ಪ್ರಿಯತೆಮೆಯನ್ನು ಕೊಂದ ಪ್ರಿಯಕರ
ಲಕ್ನೋ: ಪ್ರೇಮಿಯೊಬ್ಬ ತನ್ನ ಪ್ರಿಯತಮೆಯನ್ನು ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಮಥುರಾದ ಮಥುರಾದ ಮುಬಾರಿಕ್‍ಪುರ ಗ್ರಾಮದಲ್ಲಿ ನಡೆದಿದೆ.
ಕಾಜಲ್ ಮೃತ ದುರ್ದೈವಿ. ಪ್ರೇಮಿ ಅನಿಶ್ ಕೊಲೆ ಮಾಡಿದ ಆರೋಪಿ. ಕಾಜ್ಲ ಬೇರೆಯೊಬ್ಬ ಹುಡಗನನ್ನು ಮದುವೆ ಯಾಗುತ್ತಿದ್ದಳು. ಇದನ್ನು ತಿಳಿದ ಅನಿಶ್ ಕಾಜಲ್ ಳನ್ನು ಮದುವೆ ಮನೆಯಲ್ಲೇ ಗುಂಡಿಕ್ಕಿಕೊಂದಿದ್ದಾನೆ.
ನಡೆದಿದ್ದೇನು:? ಕಾಜಲ್ ಹಾಗೂ ಅನಿಶ್ ಇಬ್ಬರು ಪ್ರೀತಿಸುತ್ತಿದ್ದರು. ಜೊತೆಗೆ ಸಂಬಂಧವನ್ನು ಹೊಂದಿದ್ದರು. ಆದರೆ ಕಾಜಲ್ ಅನಿಶ್‍ನನ್ನು ಬಿಟ್ಟು ಬೇರೆಯೊಬ್ಬನೊಂದಿಗೆ ಮದುವೆಗಿದ್ದರಿಂದ ಆತ ಸಿಟ್ಟಿಗೆದ್ದನು. ನಂತರ ವಿವಾಹ ಸಮಾರಂಭ ನಡೆಯುವ ಸ್ಥಳಕ್ಕೆ ಬಂದು ಅನಿಶ್ ಆಕೆಗೆ ಗುಂಡು ಹಾರಿಸಿದ್ದಾನೆ. ಕಾಜಲ್‍ನ ಎಡಗಣ್ಣಿನ ಬಳಿ ಗುಂಡು ತಾಗಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗುಂಡಿನ ಸದ್ದು ಕೇಳಿದ ಕೂಡಲೇ ಸಮಾರಂಭದಲ್ಲಿ ನೆರದಿದ್ದ ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದಾರೆ.
ಈ ಬಗ್ಗೆ ಕಾಜಲ್ ತಂದೆ ಖುಬಿ ರಾಮ್ ಪ್ರಜಾಪತಿ ಮಾತನಾಡಿ, ವಿವಾಹದ ನಂತರ ರಿಫ್ರೆಶ್ ಆಗಲು ಕೋಣೆಗೆ ಹೋಗಿದ್ದಳು. ಆ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಕೋಣೆಗೆ ಬಂದು ಕಾಜಲ್‍ಗೆ ಗುಂಡಿಕ್ಕಿ ಕೊಂದಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಘಟನೆ ಸಂಬಂಧ ಕಾಜಲ್ ತಂದೆ ಖುಬಿ ರಾಮ್ ಪ್ರಜಾಪತಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಥುರಾದಲ್ಲಿ ಎಸ್‍ಪಿ (ಗ್ರಾಮೀಣ) ಶ್ರೀಶ್ ಚಂದ್ರ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದೇವೆ. ಈ ಕುರಿತು ಎಲ್ಲಾ ರೀತಿಯಲ್ಲೂ ತನಿಖೆ ನಡೆಸುತ್ತೇವೆ ಎಂದರು.








