28 ದಿನಗಳ ಬಳಿಕ ಕರೋನಾ ಸೋಂಕಿನಲ್ಲಿ 2000 ಕ್ಕಿಂತ ಕಡಿಮೆ ಪ್ರಕರಣ ವರದಿ…
ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ಹೊಸ ಕರೋನವೈರಸ್ ಸೋಂಕುಗಳ ದೈನಂದಿನ ಏರಿಕೆಯು 28 ದಿನಗಳ ನಂತರ 2,000 ಕ್ಕಿಂತ ಒಳಗೆ ಕುಸಿದಿದೆ. ಒಟ್ಟು COVID-19 ಪ್ರಕರಣಗಳ ಸಂಖ್ಯೆ 4,31,25,370 ಕ್ಕೆ ತಲುಪಿದೆ, ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 16,400 ಕ್ಕೆ ಕುಸಿದಿದೆ.
24 ಗಂಟೆಗಳ ಅವಧಿಯಲ್ಲಿ ಒಟ್ಟು 1,579 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ ಮತ್ತು 19 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಒಟ್ಟು ಸಾವುಗಳ ಸಂಖ್ಯೆ 5,24,260 ಕ್ಕೆ ಏರಿಕೆಯಾಗಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿಲಾದ ಡೇಟಾ ಪ್ರಕಾರ ತಿಳಿದು ಬಂದಿದೆ.
ಸಕ್ರಿಯ ಪ್ರಕರಣಗಳ ಒಟ್ಟು ಸೋಂಕುಗಳಲ್ಲಿ 0.04 % ಒಳಗೊಂಡಿದೆ.
ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ 191.48 ಕೋಟಿ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಸಿದೆ.
Active COVID-19 cases dip to 16,400








