IPL 2022 | ಆ ದಾಖಲೆ ಆರ್ ಸಿಬಿಗೆ ಮಾತ್ರ ಸಾಧ್ಯ..
ಐಪಿಎಲ್ 2022 ರ ಭಾಗವಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ RCB ನಾಯಕ ಫಾಪ್ ಡುಪ್ಲೆಸಿಸ್ ಗೋಲ್ಡನ್ ಡಕ್ ಆಗಿದ್ದಾರೆ.
ಪ್ರದೀಪ್ ಸಂಗ್ವಾನ್ ಬೌಲಿಂಗ್ ನಲ್ಲಿ ಡುಪ್ಲೆಸಿಸ್ ಕೀಪರ್ ಸಹಾಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಇದರೊಂದಿಗೆ ಆರ್ ಸಿಬಿ ಆರಂಭಿಕ ಜೋಡಿ ಐಪಿಎಲ್ ನಲ್ಲಿ ಅನಗತ್ಯ ದಾಖಲೆ ನಿರ್ಮಿಸಿದೆ.
ಆರ್ಸಿಬಿಯ ಆರಂಭಿಕ ಜೋಡಿ ಮೊದಲ ನಾಲ್ಕು ಪಂದ್ಯಗಳಲ್ಲಿ 50,1,5,50 ರನ್ಗಳನ್ನು ಸೇರಿಸಿತು.
ಆದರೆ, ಕಳೆದ ಆರು ಪಂದ್ಯಗಳಲ್ಲಿ ಕ್ರಮವಾಗಿ 14,5,7,10,11 ರನ್ ಸೇರಿಸಿದೆ.
ಇನ್ನೊಂದು ವಿಷಯವೆಂದರೆ ಈ ಋತುವಿನಲ್ಲಿ ಆರ್ಸಿಬಿ ಪರ ಟಾಪ್-3 ಬ್ಯಾಟ್ಸ್ಮನ್ಗಳು ಆರು ಬಾರಿ ಡಕ್ ಆಗಿದ್ದಾರೆ.
ಇವರಲ್ಲಿ ಅನುಜ್ ರಾವತ್ ಮೂರು ಬಾರಿ, ಕೊಹ್ಲಿ ಎರಡು ಬಾರಿ ಮತ್ತು ಡುಪ್ಲೆಸಿಸ್ ಒಮ್ಮೆ ಡಕೌಟ್ ಆಗಿದ್ದಾರೆ.
ಇದರೊಂದಿಗೆ ಈ ಆವೃತ್ತಿಯಲ್ಲಿ ಒಂದು ತಂಡದ ಬ್ಯಾಟರ್ ಗಳು ಹೆಚ್ಚು ಡಕ್ ಔಟ್ ಆದ ತಂಡವಾಗಿ ಆರ್ ಸಿಬಿ ಬೇಡವಾದ ದಾಖಲೆ ನಿರ್ಮಿಸಿದೆ.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಮಾಡಿ ಆರು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿದೆ.
ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡದ ಫಾಫ್ ಡುಪ್ಲಸಿಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಆದ್ರೆ ತಂಡಕ್ಕೆ ಉತ್ತಮ ಆರಂಭ ಕೊಡುವಲ್ಲಿ ವಿಫಲರಾದರು. ಫಾಫ್ ಶೂನ್ಯಕ್ಕೆ ಔಟ್ ಆದ್ರು. ಇದಾದ ಬಳಿಕ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಜುಗಲ್ ಬಂಧಿ ಶುರುವಾಯ್ತು.
ನಾಯಕನ ನಿರೀಕ್ಷೆಗೆ ತಕ್ಕಂತೆ ಆಟವಾಡಿದ ವಿರಾಟ್ ಕೊಹ್ಲಿ(58) ಹಾಗೂ ರಜತ್ ಪಟಿದಾರ್(52) ಅದ್ಭುತ ಪ್ರದರ್ಶನ ನೀಡಿದರು.
ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಆರು ಬೌಂಡರಿ, ಒಂದು ಸಿಕ್ಸರ್ ನೆರವನಿಂದ 58 ರನ್ ಗಳಿಸಿದರು.
ರಜತ್ ಪಟಿದಾರ್ 32 ಎಸೆತಗಳಲ್ಲಿ 2 ಸಿಕ್ಸರ್, 5 ಬೌಂಡರಿಗಳೊಂದಿಗೆ 52 ರನ್ ಗಳಿಸಿದರು.
ಗುಜರಾತ್ ಟೈಟನ್ಸ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ 2ನೇ ವಿಕೆಟ್ಗೆ 99(74) ರನ್ಗಳ ಅದ್ಭುತ ಜೊತೆಯಾಟವಾಡಿದರು.
ನಂತರ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ 33 ರನ್(18 ಬಾಲ್, 3 ಬೌಂಡರಿ, 2 ಸಿಕ್ಸ್) ಬಿರುಸಿನ ಆಟದಿಂದ ತಂಡದ ಮೊತ್ತ ಹೆಚ್ಚಿಸಿದರು.
ಆದರೆ ದಿನೇಶ್ ಕಾರ್ತಿಕ್(2) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಕೊನೆ ಹಂತದಲ್ಲಿ ಬಂದ ಶಹಬಾಸ್ ಅಹ್ಮದ್(2*), ಮಹಿಪಾಲ್ ಲೋಮ್ರೋರ್(16) ಬಿರುಸಿನ ಆಟವಾಡಿದರು.
sixth-consecutive-duck-rcb-top-3-batters-most-season








