Bangalore | ನಲಪಾಡ್ ಪಡೆದ ಶಿಕ್ಷಣದ ಪದವಿಗಿಂತ ಐಪಿಸಿ ಸೆಕ್ಷನ್ ಕೇಸುಗಳೇ ಜಾಸ್ತಿ
ಬೆಂಗಳೂರು : ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಪಡೆದ ಶಿಕ್ಷಣದ ಪದವಿಗಿಂತ ಐಪಿಸಿ ಸೆಕ್ಷನ್ ಕೇಸುಗಳೇ ಜಾಸ್ತಿ ಇದೆ ಎಂದು ರಾಜ್ಯ ಬಿಜೆಪಿ ಕುಟುಕಿದೆ.
ಸಚಿವ ಬಿ.ಸಿ.ನಾಗೇಶ್ ಮನೆ ಮೇಲೆ ಎನ್ ಎಸ್ ಯುಐ ದಾಳಿ ವಿಚಾರವಾಗಿ ಬಿಜೆಪಿ ಟ್ವೀಟ್ ಮಾಡಿದ್ದು, ತುಮಕೂರಿನಲ್ಲಿ ಶಿಕ್ಷಣ ಮಂತ್ರಿಗಳ ಮನೆಗೆ ನುಗ್ಗಿ ದಾoಧಲೆ ಎಬ್ಬಿಸಿದ ಎನ್‌ಎಸ್‌ಯುಐ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ.

ಈ ಗಲಭೇಕೋರರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರೇರಣೆಯೇ? ಈ ಮರಿರೌಡಿಗಳು ಕಾಂಗ್ರೆಸ್ ಪಕ್ಷ ಸೇರಿಕೊಂಡರೆ ರಾಜ್ಯದ ಗತಿ ಏನಾಗಬಹುದು?
ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಪಡೆದ ಶಿಕ್ಷಣದ ಪದವಿಗಿಂತ ಐಪಿಸಿ ಸೆಕ್ಷನ್ ಕೇಸುಗಳೇ ಜಾಸ್ತಿ ಇದೆ. ಮೃಗಿಯ ವರ್ತನೆಯವರನ್ನು ಕಾಂಗ್ರೆಸ್ ಪಕ್ಷ ಯುವ ಘಟಕಕ್ಕೆ ನೇಮಿಸಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಪಡೆದ ಶಿಕ್ಷಣದ ಪದವಿಗಿಂತ ಐಪಿಸಿ ಸೆಕ್ಷನ್ ಕೇಸುಗಳೇ ಜಾಸ್ತಿ ಇದೆ.
ಮೃಗಿಯ ವರ್ತನೆಯವರನ್ನು ಕಾಂಗ್ರೆಸ್ ಪಕ್ಷ ಯುವ ಘಟಕಕ್ಕೆ ನೇಮಿಸಿದೆ.
ಇವರಿಂದ ಪ್ರೇರಣೆ ಪಡೆದ ಎನ್‌ಎಸ್‌ಯುಐ ಸಂಘಟನೆ ಸಚಿವರ ಮನೆಗೆ ನುಗ್ಗಿ ದಾಂಧಲೆ ನಡೆಸಿದೆ.
ಯಥಾ ಪಕ್ಷದ ಮುಖ್ಯಸ್ಥ, ತಥಾ ಕಾರ್ಯಕರ್ತ!#ಗೂಂಡಾಕಾಂಗ್ರೆಸ್
— BJP Karnataka (@BJP4Karnataka) June 2, 2022
ಇವರಿಂದ ಪ್ರೇರಣೆ ಪಡೆದ ಎನ್‌ಎಸ್‌ಯುಐ ಸಂಘಟನೆ ಸಚಿವರ ಮನೆಗೆ ನುಗ್ಗಿ ದಾಂಧಲೆ ನಡೆಸಿದೆ. ಯಥಾ ಪಕ್ಷದ ಮುಖ್ಯಸ್ಥ, ತಥಾ ಕಾರ್ಯಕರ್ತ!
ಕನಕಪುರದಲ್ಲಿ ಭಯದ ವಾತಾವರಣ ಹುಟ್ಟಿಸಿ, ಅಕ್ರಮ ಹಣದ ವಹಿವಾಟು ನಡೆಸಿ ತಿಹಾರ್ ಜೈಲುವಾಸ ಮುಗಿಸಿ ಬಂದವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿಸಿದರು.
ಮಾರಣಾಂತಿ ಹಲ್ಲೆ ಮಾಡಿ ಜೈಲು ವಾಸ ಮುಗಿಸಿ ಬಂದವರನ್ನು ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿದರು. ಸಚಿವರ ಮನೆಮೇಲೆ ದಾಳಿ ಮಾಡಿದವರಿಗೆ ಯಾವ ಹುದ್ದೆ ತಯಾರಿದೆ ಎಂದು ಪ್ರಶ್ನಿಸಿದ್ದಾರೆ.








