ಹೋಗಿದ್ದ ಧನ್ಯಕುಮಾರ್ ಇಂದು ಬೆಳಗ್ಗೆ ಗ್ರಾಮದ ಜಮೀನು ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಸುಮಾರು 20 ರಿಂದ 30 ಕಡೆ ಚುಚ್ಚಿ ಕೊಲೆ ಮಾಡಲಾಗಿದೆ, ಸಾಕಷ್ಟು ಬಾರಿ ಚುಚ್ಚಿರುವುದು ಗಮನಿಸಿದರೆ ದ್ವೇಷಕ್ಕಾಗಿ ಈ ಕೊಲೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಾಣಸಿಗಲಿದೆ ಎಂದು ವಿಜಯ ನಗರ ಎಸ್ ಪಿ ಡಾ ಅರುಣ್ ಹೇಳಿದ್ದಾರೆ.
ಬುಧವಾರ ರಾತ್ರಿ ಊಟಕ್ಕೆ ಇಲ್ಲಿ ಬಂದಿದ್ರು ಯಾರು ಬಂದಿದ್ರು ಯಾಕೆ ಬಂದಿದ್ರು ಎಂಬ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.








