ಹೆಂಡತಿ ಜಮೀನು ಮಾರಲು ಒಪ್ಪದಿದ್ದಕ್ಕೆ ಮಕ್ಕಳಿಗೆ ವಿಷ ಉಣಿಸಿದ ತಂದೆ…
ಜಮೀನು ಮಾರಲು ಹಂಡತಿ ಒಪ್ಪದಿದ್ದಕ್ಕೆ ಕುಪಿತಗೊಂಡ ತಂದೆ ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ತಿನ್ನಿಸಿದ್ದಾನೆ. ಪುತ್ರ ಸಾವನ್ನಪ್ಪಿದ್ದು, ಪುತ್ರಿಯ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.
2 ವರ್ಷದ ಶಿವರಾಜ್ ಅರಸನಾಳ ಮೃತ ದುರ್ದೈವಿ ಮಗು. ಆರೋಪಿ ತಂದೆ ಚಂದ್ರಶೇಖರ್ ಅರಸನಾಳ ಮೈತುಂಬ ಸಾಲಮಾಡಿಕೊಂಡಿದ್ದನು. ಹಾಗಾಗಿ ತನ್ನ ಪತ್ನಿಗೆ ಜಮೀನು ಮಾರಾಟ ಮಾಡುವಂತೆ ಒತ್ತಾಯಸುತ್ತಿದ್ದ. ಹೆಂಡತಿ ಜಮೀನು ಮಾರಾಟಕ್ಕೆ ಒಪ್ಪದ ಹಿನ್ನಲೆ ಕುಪಿತಗೊಂಡು ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ಮಗ ಹಾಗೂ ಮಗಳಿಗೆ ಉಣ್ಣಿಸಿದ್ದಾನೆ. ಇದರ ಪರಿಣಾಮವಾಗಿ ಗಂಡು ಮಗುವೊಂದು ಸಾವನ್ನಪ್ಪಿದ್ದು, ಮಗಳು ರೇಣುಕಾ (5) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವಳ ಸ್ಥಿತಿ ಗಂಭೀರವಾಗಿದೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








