RCB | ರಜತ್ ಪಟಿದಾರ್ ಬಗ್ಗೆ ದಿನೇಶ್ ಮೆಚ್ಚುಗೆ
ಎಲಿಮಿನೇಟರ್ ನಂತಹ ಬಿಗ್ ಮ್ಯಾಚ್ ಗಳಲ್ಲಿ ಬಿಗ್ ಇನ್ನಿಂಗ್ಸ್ ಕಟ್ಟಿದ ಆರ್ ಸಿಬಿಯ ಆಟಗಾರ ರಜತ್ ಪಟಿದಾರ್ ಬಗ್ಗೆ ಹಿರಿಯ ಕ್ರಿಕೆಟಿಗರು ಮೆಚ್ಚುಗೆಯ ಸುರಿಮಳೆಗೈಯುತ್ತಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಪಟಿದಾರ್ 54 ಎಸೆತಗಳಲ್ಲಿ 112 ರನ್ ಗಳಿಸಿದರು. ಆ ಮೂಲಕ ಪಂದ್ಯದಲ್ಲಿ ಆರ್ ಸಿಬಿ ಗೆಲ್ಲಲು ಪ್ರಮುಖ ಪಾತ್ರವಹಿಸಿದರು.

ಈ ಹಿನ್ನೆಲೆಯಲ್ಲಿ ಆರ್ ಸಿಬಿ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ರಜತ್ ಪಟಿದಾರ್ ಪ್ರದರ್ಶನವನ್ನು ಹಾಡಿ ಹೊಗಳಿದ್ದಾರೆ. ನಾನು ನೋಡಿದ ಬೆಸ್ಟ್ ಇನ್ನಿಂಗ್ಸ್ ಇದು.
ಒಬ್ಬ ಅನ್ ಕ್ಯಾಪ್ಡ್ ಪ್ಲೇಯರ್ ಈ ರೀತಿ ಆಡಿದ್ದು, ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಔಟ್ ಸ್ಟಾಡಿಂಗ್ ಪ್ರದರ್ಶನ. ರಜತ್ ಪಟಿದಾರ್ ಆ ರೀತಿಯ ಪ್ರದರ್ಶನದಿಂದ ನನ್ನ ಮೇಲಿನ ಒತ್ತಡ ಕಡಿಮೆ ಆಯ್ತು ಎಂದಿದ್ದಾರೆ.








