2 ಕಪ್ ಓಟ್ಸ್
1 ಚಮಚ ಎಣ್ಣೆ
1 ಟೀಸ್ಪೂನ್ ಸಾಸಿವೆ ಬೀಜಗಳು
1 ಟೀಸ್ಪೂನ್ ಕಡಲೆ ಬೇಳೆ
1 ಟೀಸ್ಪೂನ್ ಉದ್ದಿನ ಬೇಳೆ
1/2 ಟೀಸ್ಪೂನ್ ಅರಿಶಿನ ಪುಡಿ
1 ಹಸಿರು ಮೆಣಸಿನಕಾಯಿ
1 ಕಪ್ ಸಣ್ಣದಾಗಿ ಹೆಚ್ಚಿದ ಕ್ಯಾರೆಟ್
1/2 ಕಪ್ ಹೆಚ್ಚಿದ ಕೊತ್ತಂಬರಿ ಸೊಪ್ಪು
2 ಕಪ್ ಮೊಸರು
ಉಪ್ಪು
ಬಾಣಲೆಯಲ್ಲಿ 2 ಕಪ್ ಓಟ್ಸ್ ತೆಗೆದುಕೊಂಡು ಕಂದು ಬಣ್ಣಕ್ಕೆ ತಿರುಗುವ ವರೆಗೂ ಸುಮಾರು 5 ನಿಮಿಷಗಳ ಕಾಲ ಹುರಿಯಿರಿ. ನಂತರ ಅದನ್ನ ತಣ್ಣಗಾಗಲು ಬಿಡಿ… ಬಳಿಕ ಅದನ್ನು ಗ್ರೈಂಡರ್ ನಲ್ಲಿ ರುಬ್ಬಿ ನುಣ್ಣಗೆ ಪುಡಿ ಮಾಡಿ ಮಾಡಿಕೊಳ್ಳಿ,,
ಅಗಲವಾದ ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಸಾಸಿವೆಯನ್ನು ಹಾಕಿ ಸಿಡಿಯಲು ಬಿಡಿ.
ಈಗ ಕಡಲೆಬೇಳೆ ಮತ್ತು ಉದ್ದಿನಬೇಳೆ, ಅರಿಶಿನ ಪುಡಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
ಕತ್ತರಿಸಿದ ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಒಂದು ಚಿಟುಕೆ ಉಪ್ಪು ಹಾಕಿ ಎಲ್ಲಾ ಪದಾರ್ಥಗಳನ್ನು ಸಂಪೂರ್ಣವಾಗಿ ಸೇರಿಸಿ ಮತ್ತು ಒಂದು ನಿಮಿಷ ಅಥವಾ ಎರಡು ನಿಮಿಷ ಬೇಯಿಸಿ.
ಇಡ್ಲಿ ಹಿಟ್ಟಿಗೆ ಸೇರಿಸುವ ಮೊದಲು ಮಿಶ್ರಣವನ್ನು ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.
ತಯಾರಾದ ಓಟ್ಸ್ ಪುಡಿಯನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ.
ಇದಕ್ಕೆ ಉಪ್ಪು ಮತ್ತು ಹುರಿದ ಮಿಶ್ರಣವನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ..
ಈಗ ಅಗತ್ಯವಿರುವ ಪ್ರಮಾಣದ ಮೊಸರು ಸೇರಿಸಿ ಮತ್ತು ಅದಕ್ಕೆ ಒಂದು ಚಿಟಿಕೆ ಫ್ರೂಟ್ ಸಾಲ್ಟ್ ಬೇಕಿದ್ದರೆ ಸೇರಿಸಿ.. ಚನ್ನಾಗಿ ಮಿಶ್ರಣ ಮಾಡಿಕೊಳ್ಳಿ..
ಮಧ್ಯಮ ದಪ್ಪದ ಹಿಟ್ಟನ್ನು ತಯಾರಿಸಿ ಮತ್ತು ಅದನ್ನು ಕೆಲವು ನಿಮಿಷಗಳ ಕಾಲ ಮುಚ್ಚಿಡಿ.
ಈಗ ಇಡ್ಲಿ ಪಾತ್ರೆಯ ತಟ್ಟೆಗಳಿಗೆ ತುಪ್ಪ ಅಥವ ಎಣ್ಣೆ ಸವರಿಕೊಳ್ಳಿ..
ಸಿದ್ಧಪಡಿಸಿದ ಓಟ್ಸ್ ಇಡ್ಲಿ ಹಿಟ್ಟನ್ನು ಪ್ರತಿ ಅಚ್ಚಿನಲ್ಲಿ ಸುರಿಯಿರಿ ಮತ್ತು ಸ್ಟೀಮರ್ನಲ್ಲಿ ಹಾಕಿ.
ಮಧ್ಯಮ ಉರಿಯಲ್ಲಿ ಸುಮಾರು 15 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಲು ಬಿಡಿ..
15 ನಿಮಿಷಗಳ ನಂತರ ಇಡ್ಲಿಗಳು ಸರಿಯಾಗಿ ಬೇಯಿವೆಯೇ ಎಂದು ಪರಿಶೀಲಿಸಿ.
ಟೇಸ್ಟಿ ಮತ್ತು ಆರೋಗ್ಯಕರ ಓಟ್ಸ್ ಇಡ್ಲಿ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಿರಿ..








