IPL 2022 | ಬೇಡದ ದಾಖಲೆಗಳಿಗೆ ಮುನ್ನುಡಿ ಬರೆದ ಮುಂಬೈ
ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಗೆ 15ನೇ ಸೀಸನ್ ಇಂಡಿಯನ್ ಪ್ರಿಮಿಯರ್ ಲೀಗ್ ಅತ್ಯಂತ ನೆನಪುಗಳನ್ನು ಉಳಿಸುತ್ತಿದೆ.
ಈ ಸೀಸನ್ ನಲ್ಲಿ ಅತ್ಯಂತ ಹೀನಾಯವಾಗಿ ಪಂದ್ಯಗಳನ್ನ ಸೋಲುತ್ತಿರುವ ಮುಂಬೈ ಇಂಡಿಯನ್ಸ್ ತಂಡ ತನ್ನ ನೀರಸ ಪ್ರದರ್ಶನದ ಮೂಲಕ ಹಲವು ಮೊದಲುಗಳಿಗೆ ಮುನ್ನುಡಿ ಬರೆದುಕೊಂಡಿದೆ.
ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಪ್ರತಿ ಬಾರಿ ಟೈಟಲ್ ಗೆಲ್ಲುವ ನೆಚ್ಚಿನ ತಂಡ. ಅದರಂತೆ ಮುಂಬೈ ಬರೋಬ್ಬರಿ ಐದು ಬಾರಿ ಐಪಿಎಲ್ ಟೈಟಲ್ ಗೆ ಮುತ್ತಿಟ್ಟಿದೆ.
ಹೀಗಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಐಪಿಎಲ್ ನ ಬಲಿಷ್ಠ ತಂಡ ಅಂತಾ ಕರೆಯಲಾಗುತ್ತದೆ. ತಂಡದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಪೊಲಾರ್ಡ್ ರಂತಹ ಮ್ಯಾಚ್ ವಿನ್ನರ್ ಗಳಿದ್ದಾರೆ.

ಆದ್ರೆ 15 ನೇ ಸೀಸನ್ ನ ಐಪಿಎಲ್ ನಲ್ಲಿ ಮುಂಬೈ ದಯನೀಯ ಸ್ಥಿತಿಯಲ್ಲಿದೆ. ಸತತ ಸೋಲುಗಳನ್ನು ಕಂಡಿರುವ ಮುಂಬೈ, ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.
ತಂಡದ ಈ ಅಸ್ಥಿರ ಪ್ರದರ್ಶನ, ಐಪಿಎಲ್ ಇತಿಹಾಸದಲ್ಲೇ ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ.
ಮುಂಬೈ ಇಂಡಿಯನ್ಸ್ ಅಪಕೀರ್ತಿಗೆ ಕಾರಣವಾದ ಅಂಶಗಳು:
- ಮೊದಲ ಬಾರಿಗೆ ಒಂದು ಸೀಸನ್ನಲ್ಲಿ 9 ಪಂದ್ಯಗಳನ್ನು ಸೋತಿರುವುದು
- ಮೊದಲ ಬಾರಿಗೆ ಒಂದು ಓವರ್ನಲ್ಲಿ 30+ ರನ್ ನೀಡುವುದು
- ಮೊದಲ ಬಾರಿಗೆ ಒಂದು ಓವರ್ನಲ್ಲಿ 4 ಸತತ ಸಿಕ್ಸ್ ನೀಡಿರುವುದು
- ಮೊದಲ ಬಾರಿಗೆ ಒಂದಕ್ಕಿಂತ ಹೆಚ್ಚು ಶತಕ ಬಿಟ್ಟುಕೊಟ್ಟಿರುವುದು
- ಮೊದಲ ಬಾರಿಗೆ ಕಡೆಯ ಬಾಲ್ನಲ್ಲಿ ಬೌಂಡರಿ ಬಿಟ್ಟುಕೊಡದಿರಲು ವಿಫಲವಾಗಿರುವುದು
- ಮೊದಲ ಬಾರಿಗೆ ಸತತವಾಗಿ 5ಕ್ಕಿಂತ ಹೆಚ್ಚು ಪಂದ್ಯ ಸೋತಿರುವುದು
- ಮೊದಲ ಬಾರಿಗೆ ಕೇವಲ ಇಬ್ಬರು ವಿದೇಶಿ ಆಟಗಾರೊಂದಿಗೆ ಆಡಿದ್ದು
- ಮೊದಲ ಬಾರಿಗೆ ಚೇಸಿಂಗ್ನಲ್ಲಿ ಎದುರಾಳಿ ತಂಡಕ್ಕೆ ಫೈನಲ್ ಓವರ್ನಲ್ಲಿ 15 ರನ್ ನೀಡಿರುವುದು
- ಮೊದಲ ಬಾರಿಗೆ ರೋಹಿತ್ ಸಾರಥ್ಯದಲ್ಲಿ ಸತತವಾಗಿ ಪ್ಲೇ-ಆಫ್ಗೆ ಆಯ್ಕೆಯಾಗದಿರುವುದು
- ಮೊದಲ ಬಾರಿಗೆ ಪಂದ್ಯದಲ್ಲಿ ಸೋತರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿರುವುದು
- ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಆಟಗಾರರನನ್ನು 10 ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿಸಿದ್ದು
- ಮೊದಲ ಬಾರಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಸ್ಥಾನದೊಂದಿಗೆ ಸೀಸನ್ ಪೂರ್ಣಗೊಳಿಸಿದ್ದು(ಇನ್ನೂ 3 ಪಂದ್ಯ ಬಾಕಿಯಿದೆ)
ಪ್ರಸಕ್ತ ಸೀಸನ್ ನಲ್ಲಿ 11 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ 9 ಪಂದ್ಯಗಳಲ್ಲಿ ಸೋಲು ಕಂಡಿದೆ.
ಅದರಲ್ಲೂ ಸತತ ಎಂಟು ಪಂದ್ಯಗಳನ್ನ ಸೋತು ಬೇಡವಾದ ದಾಖಲೆಗೆ ಕಾರಣವಾಗಿದೆ.
ರೋಹಿತ್ ಬಳಗ ಈ ಆವೃತ್ತಿಯಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.
ಇದರೊಂದಿಗೆ ನಾಲ್ಕು ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ipl-2022-mumbai indians bad records in ipl








