GT vs PBKS Match | ಪ್ಲೇ ಆಫ್ಸ್ ಗುದ್ದಾಟದಲ್ಲಿ ಹಾರ್ಧಿಕ್ – ಮಯಾಂಕ್
ಪಂದ್ಯಗಳು ಸಾಗುತ್ತಿದ್ದಂತೆ 15ನೇ ಸೀಸನ್ ನ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಪ್ರತಿ ಪಂದ್ಯವೂ ಸಾಕಷ್ಟು ರೋಚಕತೆಯನ್ನು ಪಡೆದುಕೊಳ್ಳುತ್ತಿದೆ. ಪ್ಲೇ ಆಫ್ಸ್ ದೃಷ್ಟಿ ಪ್ರತಿ ತಂಡವೂ ಮೈದಾನದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ. ಪ್ರತಿ ಪಂದ್ಯವೂ ಡು ಆರ್ ಡೈ ಎಂಬಂತಾಗಿದ್ದು, ಗೆಲುವಿಗಾಗಿ ತಂಡಗಳು ಜಿದ್ದಿನ ಹೋರಾಟ ನಡೆಸುತ್ತಿವೆ.
ಇಂದು ಐಪಿಎಲ್ ನ 48ನೇ ಪಂದ್ಯ ನಡೆಯಲಿದ್ದು, ಇದರಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇಂದಿನ ಪಂದ್ಯ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಉಭಯ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.
ಹಾರ್ದಿಕ್ ಪಾಂಡ್ಯಾ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ತಂಡ ಏಳನೇ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ ಈ ಆವೃತ್ತಿಯಲ್ಲಿ ಒಂಭತ್ತು ಪಂದ್ಯಗಳನ್ನಾಡಿದ್ದು ಎಂಟು ಪಂದ್ಯಗಳನ್ನು ಗೆದ್ದುಕೊಂಡಿದೆ. ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ. ಇತ್ತ ಮಯಾಂಕ್ ಅಗರ್ ವಾಲ್ ನಾಯಕತ್ವ ಪಂಜಾಬ್ ಕಿಂಗ್ಸ್ ಒಂಭತ್ತು ಪಂದ್ಯಗಳನ್ನಾಡಿದ್ದು, ನಾಲ್ಕು ಪಂದ್ಯಗಳನ್ನು ಗೆದ್ದು ಐದು ಪಂದ್ಯಗಳಲ್ಲಿ ಸೋಲು ಕಂಡಿದೆ.
ಗುಜರಾತ್ ಟೈಟಾನ್ಸ್ ತಂಡ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೆಣಸಾಟ ನಡೆಸಿತ್ತು. ಈ ಪಂದ್ಯದಲ್ಲಿ ಗುಜರಾತ್ ಆರು ವಿಕೆಟ್ ಗಳಿಂದ ಜಯ ಸಾಧಿಸಿದ್ದು, ಮಿಲ್ಲರ್ 39 ರನ್, ಟೆವಾಟಿಯಾ 43 ರನ್ ಗಳಿಸಿದ್ದರು. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ತಂಡ ಕಳೆದ ಪಂದ್ಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಿ 20 ರನ್ ಗಳಿಂದ ಸೋಲುಂಡಿದೆ.
ಈ ಸೀಸನ್ ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಗುಜರಾತ್ ಟೈಟಾನ್ಸ್ ಆರು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಹೀಗಾಗಿ ಪಂಜಾಬ್ ಸೇಡು ತೀರಿಸಿಕೊಳ್ಳುತ್ತಾ.. ಅಥವಾ ಇಂದಿನ ಪಂದ್ಯ ಗೆದ್ದು ಗುಜರಾತ್ ಪ್ಲೇ ಆಫ್ಸ್ ಗಟ್ಟಿ ಮಾಡಿಕೊಳ್ಳುತ್ತಾ ಕಾದು ನೋಡಬೇಕಾಗಿದೆ.
ತಂಡಗಳ ಬಲಾಬಲದ ವಿಚಾರಕ್ಕೆ ಬಂದ್ರೆ
ಗುಜರಾತ್ ಟೈಟಾನ್ಸ್ ತಂಡದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಸಾಲಿಡ್ ಆಗಿದೆ. ಗುಜರಾತ್ ಟೈಟಾನ್ಸ್ ತಂಡಕ್ಕೆ ಸ್ಥಿರ ಪ್ರದರ್ಶನವೇ ಆಸ್ತಿಯಾಗಿದೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಗುಜರಾತ್ ಟೈಟಾನ್ಸ್ ಗೆ ಮ್ಯಾಚ್ ಗಳು ನೆರವಾಗುತ್ತಿದ್ದಾರೆ.
ಆರಂಭಿಕರಾದ ಶುಭ್ ಮನ್ ಗಿಲ್, ವೃದ್ಧಿಮಾನ್ ಸಹಾ ಜೋಡಿ ಉತ್ತಮ ಆರಂಭ ನೀಡುತ್ತಿದೆ. ಮಿಡಲ್ ಆರ್ಡರ್ ನಲ್ಲಿ ಗುಜರಾತ್ ಸಖತ್ ಸಾಲಿಡ್ ಆಗಿದ್ದು, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್ ಸಮಯಕ್ಕೆ ತಕ್ಕಂತೆ ಬ್ಯಾಟ್ ಬೀಸುತ್ತಿದ್ದಾರೆ. ಕೊನೆಯಲ್ಲಿ ರಾಹುಲ್ ತೆವಾಟಿಯಾ, ರಶೀದ್ ಖಾನ್ ಪಂದ್ಯದ ಗತಿಯನ್ನ ಬದಲಿಸುತ್ತಿದ್ದಾರೆ.
ಬೌಲಿಂಗ್ ನಲ್ಲಿ ಅಲ್ಜಾರಿ ಜೋಸೆಫ್, ಲೂಕಿ ಫರ್ಗ್ಯೂಸನ್, ಮೊಹ್ಮದ್ ಶಮಿ, ಯಶ್ ದಯಾಳ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ರಶೀದ್ ಖಾನ್ ಬೌಲಿಂಗ್ ನಲ್ಲಿ ಮ್ಯಾಜಿಕ್ ಮಾಡದೇ ಇದ್ದರೂ ತಂಡಕ್ಕೆ ಅನಿವಾರ್ಯವಾಗಿದ್ದಾರೆ. ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯಾ ಕೂಡ ಬೌಲಿಂಗ್ ಮಾಡುವುದರಿಂದ ಬೌಲರ್ ಗಳ ಬದಲಾವಣೆಗೆ ಅನುಕೂಲವಾಗಿದೆ.
ಪಂಜಾಬ್ ಕಿಂಗ್ಸ್ ವಿಚಾರಕ್ಕೆ ಬಂದ್ರೆ ಪ್ಲೇ ಆಫ್ ರೇಸ್ ನಲ್ಲಿರುವ ಪಂಜಾಬ್ ತಂಡದಲ್ಲಿ ಕೊಂಚ ಮಟ್ಟಿನ ಬದಲಾವಣೆಯಾದ್ರೂ ಅಚ್ಚರಿ ಏನಿಲ್ಲ. ಮುಖ್ಯವಾಗಿ ಶಿಖರ್ ಧವನ್ ಫಾರ್ಮ್ ಕಂಡುಕೊಂಡಿರುವುದು ಸಮಧಾನದ ಸಂಗತಿಯಾದ್ರೆ, ನಾಯಕ ಮಯಾಂಕ್ ಅಗರ್ ವಾಲ್ ಇನ್ನೂ ಕೂಡ ದೊಡ್ಡ ಮೊತ್ತದ ರನ್ ದಾಖಲಿಸಿಲ್ಲ. ಆದ್ರೆ ಭಾನುಕಾ ರಾಜಪಕ್ಷೆ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಈ ನಡುವೆ ನೀರಸ ಪ್ರದರ್ಶನ ನೀಡುತ್ತಿದ್ದ ಜಾನಿ ಬೇರ್ ಸ್ಟೋವ್ ಕಳೆದ ಪಂದ್ಯದಲ್ಲಿ ಫಾರ್ಮ್ ಗೆ ಬಂದಿರೋದು ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸದೆ.
ಬೌಲಿಂಗ್ ನಲ್ಲಿ ಆರ್ಶಾದೀಪ್ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಆದ್ರೆ ಕಾಗಿಸೊ ರಬಾಡ ಇನ್ನೂ ಕೂಡ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಿಲ್ಲ. ರಾಹುಲ್ ಚಾಹರ್ ಮತ್ತು ಸಂದೀಪ್ ಶರ್ಮಾ ಕೂಡ ಇನ್ನಷ್ಟು ಲಯ ಮತ್ತು ನಿಖರತೆಯನ್ನು ಕಾಯ್ದುಕೊಳ್ಳಬೇಕಿದೆ.
gt-vs-pbks match preview Gujarat Titans Punjab Kings