IPL 2022 : ರಿಷಬ್ ಪಂತ್ ಅವರದ್ದು ವಿಚಿತ್ರ ನಾಯಕತ್ವ
ಗುರುವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ಗಳ ಜಯ ಸಾಧಿಸಿದೆ.
ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಪಂದ್ಯದಲ್ಲಿ ಮೂರು ಓವರ್ ಬೌಲ್ ಮಾಡಿದ ಕುಲದೀಪ್ 14 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.
ಆದರೆ, ಅಮೋಘ ಬೌಲಿಂಗ್ ಮಾಡಿದ ಕುಲದೀಪ್ ನಾಲ್ಕು ಓವರ್ ಗಳ ಕೋಟಾವನ್ನು ಪೂರ್ಣಗೊಳಿಸಲಿಲ್ಲ.
ಕುಲ್ ದೀಪ್ ಯಾದವ್ ಕೈಯಲ್ಲಿ ಕೇವಲ ಮೂರು ಓವರ್ ಬೌಲ್ ಮಾಡಿದರೆ, ಅರೆಕಾಲಿಕ ಬೌಲರ್ ಲಲಿತ್ ಯಾದವ್ ಮೂರು ಓವರ್ ಬೌಲ್ ಮಾಡಿದರು.
ಲಲಿತ್ ಯಾದವ್ ಮೂರು ಓವರ್ಗಳಲ್ಲಿ 32 ರನ್ ನೀಡಿದರು.
ಆದರೆ, ಈ ಪಂದ್ಯದಲ್ಲಿ ಪಂತ್ ತೆಗೆದುಕೊಂಡ ನಿರ್ಧಾರಗಳು ಟೀಕೆಗೊಳಗಾಗಿವೆ.
ಇಂಗ್ಲೆಂಡಿನ ಮಾಜಿ ನಾಯಕ ಮೈಕಲ್ ವಾನ್ ಪಂತ್ ನಿರ್ಧಾರದ ಬಗ್ಗೆ ಟೀಕೆ ಮಾಡಿದ್ದಾರೆ.
“ಇದೊಂದು ವಿಚಿತ್ರ ನಾಯಕತ್ವ. ಕುಲದೀಪ್ ಯಾದವ್ ಮೂರು ಓವರ್ಗಳಲ್ಲಿ ನಾಲ್ಕು ವಿಕೆಟ್ ಪಡೆದಿದ್ದರು.
ಅಂತಹ ಬೌಲರ್ ಕೋಟಾವನ್ನು ಯಾಕೆ ಪೂರ್ಣಗೊಳಿಸಲಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ವಾನ್ ಟ್ವಿಟರ್ನಲ್ಲಿ ಹೇಳಿದ್ದಾರೆ.
ಮತ್ತೊಂದೆಡೆ, ಪಂದ್ಯದ ನಂತರ ಮಾತನಾಡಿದ ಪಂತ್, ಕುಲದೀಪ್ ಅವರೊಂದಿಗೆ ನಾಲ್ಕು ಓವರ್ಗಳನ್ನು ಪೂರ್ಣಗೊಳಿಸದಿರಲು ಕಾರಣವನ್ನು ಬಹಿರಂಗಪಡಿಸಿದರು.
ನಾನು ಕುಲದೀಪ್ ಕೈಯಲ್ಲಿ ಇನಿಂಗ್ಸ್ನ ಅಂತಿಮ ಓವರ್ ಬೌಲ್ ಮಾಡಿಸಲು ಬಯಸಿದ್ದೆ. ಆದ್ರೆ ಹಿಮ ಹೆಚ್ಚಾದ ಕಾರಣ ಅದು ಸಾಧ್ಯವಾಗಲಿಲ್ಲ ಎಂದಿದ್ದಾರೆ.
michael vaughan reaction rishabh pant captaincy









