Covid19
ರಾಜ್ಯದಲ್ಲಿ ಮತ್ತೆ ಟಫ್ ಕೋವಿಡ್ ರೂಲ್ಸ್
ದೇಶದಲ್ಲಿ ಹೆಚ್ಚಾಗ್ತಿರೋ ಕೊನರೋನಾ ಕೇಸ್
ಮಾಸ್ಕ್ ಕಡ್ಡಾಯ , ರಾಜ್ಯ ಸರ್ಕಾರ ಆದೇಶ
ದೈನಂದಿನ ಕೇಸ್ ಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ
ನಿನ್ನೆ ಬೆಂಗಳೂರಿನಲ್ಲಿ 458 ಹೊಸ ಪ್ರಕರಣಗಳು ಪತ್ತೆ
ಕೆಲ ದಿನಗಳಿಂದ ಕೊರೊನಾ ಟೆನ್ಷನ್ ಕಡಿಮೆ ಆಗ್ಬಿಟ್ಟಿತ್ತು.. ಮಾಸ್ಕ್ ಬಗ್ಗೆ ಅಂತೂ ಎಲ್ರೂ ಮರೆತೇ ಬಿಟ್ಟಿದ್ದರು.. ಆದ್ರೀಗ ಮತ್ತೆ ಟಫ್ ರೂಲ್ಸ್ ಬರುರತ್ತಿದೆ.. ಭಾರತದಲ್ಲಿ ದಿನೇ ದಿನೇ ದೈನಂದಿನ ಕೇಸ್ ಗಳು ಹೆಚ್ಚಾಗ್ತಿದೆ.. ಈ ಹಿನ್ನೆಲೆ ರಾಜ್ಯದಲ್ಲೂ ಸರ್ಕಾರ ಅಲರ್ಟ್ ಆಗಿದ್ದು ಮತ್ತೊಮ್ಮೆ ಖಡಕ್ ರೂಲ್ಸ್ ತಂದಿದ್ದು ಫಾಲೋ ಮಾಡುವಂತೆ ಸೂಚನೆ ನೀಡಿದೆ..
ಹೌದು..! ರಾಜ್ಯದಲ್ಲಿ ಮತ್ತೆ ಕಠಿಣ ನಿಯಮ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯಾದ್ಯಂತ ಮತ್ತೆ ಕಡ್ಡಾಯವಾಗಿ ಜನರು ಮಾಸ್ಕ್ ಧರಿಸಲೇ ಬೇಕು ಅಂತ ಆರೋಗ್ಯ ಇಲಾಖೆ ಆದೇಶಿಸಿದೆ. ದೈನಂದಿನ ಪ್ರಕರಣಗಳು ಕಳೆದ 99 ದಿನಗಳಲ್ಲಿ ಇದೇ ಮೊದಲ ಬಾರಿಗೆ 7,000ಕ್ಕೆ ತಲುಪಿದೆ. 7 ದಿನಗಳ ಸರಾಸರಿಯು 10 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ದುಪ್ಪಟ್ಟಾಗಿರೋದು ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಗುರುವಾರ 458 ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ. ಹಿಂದಿನ ದಿನಕ್ಕಿಂತ ಸುಮಾರು 100 ಪ್ರಕರಣಗಳು ಹೆಚ್ಚಿಗೆ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.. ರಾಜ್ಯದಲ್ಲಿ ಮತ್ತೆ ಕಠಿಣ ನಿಯಮ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯಾದ್ಯಂತ ಮತ್ತೆ ಕಡ್ಡಾಯವಾಗಿ ಜನರು ಮಾಸ್ಕ್ ಧರಿಸಲೇ ಬೇಕು ಅಂತ ಆರೋಗ್ಯ ಇಲಾಖೆ ಆದೇಶಿಸಿದೆ.
ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಸಲಾಗಿದೆ. ಈ ಕ್ರಮವನ್ನು ಜಾರಿಗೊಳಿಸಲು ಮಾರ್ಷಲ್ ಅಥವಾ ಪೋಲೀಸ್ ಸಿಬ್ಬಂದಿಗಳ ಸಹಾಯವನ್ನು ಪಡೆಯಲು ಸೂಚಿಸಲಾಗಿದೆ.
ಶಾಪಿಂಗ್ ಮಾಲ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು, ಕೆಫೆಟೀರಿಯಾ, ಹೊಟೇಲ್‌ಗಳು, ಶೈಕ್ಷಣಿಕ ಸಂಸ್ಥೆಗಳು, ಹಾಸ್ಟೆಲ್‌ಗಳು, ಕಛೇರಿಗಳು, ಕಾರ್ಖಾನೆ ಇತ್ಯಾದಿ ಪ್ರದೇಶಗಳಲ್ಲಿ ಸಿಬ್ಬಂದಿಗಳು ಹಾಗೂ ಸಾರ್ವಜನಿತರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ಪ್ರದೇಶಗಳಿಗೆ ಮಾಸ್ಕ್ ಧರಿಸಿ ಬರುವರಿಗೆ ಮಾತ್ರವೇ ಪ್ರವೇಶ ನೀಡುವಂತೆ ಸೂಚಿಸಲಾಗಿದೆ. ಮಾಸ್ಕ್ ಧರಿಸುವಂತೆ ನೋಡಿಕೊಳ್ಳುವುದು ಆಯಾ ಸಂಸ್ಥೆಯ ಮಾಲೀಕರು ಅಥವಾ ಆಡಳಿತಗಳ ಜವಾಬ್ದಾರಿಯಾಗಿರುತ್ತದೆ ಅಂತ ಸರ್ಕಾರ ಹೇಳಿದೆ.