ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ | ವಿರೋಧಿಸಿದಕ್ಕೆ ಯುವತಿಯನ್ನು ರೈಲಿನಿಂದ ಆಚೆ ಎಸೆದ ಕ್ರೂರಿ
ಉತ್ತರ ಪ್ರದೇಶ: ಯುವತಿಯೋರ್ವಳ ಮೇಲೆ ಕಾಮುಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ್ದು, ಯುವತಿ ವಿರೋಧಿಸಿದ್ದಕ್ಕೆ ಯುವತಿಯನ್ನು ರೈಲಿನಿಂದ ಹೊರ ಎಸಿದಿರುವ ಘಟನೆ ಮಧ್ಯಪ್ರದೇಶಧ ರಾಜ್ನಗರದ ಬಳಿ ನಡೆದಿದೆ.
ಖಜುರಾಹೊ-ಮಹೋಬಾ ಪ್ಯಾಸೆಂಜರ್ ರೈಲಿನಲ್ಲಿ, 25 ವರ್ಷದ ಯುವತಿ ಮಧ್ಯಪ್ರದೇಶದ ಛತ್ತರ್ಪುರದಿಂದ ಉತ್ತರ ಪ್ರದೇಶದ ಬಂಡಾ ಜಿಲ್ಲೆಗೆ ಆಗಮಿಸುತ್ತಿದ್ದಳು. ಈ ವೇಳೆ ಆಕೆಯ ಪಕ್ಕದಲ್ಲೇ ಕುಳಿತುಕೊಂಡಿದ್ದ ವ್ಯಕ್ತಿ ಆಕೆಗೆ ನಿಂದಿಸಿದ್ದು, ಅತ್ಯಾಚಾರವೆಸಗಲು ಯತ್ನಿಸಿದ್ದಾನೆ.
ಈ ವೇಳೆ ಯುವತಿ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಆತನ ಕೈಗೆ ಕಚ್ಚಿದ್ದಾಳೆ. ಇದರಿಂದ ಆಕ್ರೋಶಗೊಂಡಿರುವ ವ್ಯಕ್ತಿ, ಯುವತಿಯ ಕೂದಲು ಹಿಡಿದು ರೈಲಿನಲ್ಲಿ ಎಳೆದಾಡಿದ್ದು, ನಂತರ ಹೊರಗೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಯುವತಿ ಮಧ್ಯಪ್ರದೇಶದ ಖಜುರಾಹೋ ಆಸ್ಪತ್ರೆಗೆ ದಾಖಲಾಗಿದ್ದು, ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ್ದಾಳೆ. ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಎಸೆದಿರುವ ರಭಸಕ್ಕೆ ಯುವತಿಯ ದೇಹದಲ್ಲಿನ ಕೆಲ ಮೂಳೆಗಳು ಮುರಿದಿವೆ. ಘಟನಾ ಸ್ಥಳಕ್ಕೆ ಝಾನ್ಸಿ ರೈಲ್ವೆ ವಿಭಾಗದ ಕಮಿಷನರ್ ಅಲೋಕ್ ಕುಮಾರ್ ಭೇಟಿ ನೀಡಿದ್ದಾರೆ. ಈ ವೇಳೆ ಆರೋಪಿಯನ್ನ ಆದಷ್ಟು ಬೇಗ ಬಂಧಿಸುವ ಭರವಸೆ ನೀಡಿದ್ದಾರೆ.








